ವಿಜಯಪುರ: ಗಬ್ಬೆದ್ದ ಐತಿಹಾಸಿಕ ಬಾವಿಗಳು, ಕೋಟಿ-ಕೋಟಿ ಹಣ ಪೋಲು..!
ಕಳೆದ ಕೆಡಿಪಿ ಸಭೆಯಲ್ಲಿ ಈ ಎಲ್ಲ ವಿಚಾರ ತಿಳಿದು ಸಚಿವ ಎಂ.ಬಿ.ಪಾಟೀಲರು ವಾಟರ್ ಬೋರ್ಡ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 9 ಕೋಟಿ ಹಣ ಪೋಲಾಗ್ತಿರೋ ಬಗ್ಗೆಯು ಅಸಮಧಾನವನ್ನ ಹೊರಹಾಕಿದ್ದಾರೆ. ಬಳಿಕ ಎಚ್ಚೆತ್ತಿರುವ ಅಧಿಕಾರಿಗಳು ಈಗಲೂ ನಾಮಕಾವಾಸ್ತೆ ಎನ್ನುವಂತೆ ಕೆಲಸ ಮಾಡ್ತಿದ್ದಾರೆ ಎಂದು ಪಾಲಿಕೆ ಸದಸ್ಯರೆ ಅಧಿಕಾರಿಗಳ ವಿರುದ್ಧ ಹರಿಹಾಯ್ತಿದ್ದಾರೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ಫೆ.07): ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಬರ ಆವರಿಸಿದೆ. ಜೊತೆಗೆ ಬಿಸಿಲಿನ ಪ್ರಮಾಣವು ಹೆಚ್ಚಾಗುತ್ತಿದೆ. ಬೇಸಿಗೆ ಶುರುವಾಗ್ತಿದ್ದಂತೆ ಕುಡಿಯುವ ನೀರಿಗೆ ತತ್ವಾರ ಶುರುವಾಗುತ್ತಾ ಎನ್ನುವ ಆತಂಕ ಎದುರಾಗಿದೆ. ಈ ನಡುವೆ ವಿಜಯಪುರ ನಗರದಲ್ಲಿರುವ ಐತಿಹಾಸಿಕ ಬಾವಿಗಳ ಸ್ವಚ್ಛಗೊಳಿಸಿ ನಗರದಲ್ಲಿ ಪುರೈಕೆ ಮಾಡಲು ಮಾಡಿದ್ದ ಯೋಜನೆಯನ್ನ ಅಧಿಕಾರಿಗಳು ಹಳ್ಳ ಹಿಡಿಸಿದ್ದಾರೆ. ಐತಿಹಾಸಿಕ ಬಾವಡಿಗಳನ್ನ ಸ್ವಚ್ಛಗೊಳಿಸಲು ಕೆಬಿಜೆಎನ್ಎಲ್ ಹಾಗೂ ಸ್ಥಳೀಯರು ಸೇರಿ ನೀಡಿದ್ದ 9 ಕೋಟಿಯಷ್ಟು ಹಣ ಪೋಲಾಗಿರುವ ಆರೋಪ ಕೇಳಿ ಬಂದಿದೆ.
9 ಕೋಟಿ ಖರ್ಚಾದರು ಸ್ವಚ್ಛವಾಗಲೇ ಇಲ್ಲ ಐತಿಹಾಸಿಕ ಬಾವಡಿಗಳು.!
ಬೇಸಿಗೆ ಬಂದರೆ ಸಾಕು ವಿಜಯಪುರ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತಿತ್ತು. ಈಗಲೂ ಸಮಸ್ಯೆ ಎದುರಾಗುತ್ತಿದೆ. ಬರದ ನಡುವೆ ಆಲಮಟ್ಟಿ ಆಣೆಕಟ್ಟಿನಲ್ಲಿ ನೀರಿನ ಸಂಗ್ರಹ ಕಡಿಮೆಯಾದ್ರೆ ವಿಜಯಪುರ ನಗರದಲ್ಲಿ ನೀರಿನ ಪುರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುತ್ತದೆ. 