Asianet Suvarna News Asianet Suvarna News

ಕಾಂಗ್ರೆಸ್ ಸದಸ್ಯರ ವಿರೋಧದ ನಡುವೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ!

ನಗರದ ಈದ್ಗಾ ಮೈದಾನದಲ್ಲಿ ಈ ಬಾರಿ ಗಣೇಶ ಉತ್ಸವ ಆಚರಿಸಲು ಮಹಾನಗರಪಾಲಿಕೆ ಅನುಮತಿ ನೀಡಿದೆ. ಗುರುವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈದ್ಗಾ ಮೈದಾನದಲ್ಲಿ ಕಳೆದ ವರ್ಷ ನೀಡಿದ್ದ ಗಣೇಶೋತ್ಸವ ಮಂಡಳಕ್ಕೆ ಗಣೇಶೋತ್ಸವ ನಡೆಸಲು ಅನುಮತಿ ನೀಡಲಾಯಿತು ಎಂದು ಮೇಯರ್‌ ವೀಣಾ ಬರದ್ವಾಡ ತಿಳಿಸಿದರು.

Permission for Ganeshotsav at Hubli Eidgah Maidan rav
Author
First Published Sep 1, 2023, 7:05 PM IST

ಹುಬ್ಬಳ್ಳಿ (ಸೆ.1): ನಗರದ ಈದ್ಗಾ ಮೈದಾನದಲ್ಲಿ ಈ ಬಾರಿ ಗಣೇಶ ಉತ್ಸವ ಆಚರಿಸಲು ಮಹಾನಗರಪಾಲಿಕೆ ಅನುಮತಿ ನೀಡಿದೆ. ಗುರುವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈದ್ಗಾ ಮೈದಾನದಲ್ಲಿ ಕಳೆದ ವರ್ಷ ನೀಡಿದ್ದ ಗಣೇಶೋತ್ಸವ ಮಂಡಳಕ್ಕೆ ಗಣೇಶೋತ್ಸವ ನಡೆಸಲು ಅನುಮತಿ ನೀಡಲಾಯಿತು ಎಂದು ಮೇಯರ್‌ ವೀಣಾ ಬರದ್ವಾಡ ತಿಳಿಸಿದರು.

ಈದ್ಗಾ ಮೈದಾನದಲ್ಲಿ ಈ ಬಾರಿ ಗಣೇಶ ಉತ್ಸವ ಆಚರಿಸಲು  ಅನುಮತಿ ನೀಡುವ ವಿಷಯ ಮಂಡಿಸಲಾಯಿತು. ಈ ಮಧ್ಯೆ, ಮೊದಲೇ ಸಭೆಯ ಗಮನಕ್ಕೆ ತರದೇ ಏಕಾಏಕಿ ಈ ವಿಷಯವನ್ನು ತಂದಿದ್ದಕ್ಕೆ ಪ್ರತಿಪಕ್ಷ ನಾಯಕಿ ಸುವರ್ಣಾ ಕಲ್ಲಕುಂಟ್ಲಾ ಸೇರಿದಂತೆ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಸದನದ ಬಾವಿಗಿಳಿದು ಪ್ರತಿಭಟಿಸಿದರು. 

 

ಮತ್ತೆ ಮುನ್ನಲೆಗೆ ಬಂದ ಈದ್ಗಾ ಮೈದಾನ ವಿವಾದ: ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಪಾಲಿಕೆಗೆ ಮನವಿ

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾರೂಢ ಬಿಜೆಪಿ ಸದಸ್ಯರು, ಚರ್ಚೆಗಾಗಿ ಸಭೆಯಲ್ಲಿ ಹೆಚ್ಚಿನ ವಿಷಯ ಮಂಡಿಸುವುದು ಮೇಯರ್‌ ಅವರ ಪರಮಾಧಿಕಾರ. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ವಾದಿಸಿದರು. ಬಳಿಕ, ಪ್ರತಿಪಕ್ಷದ ಪ್ರತಿಭಟನೆ ಲೆಕ್ಕಿಸದೆ, ಪಾಲಿಕೆಯ ಮೇಯರ್‌ ವೀಣಾ ಬರದ್ವಾಡ ಅವರು ಗಣೇಶ ಉತ್ಸವ ಆಚರಣೆಗೆ ಅನುಮತಿ ನೀಡಿ, ರೂಲಿಂಗ್‌ ಮಾಡಿ ಸಭೆ ಮೊಟಕುಗೊಳಿಸಿದರು.

ಈದ್ಗಾ ಮೈದಾನದಲ್ಲಿ ಕಳೆದ ಬಾರಿಯಂತೆ ಗಣೇಶ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲು ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್‌ ಮಾಡಲಾಗಿದೆ. ಅಲ್ಲದೇ, ಎಂದು ತಿಳಿಸಿದರು.

 

ಬೆಂಗಳೂರಿನ ವಿವಾದಿತ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆ

ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ಅರ್ಜಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಭೆಯಲ್ಲಿ ಪರಿಶೀಲಿಸಿ, ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

Follow Us:
Download App:
  • android
  • ios