Asianet Suvarna News Asianet Suvarna News

ಗದಗ: ವಿಸರ್ಜನೆಯಾದ ಗಣೇಶ ಮೂರ್ತಿ ಚರಂಡಿಯಲ್ಲಿ..!

ಚರಂಡಿಗೆ ಗಣಪತಿ ಮೂರ್ತಿಗಳನ್ನು ಎಸೆಯುತ್ತಾರೆ ಎಂದು ಗೊತ್ತಾಗಿದ್ದರೆ ನಾವು ಪುರಸಭೆಯವರು ಇರಿಟ್ಟಿದ್ದ ಬ್ಯಾರಲ್‌ಗಳಲ್ಲಿ ಗಣಪತಿ ವಿಸರ್ಜನೆ ಮಾಡುತ್ತಿರಲಿಲ್ಲ. ಕರ್ತವ್ಯ ಪ್ರಜ್ಞೆ, ಸಾರ್ವಜನಿಕರ ಭಕ್ತಿ ಹಾಗೂ ಭಾವನೆಗೆ ಬೆಲೆ ನೀಡಲಾಗದಿದ್ದರೆ ಇಂತಹ ಕೃತಕ ಹೊಂಡಗಳನ್ನು ಪುರಸಭೆ ನಿರ್ಮಿಸುವ ಅವಶ್ಯಕತೆ ಏನಿತ್ತು? ಎಂಬುದು ಬಡಾವಣೆಯ ನಿವಾಸಿಗಳು ಪ್ರಶ್ನೆಯಾಗಿದೆ.
 

Dissolved Ganesha Idol in Drain at Gajendragad in Gadag grg
Author
First Published Sep 24, 2023, 10:15 PM IST

ಗಜೇಂದ್ರಗಡ(ಸೆ.24): ಇಲ್ಲಿಯ ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಕೃತಕ ಹೊಂಡಗಳಲ್ಲಿ ಸಾರ್ವಜನಿಕರು ಶುಕ್ರವಾರ ವಿಸರ್ಜಿಸಿದ್ದರು. ಬಳಿದ ಪುರಸಭೆ ಸಿಬ್ಬಂದಿ ಈ ಮೂರ್ತಿಗಳನ್ನು ಚರಂಡಿಯಲ್ಲಿ ಎಸೆದಿರುವುದು ಪತ್ತೆಯಾಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ಕೇಳಿಬಂದಿದೆ.

ಪಟ್ಟಣದಲ್ಲಿ ೭ ಸ್ಥಳಗಳಲ್ಲಿ ಗಣಪತಿ ವಿಸರ್ಜನೆಗಾಗಿ ನಿರ್ಮಿಸಿದ್ದ ಕೃತಕ ಹೊಂಡದ ಪೈಕಿ ಇಲ್ಲಿನ ೨೨ನೇ ವಾರ್ಡಿನ ಜವಳಿ ಪ್ಲಾಟ್‌ನಲ್ಲಿಯೂ ಸಹ ಪುರಸಭೆ ಅಧಿಕಾರಿಗಳು ನಿರ್ಮಿಸಿದ್ದ ಕೃತಕ ಹೊಂಡದಲ್ಲಿ ವಾರ್ಡಿನ ನಿವಾಸಿಗಳು ಪೂಜೆ, ಪುನಸ್ಕಾರದ ನಂತರ ಗಣಪತಿ ವಿಸರ್ಜನೆ ಮಾಡಿದ್ದರು. ಆದರೆ, ಶನಿವಾರ ಬೆಳಗ್ಗೆ ಜವಳಿ ಪ್ಲಾಟನಲ್ಲಿನ ರಂಗ್ರೇಜ್ ಆಸ್ಪತ್ರೆಯ ಹಿಂದಿನ ಚರಂಡಿಯಲ್ಲಿ ಆ ಗಣಪತಿ ಮೂರ್ತಿಗಳು ಪತ್ತೆಯಾಗಿದ್ದನ್ನು ಕಂಡು ಪುರಸಭೆ ವಿರುದ್ಧ ವಾರ್ಡಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಗಾರು ಮಳೆ ಕೊರತೆ: ಮಳೆಗಾಲದಲ್ಲೇ ಕೃಷಿ ಹೊಂಡ ಖಾಲಿ ಖಾಲಿ, ಸಂಕಷ್ಟದಲ್ಲಿ ಅನ್ನದಾತ..!

