ಮೊಬೈಲ್ ಟಾರ್ಚ್ ಉರಿಸಿದ ಶಾಸಕ ಖಾದರ್‌ಗೆ ಅವಹೇಳನ
ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಭಾನುವಾರ ರಾತ್ರಿ 9 ಗಂಟೆಗೆ ಮೊಬೈಲ್ ಟಾರ್ಚ್ ಉರಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ವಿರುದ್ಧ ಕರಾವಳಿಗರು ಅವಹೇಳನ ಮಾಡಿರುವ ಆಡಿಯೋ ವೈರಲ್ ಆಗಿದೆ.
ಮಂಗಳೂರು(ಏ.07): ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಭಾನುವಾರ ರಾತ್ರಿ 9 ಗಂಟೆಗೆ ಮೊಬೈಲ್ ಟಾರ್ಚ್ ಉರಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ವಿರುದ್ಧ ಕರಾವಳಿಗರು ಅವಹೇಳನ ಮಾಡಿರುವ ಆಡಿಯೋ ವೈರಲ್ ಆಗಿದೆ.
‘ಸಿದ್ದರಾಮಯ್ಯರದ್ದು ಗಂಡಸ್ತನ, ಸಿದ್ದರಾಮಯ್ಯ ಹೇಳಿದರೂ ನಾನು ಲೈಟ್ ಆರಿಸಲ್ಲ, ಕ್ಯಾಂಡಲ್ ಕೂಡ ಹೊತ್ತಿಸಲ್ಲ ಎಂದು ಹೇಳಲು ಖಾದರ್‌ಗೆ ಏನು ಸಮಸ್ಯೆ? ಬೆಳಿಗ್ಗೆಯೇ ಕ್ಯಾಂಡಲ್ ರೆಡಿ ಮಾಡಿ ಇಟ್ಟಿದ್ದೆ ಎನ್ನುವ ಈ ಖಾದರ್, ಸಮುದಾಯದ ಮರ್ಯಾದೆ ತೆಗೆಯುತ್ತಿದ್ದಾರೆ. ಸಿದ್ದರಾಮಯ್ಯರ ಹಾಗೆ ಮಾತನಾಡುವ ಎದೆಗಾರಿಕೆ ಬೇಕು, ಅದಿದ್ದರೆ ಮಾತ್ರ ರಾಜಕೀಯ, ಇಲ್ಲದಿದ್ದರೆ ಬರಬಾರದು’ ಎಂದು ಮಲಯಾಳಂ ಭಾಷೆಯಲ್ಲಿ ಹೇಳಿರುವುದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಎಲ್ಲರನ್ನು ಮೆಚ್ಚಿಸಲು ಸಾಧ್ಯವಿಲ್ಲ: ಖಾದರ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಖಾದರ್, ನಮ್ಮ ಜೀವನ ಮತ್ತು ಸಮಾಜದಲ್ಲಿ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ನನ್ನನ್ನು ಹೊಗಳಿದಾಗ ಖುಷಿ ಪಡೋದು, ನಿಂದಿಸಿದಾಗ ಬೇಸರ ಪಡುವ ಪರಿಸ್ಥಿತಿ ನನ್ನದಲ್ಲ. ಸಮಾಜದಲ್ಲಿ ನಮಗೆ ನಿಂದಿಸುವವರು ಯಾವಾಗಲೂ ಬೇಕು. ಟಾಚ್‌ರ್ ಲೈಟ್, ದೀಪ ಹೊತ್ತಿಸುವುದರಿಂದ ಕೊರೋನಾ ಹೋಗುತ್ತದೆ ಎಂದು ನಾನು ನಂಬುವುದಿಲ್ಲ ಎಂದಿದ್ದಾರೆ.
ಚಪ್ಪಾಳೆ, ದೀಪದಿಂದ ಕೊರೋನಾ ಹೋಗಲ್ಲ, ಪ್ರಧಾನಿ ಮೋದಿ ಕರೆಗೆ ಸತೀಶ್ ಜಾರಕಿಹೊಳಿ ವ್ಯಂಗ್ಯ!
ಆದರೆ ಕೊರೋನಾ ವಿಷಯದಲ್ಲಿ ಒಗ್ಗಟ್ಟಾಗಿದ್ದೇವೆ ಎಂದು ತೋರಿಸಲು ನಾನು ಒಬ್ಬನಾಗಿದ್ದೆ. ನಾನು ಎಲ್ಲಿಯೂ ದೀಪ ಹಚ್ಚಲ್ಲ ಅಂದಿಲ್ಲ, ಅದೇ ಗೊಂದಲ ಮಾಡಿದ್ದಾರೆ. ನನ್ನ ವಿರುದ್ಧದ ಆಡಿಯೋ ಬಗ್ಗೆ ದೂರು ಕೊಡುವ ವಿಷಯ ನನ್ನ ಡಿಕ್ಷನರಿಯಲ್ಲೇ ಇಲ್ಲ. ನಿಂದಿಸುವವರು ಬೇಕು, ಅವರಿಗೆ ಶುಭಾಶಯ ಸಲಿಸುತ್ತೇನೆ ಎಂದು ಖಾದರ್ ಸ್ಪಷ್ಟಪಡಿಸಿದ್ದಾರೆ.