ಮಂಡ್ಯ : ಫೇಸ್‌ಬುಕ್‌ ಪೋಸ್ಟ್‌ಗೆ ಸಂಸದೆ ಸೀಮಿತ!

ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಘಟನೆ ನಡೆದು ನಾಲ್ಕು ದಿನಗಳಾದರೂ ಮಳವಳ್ಳಿ ತಾಲೂಕಿನ ಸೊಸೆ, ಸಂಸದೆ ಸುಮಲತಾ ಪಟ್ಟಣಕ್ಕೆ ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳದೆ ಕೇವಲ ಫೇಸ್‌ಬುಕ್‌ ಪೋಸ್ಟ್‌ಗೆ ಸೀಮಿತವಾಗಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Mandya People slams MP Sumalatha snr

 ಮಳವಳ್ಳಿ: (ಅ.15): ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಘಟನೆ ನಡೆದು ನಾಲ್ಕು ದಿನಗಳಾದರೂ ಮಳವಳ್ಳಿ ತಾಲೂಕಿನ ಸೊಸೆ, ಸಂಸದೆ ಸುಮಲತಾ ಪಟ್ಟಣಕ್ಕೆ ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳದೆ ಕೇವಲ ಫೇಸ್‌ಬುಕ್‌ ಪೋಸ್ಟ್‌ಗೆ ಸೀಮಿತವಾಗಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ರಾಜ್ಯವೇ ಬೆಚ್ಚಿ ಬೀಳುವ ಕ್ರೌರ್ಯ ತಾಲೂಕಿನಲ್ಲಿ (Malavalli )  ನಡೆದಿದ್ದರೂ ಮಂಡ್ಯ (Mandya)  ಸಂಸದೆ ಸುಮಲತಾ (MP Sumalatha Ambareesh)  ಪಟ್ಟಣಕ್ಕೆ ಭೇಟಿ ನೀಡದೇ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಫೋಸ್ವ್‌ ಹಾಕಿ ಮಂಡ್ಯದಿಂದ ದೂರ ಉಳಿದಿರುವುದಕ್ಕೆ ತೀವ್ರವಾಗಿ ಖಂಡಿಸಿದ್ದಾರೆ.

ಸಂಸದರು ತಮ್ಮ ಫೇಸ್‌ ಬುಕ್‌ (Facebook) ಅಕೌಂಟ್‌ನಲ್ಲಿ ಪುಟ್ಟ ಬಾಲಕಿ ಮೇಲೆ ಅಮಾನುಷ ಕೃತ್ಯ ಎಸೆಗಿರುವ ಅಪರಾಧಿಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆಯೇ. ಪೊಲೀಸರು ಹಾಗೂ ನ್ಯಾಯಾಂಗ ಇಲಾಖೆ ತೆಗೆದು ಕೊಳ್ಳುವ ಕ್ರಮಕ್ಕೆ ನಾನು ಬದ್ಧ. ಅಪರಾಧಿಗೆ ಆಗುವ ಶಿಕ್ಷೆ ಎಲ್ಲರಿಗೂ ಎಚ್ಚರಿಕೆಯಾಗಬೇಕು. ಈ ಕೃತಿ ನನ್ನ ಮನಸ್ಸನ್ನು ಛಿದ್ರ ಗೊಳಿಸಿದೆ ಎಂದು ಕೃತ್ಯ ಖಂಡಿಸಿ ಫೋಸ್ವ್‌ ಹಾಕಿದ್ದಾರೆ.

ಘಟನೆ ನಡೆದು ನಾಲ್ಕು ದಿನಗಳಾಗಿದೆ. ನೀವು ಬೇಬಿ ಬೆಟ್ಟದಲ್ಲಿ ಜಾತ್ರೆ ನೋಡ್ತಿದ್ದೀರಾ?. ಕೆಆರ್‌ಎಸ್‌ ಯಾವಾಗ ಬಿರುಕು ಬಿಡುತ್ತೆ ಅಂತ ಕಾಯುತ್ತಿದ್ದೀರಾ?. ಫೇಸ್‌ಬುಕ್‌ ಪೇಜ್‌ನಲ್ಲಿ ಖಂಡಿಸಿದ್ರೆ ಸಾಲದು ಮಳವಳ್ಳಿ ಪಟ್ಟಣಕ್ಕೆ ಬನ್ನಿ. ಪೋಸ್ಟ್‌ ಹಾಕಿ ಜನರನ್ನು ಸಮಾಧಾನ ಮಾಡಬೇಡಿ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

ಮತ್ತೊಂದೆಡೆ ಮಳವಳ್ಳಿ ಹುಚ್ಚೇಗೌಡರ ಸೊಸೆ ಸುಮಕ್ಕ ನಾಪತ್ತೆ ಎಂದು ಫೋಸ್ವ್‌ ಮಾಡಿ ಮಳವಳ್ಳಿಯಲ್ಲಿ ಪುಟ್ಟಬಾಲಕಿ ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ. ಆ ವಿಚಾರ ಗೊತ್ತೊ?, ಗೊತ್ತಿಲ್ವೊ ಎಂದು ಪ್ರಶ್ನೆ ಮಾಡಿದ್ದಾರೆ.