ಜವಳಿ ಪ್ಲಾಟಿನಲ್ಲಿ ನಿರ್ಮಿಸಿರುವ ಕೃತಕ ಹೊಂಡದಲ್ಲಿ (೫ ಬ್ಯಾರಲ್‌ಗಳಲ್ಲಿ) ಬಡಾವಣೆಯ ನಿವಾಸಿಗಳು ಶುಕ್ರವಾರ ರಾತ್ರಿ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಿದ್ದರು. ಈ ಬ್ಯಾರಲ್‌ಗಳಲ್ಲಿನ ಗಣಪತಿ ಮೂರ್ತಿಗಳನ್ನು ಬಾವಿ ಅಥವಾ ಕೆರೆಯಲ್ಲಿ ವಿಸರ್ಜಿಸುತ್ತಾರೆ ಎನ್ನುವ ಭಾವನೆ ನಮ್ಮಲ್ಲಿತ್ತು. ಆದರೆ ಅಧಿಕಾರಿಗಳು ತಿಳಿದು ಅಥವಾ ತಿಳಯದೆ ಮಾಡಿದ್ದಾರೋ ನಮಗೆ ಗೊತ್ತಿಲ್ಲ. ನಮ್ಮ ಭಾವನೆಗೆ ಪುರಸಭೆ ಅಧಿಕಾರಿಗಳ ನಡೆ ಘಾಸಿಯನ್ನುಂಟು ಮಾಡಿದೆ. ಚರಂಡಿಗೆ ಗಣಪತಿ ಮೂರ್ತಿಗಳನ್ನು ಎಸೆಯುತ್ತಾರೆ ಎಂದು ಗೊತ್ತಾಗಿದ್ದರೆ ನಾವು ಪುರಸಭೆಯವರು ಇರಿಟ್ಟಿದ್ದ ಬ್ಯಾರಲ್‌ಗಳಲ್ಲಿ ಗಣಪತಿ ವಿಸರ್ಜನೆ ಮಾಡುತ್ತಿರಲಿಲ್ಲ. ಕರ್ತವ್ಯ ಪ್ರಜ್ಞೆ, ಸಾರ್ವಜನಿಕರ ಭಕ್ತಿ ಹಾಗೂ ಭಾವನೆಗೆ ಬೆಲೆ ನೀಡಲಾಗದಿದ್ದರೆ ಇಂತಹ ಕೃತಕ ಹೊಂಡಗಳನ್ನು ಪುರಸಭೆ ನಿರ್ಮಿಸುವ ಅವಶ್ಯಕತೆ ಏನಿತ್ತು? ಎಂಬುದು ಬಡಾವಣೆಯ ನಿವಾಸಿಗಳು ಪ್ರಶ್ನೆಯಾಗಿದೆ.

ಗಣಪತಿ ಹಬ್ಬವನ್ನು ಎಲ್ಲರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಆದರೆ ಇಂತಹ ಘಟನೆಗಳು ಜನರ ಮನಸ್ಸಿಗೆ ನೋವನ್ನುಂಟು ಮಾಡುತ್ತವೆ. ಹೀಗಾಗಿ ಜಿಲ್ಲಾಡಳಿತ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಬಡಾವಣೆಯ ನಿವಾಸಿ ವೀರೇಶ ಸಂಗಮದ ಆಗ್ರಹಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿದ್ದು, ಪಟ್ಟಣದ ೨೨ನೇ ವಾರ್ಡಿನ ರಂಗ್ರೆಜ ಆಸ್ಪತ್ರೆಯ ಹಿಂಭಾಗದ ಚರಂಡಿಯಲ್ಲಿ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಿದ ಬಗ್ಗೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಪಡೆದು. ಮುಂದಿನ ಕ್ರಮಕ್ಕೆ ಮುಂದಾಗುವೆ ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ತಿಳಿಸಿದ್ದಾರೆ. 

Follow Us:
Download App:
  • android
  • ios