Asianet Suvarna News Asianet Suvarna News

ಬಿಜೆಪಿಗೆ 400+ ಸ್ಥಾನ ಬರುತ್ತೆಂಬ ಸತ್ಯ ಖರ್ಗೆ ಬಾಯಲ್ಲಿ ಬಂದಿದೆ: ವಿಜಯೇಂದ್ರ

ಲೋಕಸಭಾ ಚುನಾವಣೆ ವಿಚಾರದಲ್ಲಿ ಸತ್ಯ ಎಲ್ಲರಿಗೂ ಒಂದೇ. ಅದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಿಗೂ ಗೊತ್ತು ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 

Mallikarjun Kharge Said that BJP will Get more than 400 Seats in Lok Sabha Elections 2024 grg
Author
First Published Feb 5, 2024, 4:48 AM IST

ವಿಜಯಪುರ(ಫೆ.05): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನ ಬರುತ್ತದೆ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಂಬ ಮಾತು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಾಯಲ್ಲಿ ಮಾತು ಬಂದಿದೆ. ಖರ್ಗೆ ಅವರಿಗೂ ಸತ್ಯ ಅರಿವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆ ವಿಚಾರದಲ್ಲಿ ಸತ್ಯ ಎಲ್ಲರಿಗೂ ಒಂದೇ. ಅದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಿಗೂ ಗೊತ್ತು ಎಂದರು.

ಇನ್ನು ರಾಮನ ಮಂದಿರಗಳನ್ನು ಪುನಶ್ಚೇತನ ಮಾಡುವ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದಿರುವ ವಿಜಯೇಂದ್ರ, ಶ್ರೀ ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಿದ್ದ ಕಾಂಗ್ರೆಸ್‌ನವರಿಗೆ ಈಗ ಬುದ್ಧಿ ಬಂದಿದೆ. ಒಳ್ಳೆಯ ಕೆಲಸಕ್ಕೆ ನಾವು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಒಳ್ಳೆಯ ಕೆಲಸಕ್ಕೆ ನಮ್ಮ ಬೆಂಬಲ ಸದಾ ಇದೆ. ರಾಮನನ್ನು ಅವರು ಒಪ್ಪಿಕೊಂಡಿರುವುದು ತುಂಬಾ ಸಂತೋಷಕರ ಎಂದರು.

70 ದಿನದಲ್ಲಿ 10000 ಕಿ.ಮೀ. ಸುತ್ತಿದ ವಿಜಯೇಂದ್ರ!

ಇದೇ ವೇಳೆ ಮಂಡ್ಯದಲ್ಲಿ ಭಗವಾಧ್ವಜ ಗಲಾಟೆ ವಿಚಾರ ಕಾಂಗ್ರೆಸ್ ಸರ್ಕಾರದ ಪಿತೂರಿಯಾಗಿತ್ತು ಎಂದು ಆರೋಪಿದ ಅವರು, ಹನುಮ ಧ್ವಜ ಹಾರಿಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಧ್ವಜ ಸ್ತಂಭ ನಿರ್ಮಾಣ ಮಾಡಲಾಗಿತ್ತು. ಈ ಘಟನೆ ನಾವು ಭಾರತದಲ್ಲಿದ್ದೇವಾ ಅಥವಾ ಬೇರೆ ದೇಶದಲ್ಲಿದ್ದೇವೆಯಾ ಎಂಬ ಅನುಮಾನ ಉಂಟು ಮಾಡಿತ್ತು ಎಂದರು.

Follow Us:
Download App:
  • android
  • ios