ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಅಬ್ದುಲ್ ಎಂಬುವರು ಪದ್ಮಭೂಷಣ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮದ ಅಭಿವೃದ್ಧಿಗಾಗಿ 12 ವರ್ಷದಿಂದ ಹೋರಾಟ ಮಾಡಿರೋದಾಗಿ ಅಬ್ದುಲ್ ಖಾದರ್ ಸಾಬ್ ಹೇಳಿದ್ದಾರೆ. 

ಗದಗ(ಸೆ.30):  ಜನತಾ ದರ್ಶನದಲ್ಲಿ ವ್ಯಕ್ತಿಯೊಬ್ಬರು ಪದ್ಮಭೂಷಣ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ ಪ್ರಸಂಗ ಇಂದು(ಶನಿವಾರ) ನಗರದಲ್ಲಿ ನಡೆದಿದೆ. ಇಂದು ಗದಗನಲ್ಲಿ ನಡೆದ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಸಾಬ್ ಎಂಬುವರು ಪದ್ಮಭೂಷಣ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಶಸ್ತಿ ಅರ್ಜಿ ಸ್ವೀಕರಿಸಿದ ಸಚಿವ ಎಚ್.ಕೆ. ಪಾಟೀಲ್‌ ಕೆಲಕಾಲ ವಿಚಲಿತರಾಗಿದ್ದಾರೆ. 

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಅಬ್ದುಲ್ ಎಂಬುವರು ಪದ್ಮಭೂಷಣ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮದ ಅಭಿವೃದ್ಧಿಗಾಗಿ 12 ವರ್ಷದಿಂದ ಹೋರಾಟ ಮಾಡಿರೋದಾಗಿ ಅಬ್ದುಲ್ ಖಾದರ್ ಸಾಬ್ ಹೇಳಿದ್ದಾರೆ. ಇವರ ಮಾತು ಕೇಳಿದ ಸಚಿವ ಎಚ್.ಕೆ. ಪಾಟೀಲ್‌ ಅವರು, ಸಮಾಜ ಸೇವೆ ಮಾಡುವವರು ಪ್ರಶಸ್ತಿ ಕೇಳಬಾರದು ಎಂದು ಹೇಳಿದ್ದಾರೆ.

ಗದಗ: ವಿಸರ್ಜನೆಯಾದ ಗಣೇಶ ಮೂರ್ತಿ ಚರಂಡಿಯಲ್ಲಿ..!

ಗ್ರಾಮದ ಅಭಿವೃದ್ಧಿಗಾಗಿ 12 ವರ್ಷದಿಂದ ಹೋರಾಟ ಹಾಗೂ ಗ್ರಾಮದಲ್ಲಿ ರಸ್ತೆ, ಮೂಲ ಸೌಕರ್ಯ ಕಲ್ಪಿಸಲು ಹೋರಾಟ ಮಾಡಿದ್ದೇನೆ‌. ಹೀಗಾಗಿ ಸಕೇಂದ್ರ ಸರ್ಕಾರಕ್ಕೆ ನನ್ನ ಹೆಸರು ಶಿಫಾರಸು ಮಾಡುವಂತೆ ಸಚಿವ ಎಚ್.ಕೆ. ಪಾಟೀಲ್‌ ಅವರಿಗೆ ಅಬ್ದುಲ್ ಖಾದರ್ ಸಾಬ್ ಮನವಿ ಮಾಡಿಕೊಂಡಿದ್ದಾರೆ. 

ಅಬ್ದುಲ್ ಖಾದರ್ ಸಾಬ್ ಮಾತು ಕೇಳಿ ಸಭೆಯಲ್ಲಿದ್ದ ನೆರೆದಿದ್ದ ಜನ ನಕ್ಕಿದ್ದಾರೆ. ಜಿಲ್ಲಾಮಟ್ಟದ ಪ್ರಶಸ್ತಿಗೆ ಪರಿಗಣಿಸಲು ಪ್ರಯತ್ನಿಸೋದಾಗಿ ಸಚಿವ ಎಚ್.ಕೆ. ಪಾಟೀಲ್‌ ಹೇಳಿದ್ದಾರೆ. ಸಚಿವರ ಮಾತು ಕೇಳಿದ ಅಬ್ದುಲ್ ಖಾದರ್ ಸಾಬ್ ಅವರು ವೇದಿಕೆಯಿಂದ ಕೆಳಗಿಳಿದಿದ್ದಾರೆ.