ಕಾರವಾರ: ಪಡಿತರ ಚೀಟಿ ಅಪ್‌ಡೇಟ್‌ಗೆ ಮಳೆ ಲೆಕ್ಕಿಸದೆ ಸಾಲುಗಟ್ಟಿ ನಿಂತ ಜನ
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸುವ ಸಂಬಂಧ ಪಡಿತರ ಚೀಟಿ ಅಪ್‌ಡೇಟ್‌ಗಾಗಿ ಬುಧವಾರ ಮಳೆಯನ್ನೂ ಲೆಕ್ಕಿಸದೆ ನೂರಾರು ಜನರು ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಸರದಿಯಲ್ಲಿ ನಿಂತಿದ್ದರು.
ಕಾರವಾರ (ಜು.27) : ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸುವ ಸಂಬಂಧ ಪಡಿತರ ಚೀಟಿ ಅಪ್‌ಡೇಟ್‌ಗಾಗಿ ಬುಧವಾರ ಮಳೆಯನ್ನೂ ಲೆಕ್ಕಿಸದೆ ನೂರಾರು ಜನರು ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಸರದಿಯಲ್ಲಿ ನಿಂತಿದ್ದರು.
ಗೃಹಲಕ್ಷ್ಮಿ ಯೋಜನೆಯ ಅಡಿ ಮನೆಯೊಡತಿಗೆ . 2000 ಬ್ಯಾಂಕ್ ಖಾತೆಗೆ ಹಾಕುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಇದಕ್ಕಾಗಿ ಪಡಿತರ ಚೀಟಿಯಲ್ಲಿ ಮಹಿಳೆಯ ಹೆಸರು ಇರಬೇಕಾಗಿದ್ದು, ಮನೆಯ ಯಜಮಾನನ ಹೆಸರಿರುವ ಪಡಿತರ ಚೀಟಿಯಲ್ಲಿ ಯಜಮಾನಿಯ ಹೆಸರನ್ನಾಗಿ ಬದಲಿಸಲು 350-400 ಜನರು ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದರು.
ಉತ್ತರಕನ್ನಡ: ಗೃಹಲಕ್ಷ್ಮೀ ಯೋಜನೆಗೆ ಸರ್ವರ್ ಕಾಟ..!
ಪ್ರತಿನಿತ್ಯ 150 ಜನರಿಗೆ ಟೋಕನ್ ನೀಡಿ ನಿಗದಿತ ದಿನಾಂಕದಂದು ಬರಲು ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೂ ಸಹ ಜನರು ಟೋಕನ್ ಪಡೆಯಲು ಹಾಗೂ ಪಡಿತರ ಚೀಟಿ ಅಪ್‌ಡೇಟ್ ಮಾಡಿಸಲು ಮಳೆಯಲ್ಲಿಯೇ ಛತ್ರಿ ಹಿಡಿದು, ರೇನ್‌ಕೋಟ್ ಧರಿಸಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗಿದ್ದು, ಮಳೆಯನ್ನು ಲೆಕ್ಕಿಸದೆ ದೂರದ ಊರುಗಳಿಂದ ತಹಸೀಲ್ದಾರ್ ಕಚೇರಿಗೆ ಆಗಮಿಸುತ್ತಿದ್ದಾರೆ.
ರೇಷನ್ ಕಾರ್ಡ್‌ನಲ್ಲಿ ಯಜಮಾನಿ ಹೆಸರು ಬದಲಿಸಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ..
ಹಳೆ ಕಾರ್ಡಿನಲ್ಲಿ ಕುಟುಂಬದ ಯಜಮಾನನ ಹೆಸರು ಇರುತ್ತಿತ್ತು. ಎನ್‌ಎಸ್‌ಎಫ್‌ಐ ಕಾಯಿದೆ ಅಡಿ ಕುಟುಂಬದ ಮುಖ್ಯಸ್ಥ ಮಹಿಳೆ ಆಗುತ್ತಾರೆ. ಈ ಹಿಂದೆ ಎಪಿಎಲ್ ಕಾರ್ಡ್ ಹೊಂದಿದ ಹೆಚ್ಚಿನ ಜನರು ಅಪ್‌ಡೆಟ್ ಮಾಡಿರಲಿಲ್ಲ. ಗೃಹಲಕ್ಷ್ಮಿ ಯೋಜನೆ ಜಾರಿಗೆಯಾದ ಬಳಿಕ ಆಧಾರ್ ಲಿಂಕ್ ಮತ್ತು ಅಪ್‌ಡೇಟ್‌ಗೆ ಆಗಮಿಸುತ್ತಿದ್ದಾರೆ. ಫುಡ್ ಇನ್‌ಸ್ಪೆಕ್ಟರ್ ಅವರಿಗೆ ಮಾತ್ರ ಪಡಿತರ ಚೀಟಿ ಲಾಗ್‌ಇನ್ ಇರುತ್ತದೆ. ಬೇರೆಯವರಿಗೆ ನೀಡಲು ಅವಕಾಶವಿಲ್ಲ.
ಮಂಜುನಾಥ ರೇವಣಕರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ
ಗೃಹಲಕ್ಷ್ಮಿ ನೋಂದಣಿಗೆ ಕೊನೆಯ ದಿನಾಂಕ ನಿಗದಿಯಾಗಿಲ್ಲ. ಜನರು ಅನಗತ್ಯವಾಗಿ ಗೊಂದಲ, ಗಡಿಬಿಡಿ ಉಂಟುಮಾಡಿಕೊಳ್ಳಬಾರದು. ಪಡಿತರ ಚೀಟಿ ಅಪ್‌ಡೇಟ್‌ಗೆ ಸಾಕಷ್ಟುಕಾಲಾವಕಾಶವಿದೆ.
ನಿಶ್ಚಲ್ ನರೋನ್ಹ, ತಹಸೀಲ್ದಾರ್ ಕಾರವಾರ