15 ದಿನಗಳಿಂದ 20 ದಿನಗಳಿಗೊಮ್ಮೆ ನಗರದಲ್ಲಿ ಜನರಿಗೆ ನೀರು ಪುರೈಸಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತೆ. ಇದು ನೀರಿನ ಹಾಹಾಕಾರಕ್ಕೂ ದಾರಿ ಮಾಡಿಕೊಡುತ್ತೆ. ಹೀಗಾಗಿ 8 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ವಿಜಯಪುರ ನಗರದ ಐತಿಹಾಸಿಕ ಬಾವಡಿ (ಬಾವಿ)ಗಳಾದ ತಾಜ್ ಬಾವಡಿ, ಸ್ವಚ್ಛಗೊಳಿಸಲಾಗಿತ್ತು. ಬೇಸಿಗೆಯಲ್ಲೂ ನಿರಂತರವಾಗಿ ನೀರು ಲಭ್ಯವಾಗ್ತಿದ್ದರಿಂದ ಬಾವಡಿಗಳು ಸ್ವಚ್ಛವಾದ್ರೆ ಬೇಸಿಗೆ ಸಮಯದಲ್ಲಿ ಆ ನೀರನ್ನ ಜನ ಸಾಮಾನ್ಯರಿಗೆ ನೀಡುವ ಉದ್ದೇಶವಿತ್ತು. ಬಾಡಿಗಳ ಸ್ವಚ್ಛತೆಗೆ 9 ಕೋಟಿ ಸಹ ಖರ್ಚಾಗಿತ್ತು. ಆದ್ರೆ ಪಾಲಿಕೆ, ವಾಟರ್ ಬೋರ್ಡ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ಲೀನ್ ಆಗಿದ್ದ ಬಾವಡಿಗಳು ಮತ್ತೆ ಮಲೀನವಾಗಿವೆ. ಬಾವಡಿಗಳ ನೀರು ವಾರ್ಡ್‌ಗಳಿಗೆ ಪುರೈಕೆಯಾಗೋದು ಹಾಗಿರಲಿ, ಬಾವಡಿಗಳ ಸ್ವಚ್ಛತೆಗೆ ಬಳಕೆಯಾಗಿದ್ದ 9 ಕೋಟಿಯಷ್ಟು ಹಣವು ನೀರಲ್ಲಿ ಹೋಮವಾಗಿವೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಬಿಜೆಪಿಗೆ 400+ ಸ್ಥಾನ ಬರುತ್ತೆಂಬ ಸತ್ಯ ಖರ್ಗೆ ಬಾಯಲ್ಲಿ ಬಂದಿದೆ: ವಿಜಯೇಂದ್ರ
ಸಚಿವ ಎಂ.ಬಿ. ಪಾಟೀಲರ ಕನಸಾಗಿದ್ದ ಬಾವಡಿ ಸ್ವಚ್ಛಗೊಳಿಸೋ ಯೋಜನೆ..!
ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಚಿವ ಎಂ.ಬಿ.ಪಾಟೀಲರು ಜಲಸಂಪನ್ಮೂಲ ಖಾತೆ ಹೊಂದಿದ್ದರು. ಆಗ ನಗರದಲ್ಲಿರುವ ಆದಿಲ್ ಶಾಹಿ ಕಾಲದ ಐತಿಹಾಸಿಕ ಬಾವಡಿಗಳನ್ನ ಸ್ವಚ್ಛಗೊಳಿಸಿ ನೀರಿನ ಬಳಕೆಗೆ ಬಹಳ ಮುತುವರ್ಜಿವಹಿಸಿ ಚಿಂತನೆ ಮಾಡಿ ಯೋಜನೆಯನ್ನು ರೂಪಿಸಿದ್ದರು. ಈ ಯೋಜನೆಯಿಂದಾಗಿ ಜನರಿಗೆ ಬೇಸಿಗೆ ಸಂದರ್ಭದಲ್ಲೂ ನೀರು ಯತೇಚ್ಚವಾಗಿ ಸಿಗುತ್ತುತ್ತು. ಹೀಗಾಗಿ ಎಂ.ಬಿ.ಪಾಟೀಲರ ನಿರ್ಧಾರದಿಂದ ನಗರದ ಜನತೆ ಪುಲ್ ಖುಷ್ ಆಗಿದ್ದರು. ಇದಕ್ಕಾಗಿ ಕೆಬಿಜೆಎನ್‌ಎಲ್ ಹಾಗೂ ಇತರೆ ಮೂಲಗಳಿಂದ ಒಟ್ಟು 9 ಕೋಟಿ ಹಣ ಒದಗಿಸಲಾಗಿತ್ತು. ಎಂ.ಬಿ.ಪಾಟೀಲರು ಸಹ ಮುತುವರ್ಜಿ ವಹಿಸಿ ಬಾವಡಿಗಳನ್ನ ಕ್ಲೀನ್ ಮಾಡಿಸಿದ್ದರು. ಆದ್ರೆ ಬಳಿಕ ಆಗಿದ್ದ ಬೇರೆ..
ಪಾಲಿಕೆ-ವಾಟರ್ ಬೋರ್ಡ್ ನಿರ್ಲಕ್ಷ್ಯ..!
