ಸೋತ-ಗೆದ್ದ ಇಬ್ಬರೂ ಒಟ್ಟಿಗೆ ಕ್ಷೇತ್ರ ಸಂಚಾರ : ಪಕ್ಷ ಬಿಡೋದು ಜನರ ತೀರ್ಮಾನ ಎಂದ GTD

  • ನಾನು ಜೆ.ಡಿ.ಎಸ್ ನಲ್ಲಿ ಇರಬೇಕಾ ಬೇಡ ಎನ್ನುವುದನ್ನು ಜನರು ತೀರ್ಮಾನ ಮಾಡುತ್ತಾರೆ
  • ಕ್ಷೇತ್ರದ ಮತದಾರರು ಹೇಳಿದ ಮಾತನ್ನು ಮಾತ್ರ ನಾನು ಕೇಳುತ್ತೇನೆ - ಜಿಟಿ ದೇವೇಗೌಡ
People will Decide about By Political Journey says JDS leader GT Devegowda snr

ಮೈಸೂರು (ನ.07):  ನಾನು ಜೆ.ಡಿ.ಎಸ್ (JDS) ನಲ್ಲಿ ಇರಬೇಕಾ ಬೇಡ ಎನ್ನುವುದನ್ನು ಜನರು ತೀರ್ಮಾನ ಮಾಡುತ್ತಾರೆ. ಕ್ಷೇತ್ರದ ಮತದಾರರು ಹೇಳಿದ ಮಾತನ್ನು ಮಾತ್ರ ನಾನು ಕೇಳುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ (GT Devegowda) ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. 

ಮೈಸೂರಿನಲ್ಲಿಂದು (Mysuru) ಮಾತನಾಡಿದ ಜಿಟಿ ದೇವೇಗೌಡ,  ಕುಮಾರಸ್ವಾಮಿ (HD Kumaraswamy) ಅವರಿಗೆ ಯಾವುದೇ ಅಭಿಪ್ರಾಯ ಇದ್ದರು ನನ್ನ ನಿರ್ಧಾರ ಬದಲಾಗುವುದಿಲ್ಲ.  ನಾನು ಎಲ್ಲಿರಬೇಕು ಅಂತ ಜನರು ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ (chamundeshwari) ಕ್ಷೇತ್ರಕ್ಕೆ ಬಂದಾಗ ನನಗೆ ಆಹ್ವಾನ ಇರಲಿಲ್ಲ. ಬೆಳವಾಡಿ ದೇವಾಲಯಕ್ಕೆ ಹಣವನ್ನು ನೀಡಿದ್ದೆ. ಆದರೂ ಆಹ್ವಾನ ನೀಡಲಿಲ್ಲ ಎಂದು ಜಿಟಿಡಿ ಹೇಳಿದರು. 
 
 ಇನ್ನು ರಮ್ಮನಹಳ್ಳಿಗೂ ಕುಮಾರಸ್ವಾಮಿ ಭೇಟಿ ನೀಡಿದ್ದು, ಇಲ್ಲಿಗೂ ಸಹ ಆಹ್ವಾನ ನೀಡಲಿಲ್ಲ. ಇದೀಗ ಕ್ಷೇತ್ರದಲ್ಲಿ‌ ಕೆಲವು ಕಾಮಗಾರಿ ಉದ್ಘಾಟನೆ ನಡೆಯುತ್ತಿದೆ. ಅದಕ್ಕೆ ಸಿದ್ದರಾಮಯ್ಯ (Siddaramaiah) ಬರುತ್ತಿದ್ದಾರೆ. ಸ್ಥಳೀಯ ಶಾಸಕನಾಗಿ ನಾನು‌ ಭಾಗಿಯಾಗುತ್ತಿದ್ದೇನೆ ಎಂದು ಜಿಟಿ ದೇವೇಗೌಡ  ಸಿದ್ದರಾಮಯ್ಯ ಜೊತೆ ಕ್ಷೇತ್ರ ಸಂಚಾರ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದರು.

ಕ್ಷೇತ್ರದ ಜನರು ಕರೆದಾಗ ನಾನು ಹೋಗಲೆ ಬೇಕು. ಈ ಹಿಂದೆ ಕೂಡ ಸಿದ್ದರಾಮಯ್ಯರ (Siddaramaiah) ಜೊತೆ ವೇದಿಕೆ ಹಂಚಿಕೊಂಡಿದ್ದೆ. ಇಲ್ಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಬಂದಾಗಲು ಅವರ ಜೊತೆ ವೇದಿಕೆ ಹಂಚಿಕೊಂಡಿದ್ದೆ ಇದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಜಿಟಿಡಿ ಹೇಳಿದರು.

