ಜನಸಾಮಾನ್ಯರು ಡಿಜಿಟಲ್‌ ಸೈಬರ್‌ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ರಾಜವಂಶಸ್ಥ ಯದುವೀರ್‌ ಸಂಸ್ಥೆ ಸಲಹಾ ಮಂಡಳಿ ಮುಖ್ಯಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.

ಮೈಸೂರು (ಅ.18): ಜನಸಾಮಾನ್ಯರು ಡಿಜಿಟಲ್‌ ಸೈಬರ್‌ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ರಾಜವಂಶಸ್ಥ ಯದುವೀರ್‌ ಸಂಸ್ಥೆ ಸಲಹಾ ಮಂಡಳಿ ಮುಖ್ಯಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು.

ಬೆಳವಾಡಿ ಮೈರಾ ಸ್ಕೂಲ್‌ ಆಫ್‌ ಬಿಸಿನೆಸ್‌ ಸಂಸ್ಥೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಬರ್‌ ದಾಳಿಯ (Cyber Crime) ದುರುಪಯೋಗ ತಡೆಯುವುದು ಹಾಗೂ ಸೈಬರ್‌ ಭದ್ರತೆಯ ಬಗ್ಗೆ ತರಬೇತಿ ನೀಡುವ ಉದ್ದೇಶದಿಂದ ಸೈಬರ್‌ವರ್ಸ್‌ ಸಂಸ್ಥೆ ಹಾಗೂ ಐ ತ್ರಿಬರಲ್‌ ಇ ಸಹಯೋಗದೊಂದಿಗೆ ಸೈಬರ್‌ ತರಬೇತಿ ಕೋರ್ಸ್‌ ಆರಂಭಿಸಲಾಗುತ್ತಿದೆ ಎಂದರು.

ಸೈಬರ್‌ ಭದ್ರತೆ ಎಂಬುದು ಇಂದು ಅಂತಾರಾಷ್ಟ್ರೀಯ (international) ಮಟ್ಟದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಫೇಸ್‌ಬುಕ್‌, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಡಿಜಿಟಲ್‌ ಆಂಟಿ ವೈರಸ್‌ ಬಳಸಿಕೊಂಡು ಗಣ್ಯ ವ್ಯಕ್ತಿಗಳು ಸೇರಿದಂತೆ ಸಾಮಾನ್ಯ ಜನರ ಖಾತೆಯನ್ನು ಹ್ಯಾಕ್‌ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಇಂತಹ ಕೃತ್ಯ ತಡೆಯಲು ಹಾಗೂ ಈ ವಿಷಯದ ಬಗ್ಗೆ ಕೋರ್ಸ್‌ ರಚಿಸಿ ತರಬೇತಿ ನೀಡುವುದರಿಂದ ಇದರ ತರಬೇತಿ ಪಡೆದ ವಿದ್ಯಾರ್ಥಿಗಳಿಗೂ ಸೈಬರ್‌ ಅನಾಹುತದ ಬಗ್ಗೆ ಜಾಗೃತಿ ಮೂಡಿಸಬಹುದು. ಅಲ್ಲದೆ ಈ ಕೋರ್ಸ್‌ ಪಡೆದು ಪರಿಣಿತಿ ಹೊಂದುವುದರಿಂದ ರಾಷ್ಟಿ್ರಯ ಮತ್ತು ಅಂತಾರಾಷ್ಟಿ್ರಯ ಮಟ್ಟದಲ್ಲಿ ಅವಕಾಶ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.

ಸೈಬರ್‌ವರ್ಸ್‌ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು, ಮೈಸೂರಿನಲ್ಲಿ ಇದೇ ಪ್ರಥಮ ಬಾರಿಗೆ ಈ ಕೋರ್ಸ್‌ ಪರಿಚಯಿಸಲಾಗುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ಸೇರಿದಂತೆ ನಗರದ ಕೆಲವು ಪ್ರಮುಖ ಕಾಲೇಜುಗಳಲ್ಲಿ ಡಿಜಿಟಲ್‌ ಸೈಬರ್‌ ಕೋರ್ಸ್‌ ಪ್ರಾರಂಭಿಸಲು ಚಿಂತಿಸಲಾಗಿದೆ. ಈಗಾಗಲೇ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕೋರ್ಸ್‌ಗೆ ಪ್ರವೇಶ ಪಡೆಯಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಕೋರ್ಸ್‌ ಆರಂಭಿಸಲು ಬೇಕಾದ ಅಗತ್ಯ ಮೂಲಸೌಲಭ್ಯ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ ನೀಡುವ ಸಂಬಂಧ ಧನಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಅವರು ಹೇಳಿದರು.