ವಿಜಯಪುರ ನಗರದಲ್ಲಿ 10ಕ್ಕು ಅಧಿಕ ಆದಿಲ್ ಶಾಹಿ ಕಾಲದ ಬಾವಡಿಗಳಿವೆ. ಅವುಗಳಲ್ಲಿ ಬಿರು ಬೇಸಿಗೆ, ಬರದ ಸಂದರ್ಭದಲ್ಲು ಯಥೇಚ್ಛವಾಗಿ ನೀರು ಇರುತ್ತೆ. ಆದಿಲ್ ಶಾಹಿ ಕಾಲದಲ್ಲಿ ಈ ನೀರನ್ನೆ ಆಗ ನಗರದಲ್ಲಿ ವಾಸವಿದ್ದ 10 ಲಕ್ಷ ಜನರಿಗೆ ಪುರೈಸಲಾಗ್ತಿತ್ತು ಎನ್ನುವ ಇತಿಹಾಸವಿದೆ. ಹೀಗಾಗಿ ಕೋಟಿ ಕೋಟಿ ಖರ್ಚು ಮಾಡಿ ಬಾವಿಗಳನ್ನ ಸ್ವಚ್ಛಗೊಳಿಸಿದ್ರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಾರ್ಡ್‌ಗಳಿಗೆ ನೀರು ಪುರೈಕೆಗೆ ಪೈಪ್ ಅಳವಡಿಕೆಯೆ ಆಗಿಲ್ಲ. ಸರಿಯಾದ ವಿದ್ಯುತ್ ಸಂಪರ್ಕವನ್ನು ನೀಡಿಲ್ಲ. ಒಂದಿಷ್ಟು ವಾರ್ಡ್‌ಗಳಿಗೆ ಸಧ್ಯ ಬಾವಡಿಗಳ ನೀರು ಪುರೈಸಬಹುದಾದ್ರು ಅಧಿಕಾರಿಗಳು ಲಕ್ಷ್ಯವಹಿಸಿಲ್ಲ ಎನ್ನುವ ಆರೋಪಗಳಿವೆ..
ಡಿ.ಕೆ.ಶಿವಕುಮಾರ್‌ಗೆ ಮುಜುಗರ ತಂದ ಎರಡು ಬಣಗಳ ಸ್ವಾಗತ
ಜಿಲ್ಲಾಸ್ಪತ್ರೆಗೂ ನೀರು ಪುರೈಕೆಯಲ್ಲಿ ವ್ಯತ್ಯಯ..!
ತಾಜ್ ಬಾವಡಿಯಿಂದ ಈಗಾಗಲೇ ಜಿಲ್ಲಾಸ್ಪತ್ರೆಗೆ ನೀರು ಪುರೈಕೆ ಆಗ್ತಿತ್ತು. ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯ ಯಾವ ಮಟ್ಟಿಗೆ ಇದೆ ಎಂದರೆ, ನೀರಿನ ಮೋಟಾರ್‌ನ ಸಣ್ಣ ಪ್ಯೂಜ್ ಹೋದರು ರಿಪೇರಿ ಮಾಡಿಸಲ್ವಂತೆ. ಪೈಪ್ ಲೈನ್ ಬ್ಲಾಕ್ ಆದ್ರೆ ಅದನ್ನ ಬೇಗನೆ ಸರಿ ಮಾಡೋದಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ. ವಾಟರ್ ಬೋರ್ಡ್ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳ ಬೇಜವಬ್ದಾರಿತನದಿಂದ ಯಡವಟ್ಟಾಗ್ತಿದೆ ಎನ್ನುವುದು ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಆರೋಪಿಸಿದ್ದಾರೆ. ಅಲ್ಲದೆ ಪಾಲಿಕೆಯಲ್ಲಿಯು ಈ ಬಗ್ಗೆ ಧ್ವನಿ ಎತ್ತಿದ್ದಾರೆ.
ಕೆಡಿಪಿಯಲ್ಲಿ ಉಸ್ತುವಾರಿ ಸಚಿವರಿಂದ ತಾಕೀತು..!
ಈ ಕಳೆದ ಕೆಡಿಪಿ ಸಭೆಯಲ್ಲಿ ಈ ಎಲ್ಲ ವಿಚಾರ ತಿಳಿದು ಸಚಿವ ಎಂ.ಬಿ.ಪಾಟೀಲರು ವಾಟರ್ ಬೋರ್ಡ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 9 ಕೋಟಿ ಹಣ ಪೋಲಾಗ್ತಿರೋ ಬಗ್ಗೆಯು ಅಸಮಧಾನವನ್ನ ಹೊರಹಾಕಿದ್ದಾರೆ. ಬಳಿಕ ಎಚ್ಚೆತ್ತಿರುವ ಅಧಿಕಾರಿಗಳು ಈಗಲೂ ನಾಮಕಾವಾಸ್ತೆ ಎನ್ನುವಂತೆ ಕೆಲಸ ಮಾಡ್ತಿದ್ದಾರೆ ಎಂದು ಪಾಲಿಕೆ ಸದಸ್ಯರೆ ಅಧಿಕಾರಿಗಳ ವಿರುದ್ಧ ಹರಿಹಾಯ್ತಿದ್ದಾರೆ.