ಕೊರೋನಾ ಕಾಟ: ಅವ್ಯವಸ್ಥೆಗಳ ಆಗರವಾದ ಕ್ವಾರಂಟೈನ್‌ ಕೇಂದ್ರ

ಕ್ವಾರಂಟೈನ್‌ ಕೇಂದ್ರ ಮಾಡಿರುವ ಹಾಸ್ಟೆಲ್‌ನಲ್ಲಿ ಸೌಲಭ್ಯಗಳ ಕೊರತೆ| ಕ್ವಾರಂಟೈನ್‌ ಕೇಂದ್ರದಲ್ಲಿ ಸೂಕ್ತ ಮೂಲಭೂತ ವ್ಯವಸ್ಥೆಗಳೇ ಇಲ್ಲ| ಮೂವತ್ತು ಮಂದಿಗೆಂದು ಕೇವಲ 6 ಶೌಚಾಲಯಗಳಿದ್ದರೂ ಸ್ವಚ್ಛ ಮಾಡುತ್ತಿಲ್ಲ. ಕೇವಲ ಎರಡು ಮಾತ್ರ ಬಳಕೆಗೆ ಸೂಕ್ತವಾಗಿವೆ|

Persons Faces Problems in Quarantine Center in Vijayapura in Bengaluru Rural District

ವಿಜಯಪುರ(ಜೂ.22): ವಿಶ್ವವ್ಯಾಪಿ ಕೊರೋನಾ ಜನರಲ್ಲಿ ಸಾಕಷ್ಟು ಭಯ ಹುಟ್ಟಿಸಿದ್ದು, ಸೋಂಕಿತರ ಕಷ್ಟ ಒಂದು ರೀತಿಯಾದರೆ ಸೋಂಕಿತರ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡುವ ಸ್ಥಳದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.
ರಾಜ್ಯದೆಲ್ಲೆಡೆ ಸೋಂಕಿತರ ಸಂಪರ್ಕಿತರನ್ನು ಕ್ವಾರೆಂಟೈನ್‌ ಮಾಡುವ ವ್ಯವಸ್ಥೆ ಬಗ್ಗೆ ದೂರುಗಳು ಕೇಳಿಬಂದಿದ್ದು, ಅನೇಕ ಕಡೆಯಲ್ಲಿ ಮೂಲಸೌಕರ್ಯಗಳೂ ಇಲ್ಲದ ಬಿಲ್ಡಿಂಗ್‌ಗಳಲ್ಲಿ ಕ್ವಾರೆಂಟೈನ್‌ ಮಾಡಲಾಗಿದೆ. ಅದಕ್ಕೆ ಇಲ್ಲಿನ ಬಸಪ್ಪತೋಪಿನಲ್ಲಿರುವ ಸಾರ್ವಜನಿಕ ಮೆಟ್ರಿಕ್‌ ನಂತರದ ಬಾಲಕರ ಉಚಿತ ವಿದ್ಯಾರ್ಥಿನಿಲಯವೂ ಹೊರತಾಗಿಲ್ಲ.

ಕ್ವಾರಂಟೈನ್‌ನಲ್ಲಿ 30 ಮಂದಿ

ಎರಡನೇ ಲಾಕ್‌ಡೌನ್‌ ನಂತರದಲ್ಲಿ ವಿದ್ಯಾರ್ಥಿನಿಲಯವನ್ನು ಕ್ವಾರಂಟೈನ್‌ ಕೇಂದ್ರವನ್ನಾಗಿ ಮಾಡಿದ್ದು ಅಲ್ಲಿಂದೀಚೆಗೆ ಅಲ್ಲಿ ಕ್ವಾರೆಂಟೈನ್‌ ಆಗಿ ಬಂದವರು, ಅಲ್ಲಿರುವವರು ಅನುಭವಿಸಿದ ಕಷ್ಟಗಳು ನೂರೆಂಟು.
ಪಟ್ಟಣದಲ್ಲಿ ಈಗಾಗಲೇ ಎರಡು ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು ಎರಡೂ ಕೇಸ್‌ನ ಸೋಂಕಿತ ವ್ಯಕ್ತಿಯ ಸಂಪರ್ಕಿತರು, ವಟಾರದಲ್ಲಿನ ಮನೆಗಳಲ್ಲಿ ವಾಸಿಸುವರನ್ನು ಇಲ್ಲಿ ತಂದಿರಿಸಲಾಗಿದೆ. ಪ್ರಸ್ತುತ ಕ್ವಾರಂಟೈನ್‌ ಕೇಂದ್ರದಲ್ಲಿ 30 ಮಂದಿ ಇದ್ದಾರೆ.

ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಕೊರೋನಾ ಭೀತಿ

ಈಗ ಕ್ವಾರಂಟೈನ್‌ನಲ್ಲಿರುವವರು ಹೇಳುವ ಪ್ರಕಾರ ಕ್ವಾರಂಟೈನ್‌ ಕೇಂದ್ರದಲ್ಲಿ ಸೂಕ್ತ ಮೂಲಭೂತ ವ್ಯವಸ್ಥೆಗಳೇ ಇಲ್ಲ. ಮೂವತ್ತು ಮಂದಿಗೆಂದು ಕೇವಲ 6 ಶೌಚಾಲಯಗಳಿದ್ದರೂ ಸ್ವಚ್ಛ ಮಾಡುತ್ತಿಲ್ಲ. ಕೇವಲ ಎರಡು ಮಾತ್ರ ಬಳಕೆಗೆ ಸೂಕ್ತವಾಗಿವೆ. ಸೋಂಕಿತರ ಪ್ರಾಥಮಿಕ ಸಂಪರ್ಕ, ದ್ವಿತೀಯ ಸಂಪರ್ಕಿತರೆಲ್ಲರೂ ಅದನ್ನೇ ಬಳಸಬೇಕಿದ್ದು, ಒಬ್ಬರಿಗೆ ಸೋಂಕು ಇದ್ದರೂ ಎಲ್ಲರಿಗೂ ಹರಡುವುದರಿಂದ ಇಲ್ಲದ ಕಾಯಿಲೆಯನ್ನು ತಂದುಕೊಳ್ಳಲು ಇಲ್ಲಿಗೆ ಸೇರುವಂತಾಗಿದೆ.

ಕಟ್ಟಡದಲ್ಲಿ ಹಾವುಗಳ ಕಾಟ

ವಿದ್ಯಾರ್ಥಿನಿಲಯವು ಊರ ಹೊರಗೆ ಇದ್ದು ಸುತ್ತಲೂ ಮರಗಳು, ಗಿಡಗೆಂಟೆಗಳಿವೆ. ಬೆಳಿಗ್ಗೆ ವೇಳೆಯಲ್ಲಿಯೇ ಕ್ವಾರಂಟೈನ್‌ ಕೇಂದ್ರದಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಅಲ್ಲಿನ ತಾತ್ಕಾಲಿಕ ವಾಸಿಗಳಿಗೆ ಆತಂಕ ತಂದಿದೆ. ಒಳಗೂ ಸಿಗರೇಟ್‌ಪಾಕೆಟ್‌, ಕಸಕಡ್ಡಿ, ವಾಟರ್‌ಬಾಟಲ್‌, ಚಪ್ಪಲಿಗಳು, ರೂಂಗಳಲ್ಲಿ ಹರಡಿದ್ದು ಕಸ ಎತ್ತುವವರಿಲ್ಲದೇ ಸ್ವಚ್ಛತೆಯು ಇಲ್ಲವಾಗಿದೆ.

ಸ್ಯಾನಿಟೈಸರ್‌, ಗ್ಲೌಸ್‌ ಕೊರತೆ:

ಕ್ವಾರಂಟೈನ್‌ ಕೇಂದ್ರದಲ್ಲಿ ಸ್ಯಾನಿಟೈಸರ್‌ ಕೊರತೆಯಿದ್ದು ಸಂಪರ್ಕಿತರು ಮನೆಯಿಂದ ತೆಗೆದುಕೊಂಡು ಹೋದರೆ ಮಾತ್ರ ಸಾಧ್ಯ. ಸರ್ಜಿಕಲ್‌ ಡಿಸ್ಪೋಸಬಲ್‌ ಮಾಸ್ಕ್‌ಗಳನ್ನು ಕಾಟಾಚಾರಕ್ಕೆ ಕೊಡುತ್ತಿದ್ದು ಗ್ಲೌಸ್‌ಗಳನ್ನು ವಿತರಿಸಲಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
 

Latest Videos
Follow Us:
Download App:
  • android
  • ios