ಫೇಸ್‌ಬುಕ್‌ ಪೋಸ್ಟ್‌ಗೆ ಸಂಸದೆ ಸೀಮಿತ!

ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಘಟನೆ ನಡೆದು ನಾಲ್ಕು ದಿನಗಳಾದರೂ ಮಳವಳ್ಳಿ ತಾಲೂಕಿನ ಸೊಸೆ, ಸಂಸದೆ ಸುಮಲತಾ ಪಟ್ಟಣಕ್ಕೆ ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳದೆ ಕೇವಲ ಫೇಸ್‌ಬುಕ್‌ ಪೋಸ್ಟ್‌ಗೆ ಸೀಮಿತ

ಸುಮಲತಾ ವಿರುದ್ಧ ನೆಟ್ಟಿಗರು ಆಕ್ರೋಶ

ಹುಚ್ಚೇಗೌಡರ ಸೊಸೆ ಸುಮಕ್ಕ ನಾಪತ್ತೆ ಎಂದು ಪೋಸ್ಟ್‌

ಬಾಲಕಿ ಕೊಲೆ ತಾಲೂಕಿಗೆ ಬಂದು ಸಾಂತ್ವನ ಹೇಳದ ಸಂಸದೆ

ಭಾರೀ ಪ್ರತಿಭಟನೆ

ಬಾಲಕಿ ಹತ್ಯೆ ಖಂಡಿಸಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು,ಹಲವು ಸಂಘಟನೆಗಳು ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಶುಕ್ರವಾರ ಪ್ರತಿಭಟನೆ ನಡೆಸಿದವು.

ಕೃತ್ಯ ಖಂಡಿಸಿ ಮಳವಳ್ಳಿ ತಾಲೂಕು ಔಷಧ ಮಾರಾಟಗಾರ ಸಂಘ,ದಲಿತ ಸಂಘರ್ಷ ಸಮಿತಿ,ಬಾಬು ಜಗಜೀವನ್‌ ವಿಚಾರ ವೇದಿಕೆ, ಮುಸ್ಲಿಂ ಸಂಘಟನೆ ಸೇರಿದಂತೆ ಇತರೆ ಜನಪರ ಸಂಘಟನೆಗಳು ನಗರದಲ್ಲಿ ಪ್ರತಿಭಟಿಸಿದವು.

ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಹಿಂದೂ ಜನ ಜಾಗೃತಿ ಸೇನಾ ಸಮಿತಿ ರಾಜ್ಯ ಹಾಗೂ ಜಿಲ್ಲಾ ಘಟಕದ ಕಾರ್ಯಕರ್ತರು ದಾವಣಗೆರೆ ನಗರದಲ್ಲಿ

ಧರಣಿ ನಡೆಸಿದರೆ,ಇತ್ತ ಕೊಳ್ಳೇಗಾಲದಲ್ಲಿ ಕುರುಬರ ಸಂಘ ಹಾಗೂ ಹಾಲುಮತ ಸಮಾಜ ವೇದಿಕೆ ವತಿಯಿಂದ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಹತ್ಯೆಯಾದ ಬಾಲಕಿಯ ಮನೆಗೆ ಕಾಗಿನೆಲೆ ಶಾಖಾಮಠದ ಅರುಣ್‌ ಸಿದ್ದೇಶ್ವರ ಸ್ವಾಮೀಜಿ, ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಸಚಿವರಾದ

ಗೋಪಾಲಯ್ಯ,ಅಶ್ವತ್‌್ಥ ನಾರಾಯಣ್‌ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ, ಬಾಲಕಿಯ ತಂದೆ ಸುರೇಶ್‌ಕುಮಾರ್‌,ತಾಯಿ ಅಶ್ವಿನಿ,ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಜಿಲ್ಲಾಡಳಿತ ಕುಂಭಮೇಳದಲ್ಲಿ ಕಳೆದಿದೆ: ಬಾಲಕಿಯನ್ನು ಅತ್ಯಾಚಾರಗೈದು, ಕೊಲೆ ಮಾಡಿದರೂ ಜಿಲ್ಲಾಡಳಿತ ಮಾತ್ರ ಕುಟುಂಬಸ್ಥರಿಗೆ ಸಾಂತ್ವನ ಹೇಳದೆ ಕುಂಭಮೇಳ ಮಾಡುತ್ತಿದೆ ಎಂದು ಶಾಸಕ ಡಾ.ಕೆ.ಅನ್ನದಾನಿ ಕಿಡಿಕಾರಿದರಲ್ಲದೆ, ಘಟನೆಗೆ ವಿಷಾದ ವ್ಯಕ್ತಪಡಿಸಿದರು.

14ಕೆಎಂಎನ್‌ ಡಿ12

Latest Videos
Follow Us:
Download App:
  • android
  • ios