 ನಾನು ಕಾಂಗ್ರೆಸ್ (Congress) ಪಕ್ಷ ಸೇರುವುದು ಬಿಡುವುದು ಎಲ್ಲವೂ ಜನರಿಗೆ ಬಿಟ್ಟಿದ್ದು. ನಾನು ಈ ಬಗ್ಗೆ ಕ್ಷೇತ್ರದ ಜನರ ಬಳಿ ಅಭಿಪ್ರಾಯ ಕೇಳಿಲ್ಲ. ಇನ್ನೂ ರಾಜ್ಯದಲ್ಲಿ ಚುನಾವಣೆ (Karnataka Assembly Election) ನಡೆಯಲು ಸಾಕಷ್ಟು ಸಮಯ ಇದೆ. ಎಲ್ಲವೂ ಮತದಾರ ತೀರ್ಮಾನದಂತೆ ನಡೆಯುತ್ತದೆ. ಅದರಂತೆ ನಾನು ಸಹ ನಡೆದುಕೊಳ್ಳುತ್ತೇನೆ ಎಂದು ಮೈಸೂರಿನಲ್ಲಿ ಶಾಸಕ ಜಿ.ಟಿ.ದೇವೆಗೌಡ ಹೇಳಿದರು.

ಸಿದ್ದರಾಮಯ್ಯ ಸ್ವಾಗತಕ್ಕೆ ಸಜ್ಜು

ಜೆಡಿಎಸ್ (JDS) ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ (GT Devegowda) ಕಾಂಗ್ರೆಸ್ ಸೇರ್ಪಡೆಗೂ ಮುನ್ನವೇ ಶಾಕ್ ನೀಡಲು ಸಜ್ಜಾಗುತ್ತಿದ್ದಾರೆ.   (Congress) ಸದ್ಯದಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಜೊತೆ ಜಿಟಿ ದೇವೇಗೌಡ ಚಾಮುಂಡೇಶ್ವರಿಯಲ್ಲಿ (Chamundeshwari) ಸಂಚಾರ ಮಾಡಲಿದ್ದಾರೆ. 

ಕಾಂಗ್ರೆಸ್ (Congress) ಸೇರುವ ಮುನ್ನವೇ ವಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಜಿಟಿ ದೇವೇಗೌಡರ ಜೊತೆ  ವೇದಿಕೆ ಹಂಚಿಕೊಳ್ಳಲಿದ್ದು, ಇತ್ತೀಚಿಗೆ ಎರಡು ಬಾರಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕುಮಾರಸ್ವಾಮಿ (HD kumaraswamy) ಬಂದು ಹೋಗಿದ್ದು,  ಕುಮಾರಸ್ವಾಮಿ ಭೇಟಿ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಕ್ಷೇತ್ರಕ್ಕೆ ಜಿಟಿ ದೇವೇಗೌಡ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.

ತಾವು ಸೋಲಿಸಿದ್ದ ಸಿದ್ದರಾಮಯ್ಯರನ್ನೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ವಾಗತಿಸಲು ಶಾಸಕ ಜಿಟಿ ದೇವೇಗೌಡ ಸಜ್ಜಾಗಿದ್ದಾರೆ. ನವೆಂಬರ್ 9ಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ಜಿ.ಟಿ ದೇವೇಗೌಡ ಸಮಾಗಮವಾಗಲಿದೆ.

ಸಿದ್ದರಾಮಯ್ಯ ಜತೆ ಎರಡು ಕಡೆ ವೇದಿಕೆ‌ ಹಂಚಿಕೊಳ್ಳಲಿರುವ ಶಾಸಕ ಜಿ.ಟಿ ದೇವೇಗೌಡ  ಹಿನಕಲ್ ನಲ್ಲಿ ನಡೆಯುವ ಅಂಬೇಡ್ಕರ್ ಭವನ (Ambedkar bhavan) ಉದ್ಘಾಟನೆ ಕಾರ್ಯಕ್ರಮದಲ್ಲಿ ಇಬ್ಬರೂ ಮುಖಂಡರು  ಭಾಗಿಯಾಗಲಿದ್ದಾರೆ.  ಇದಾದ ನಂತರ ಕೇರ್ಗಳ್ಳಿಯಲ್ಲಿ ನಡೆಯುವ ಕೆಂಚಪ್ಪ ಸಮುದಾಯ ಭವನ ಉದ್ಘಾಟನೆಯಲ್ಲೂ  ಉಭಯ ನಾಯಕರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. 

  • ನಾನು ಜೆ.ಡಿ.ಎಸ್ ನಲ್ಲಿ ಇರಬೇಕಾ ಬೇಡ ಎನ್ನುವುದನ್ನು ಜನರು ತೀರ್ಮಾನ ಮಾಡುತ್ತಾರೆ.
  • ಕ್ಷೇತ್ರದ ಮತದಾರರು ಹೇಳಿದ ಮಾತನ್ನು ಕೇಳುತ್ತೇನೆ.
  • ಕುಮಾರಸ್ವಾಮಿ ಅವರಿಗೆ ಯಾವುದೇ ಅಭಿಪ್ರಾಯ ಇದ್ದರು ನನ್ನ ನಿರ್ಧಾರ ಬದಲಾಗುವುದಿಲ್ಲ.
  • ನಾನು ಎಲ್ಲಿರಬೇಕು ಅಂತ ಜನರು ತೀರ್ಮಾನ ಮಾಡುತ್ತಾರೆ.
Latest Videos
Follow Us:
Download App:
  • android
  • ios