ಕೋಲಾರ(ಮೇ 17): ಮುಳಬಾಗಿಲು ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ತೊಂದರೆಗೆ ಒಳಗಾಗಿರುವ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಕೆಲಸ ನೀಡಿ ಕೃಷಿಕರ ಮತ್ತು ಕೂಲಿ ಕಾರ್ಮಿಕರ ಭವಣೆಯನ್ನು ನೀಗಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ಅಧಿಕಾರಿ ಮುರುಳಿ ತಿಳಿಸಿದ್ದಾರೆ.

ಕೊರೋನಾ ಲಾಕ್‌ ಡೌನ್‌ನಿಂದಾಗಿ ದಿನನಿತ್ಯ ಕೂಲಿ ಕೆಲಸಗಳನ್ನು ಅರಿಸಿ ಹೋಗುತ್ತಿದ್ದ ಕೂಲಿ ಕಾರ್ಮಿಕರ ಹಾಗೂ ಕೃಷಿಕ ರೈತರ ಸಂಕಷ್ಟವನ್ನು ತಿಳಿಗೊಳಿಸಲು ಕೃಷಿ ಇಲಾಖೆಯಿಂದ ನರೇಗಾ ಯೋಜನೆಯಡಿ ಕೃಷಿಹೊಂಡ ನಿರ್ಮಾಣಕ್ಕೆ ಒಂದು ಲಕ್ಷ ಎಪತ್ತು ಸಾವಿರ ರೂಪಾಯಿ ನೀಡಲಾಗಿದೆ.

ಹಗರಿಬೊಮ್ಮನಹಳ್ಳಿ: ಗುಡುಗು ಸಹಿತ ಭಾರೀ ಮಳೆ, ಸಿಡಿಲು ಬಡಿದು 19 ಕುರಿಗಳ ದುರ್ಮರಣ

ರೈತರ ಜಮೀನುಗಳಲ್ಲಿ ಕಂದಕ ಬದು ನಿರ್ಮಾಣ ಮಾಡಲು ಒಂದು ಎಕರೆಗೆ 14 ಸಾವಿರ ರೂಗಳನ್ನು ನೀಡುತ್ತಿರುವುದರಿಂದ ಇದರ ಸದುಪಯೋಗವನ್ನು ಬಳಸಿಕೊಂಡು ಕುಟುಂಬಗಳ ನಿರ್ವಹಣೆಗೆ ಬೇಕಾದ ಆರ್ಥಿಕ ಸೌಲಭ್ಯವು ಕೂಲಿ ಕೆಲಸದ ಮೂಲಕ ಸಿಗುವುದಲ್ಲದೆ ತಮ್ಮ ಗ್ರಾಮದಲ್ಲಿಯೇ ಕೆಲಸ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ಹೋಬಳಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿನೀಡಿ ಪಡೆದುಕೊಳ್ಳಲು ಕೋರಿದರು.