ಐಇಇಇ ಟೆಕ್ನಾಲಜಿ ಸಂಸ್ಥೆಯ ಹಿರಿಯ ನಿದೇರ್ಶಕ ಶ್ರೀಕಾಂತ ಚಂದ್ರಶೇಖರ್‌ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಸೈಬರ್‌ ದಾಳಿ ಎಂಬುದು ಹೆಚ್ಚಾಗಿ ನಡೆಯತ್ತಿದೆ. ಪ್ರಪಂಚದ ಬಹತೇಕ ರಾಷ್ಟ್ರಗಳು ಈ ಸಮಸ್ಯೆ ಎದುರಿಸುತ್ತಿವೆ. ಆದ್ದರಿಂದ ಸೈಬರ್‌ ಭದ್ರತೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ ಈ ವಿಷಯನ್ನು ಒಂದು ಅಧ್ಯಯನವಾಗಿ ರೂಪಿಸುವ ಉದ್ದೇಶದಿಂದ ಐಇಇಇ ಟೆಕ್ನಾಲಜಿ ಸಂಸ್ಥೆಯು ಸೈಬರ್ವರ್‌ಸ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ ಎಂದು ಅವರು ವಿವರಿಸಿದರು.

ಸೈಬರ್ವರ್‌ ಫೌಂಡೇಶನ್‌ ಮುಖ್ಯಸ್ಥೆ ತ್ರಿಶಿಕಾ ದೇವಿ ಒಡೆಯರ್‌, ಪ್ರಧಾನ ಮಂತ್ರಿ ಕಚೇರಿ ಮಾಜಿ ಕಾರ್ಯದರ್ಶಿ ವಿಜಯ ರಾಘವೇಂದ್ರ, ಶ್ರೀಕಾಂತ್‌ ಆನಂದ ನಾಯ್ಡು ಇದ್ದರು.

ಕೆಳಕ್ಕೆ ಕುಳಿತ ಒಡೆಯರ್

ಮೈಸೂರಿನಲ್ಲಿ ಯುಗಾದಿಯ ಮುನ್ನಾದಿನ ಉತ್ತರಾದಿ ಮಠದಲ್ಲಿ ನಡೆದ ಸಮಾರಂಭವೊಂದರಲ್ಲಿ ಶ್ರೀ ಸತ್ಯಾತ್ಮತೀರ್ಥರಿಗೆ ಸಮಾನವಾಗಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಒಪ್ಪದೆ ನೆಲದ ಮೇಲೆ ಕುಳಿತ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ನಡವಳಿಕೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಹೌದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಗುರುವಿಗೆ ಸಮಾನವಾಗಿ ಕುರ್ಚಿಯಲು ಕುಳಿತುಕೊಳ್ಳಲು ಒಪ್ಪದೇ ಕೆಳಗೆ ಕುಳಿತುಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದಾರೆ.

ಯುಗಾದಿ ಹಬ್ಬದ ಹಿಂದಿನ ದಿನ ಮೈಸೂರಿನ ಅಗ್ರಹಾರದಲ್ಲಿರುವ ಉತ್ತರಾದಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಜೊತೆ ಯದುವೀರ ಭಾಗಿಯಾಗಿದ್ದರು. ವೇದಿಕೆಯಲ್ಲಿ ಶ್ರೀಗಳ ಪಕ್ಕದಲ್ಲೇ ಯದು​ವೀರ ಅವರಿಗೆ ಆಸನ ನೀಡಲಾಗಿತ್ತು. ಆದರೆ, ಅಲ್ಲಿ ಕುಳಿತುಕೊಳ್ಳದೆ ಪದ್ಮಾ​ಸನ ಹಾಕಿ​ಕೊಂಡು ಕೆಳಗೆ ಕುಳಿ​ತ​ರು. ಇದು ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಈ ಬಗ್ಗೆ ಫೇಸ್‌ಬುಕ್ ಪೋಸ್ಟ್‌ ಮಾಡಿರುವ ಯದುವೀರ್ 'ಮೈಸೂರಿನ ಶ್ರೀಮದುತ್ತರಾದಿ ಮಠದಲ್ಲಿ ನಡೆದ ಶ್ರೀ ಶ್ರೀ 1008 ಶ್ರೀ ಸತ್ಯಸಂತುಷ್ಟ ತೀರ್ಥರ ಆರಾಧನಾ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಎಲ್ಲರಿಗೂ ಒಳ್ಳೆಯ ಆರೋಗ್ಯ, ಐಶ್ವರ್ಯ ಅಭಿವೃದ್ಧಿಯಾಗಲೆಂದು ಶ್ರೀ ಸ್ವಾಮಿಗಳವರಲ್ಲಿ ಪ್ರಾರ್ಥಿಸಲಾಯಿತು' ಎಂದಿದ್ದಾರೆ,