ಕೊರೋನಾ ನಿಗ್ರಹಕ್ಕೆ ರಾತ್ರಿ ಮಠದ ಕುದುರೆ ಬಿಟ್ಟ ಜನ!

  • ಕೊರೋನಾ ಮಹಾಮಾರಿ ಹೊಡೆದೋಡಿಸಲು ಗ್ರಾಮದಲ್ಲಿ ಮಠದ ಕುದುರೆ ಬಿಟ್ಟ ಜನ
  •  ದೇವರ ಮೊರೆಹೋಗಿರುವ ವಿಶಿಷ್ಟ ಘಟನೆ
  • ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಈ ಘಟನೆ  
People Leave The  Gokak Mutt  Horse At night For Covid Control in village snr

ಗೋಕಾಕ (ಮೇ.23): ಕೊರೋನಾ ಮಹಾಮಾರಿ ಹೊಡೆದೋಡಿಸಲು ಜನರು ಗ್ರಾಮದಲ್ಲಿ ಮಠದ ಕುದುರೆ ಬಿಡುವ ಮೂಲಕ ದೇವರ ಮೊರೆಹೋಗಿರುವ ವಿಶಿಷ್ಟಘಟನೆ ಬುಧವಾರ ಜರುಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇತಿಹಾಸ ಪ್ರಸಿದ್ಧ ಸುಕ್ಷೇತ್ರವಾದ (ಕೊಣ್ಣೂರು) ಮರಡಿಮಠದಲ್ಲಿ ಶ್ರೀ ಪವಾಡೇಶ್ವರ ಮಹಾಸ್ವಾಮೀಜಿ ಅವರು ಮಾರ್ಗದರ್ಶನದಂತೆ ಗ್ರಾಮದ ಜನತೆ ಕಾಡಸಿದ್ಧೇಶ್ವರ ಸ್ವಾಮಿ ಅವರ ಕುದುರೆಯನ್ನು ಬುಧವಾರ ಮಧ್ಯರಾತ್ರಿ 12ರಿಂದ ಗುರುವಾರ ಬೆಳಗ್ಗೆ 4ರವರೆಗೆ ಗ್ರಾಮದಲ್ಲಿ ಸಂಚರಿಸಲು ಬಿಟ್ಟಿದ್ದರು. ಈ ದೈವ ಕುದುರೆಯಿಂದ ಗ್ರಾಮದ ಜನತೆ ಕೊರೋನಾ ಮಹಾಮಾರಿಯಿಂದ ರಕ್ಷಣೆಗೆ ಮೊರೆಹೋಗಿದ್ದಾರೆ.

ಎರಡು ವಾರ ಒಂದೇ ಮಾಸ್ಕ್ ಬಳಕೆ, ಬ್ಲ್ಯಾಕ್‌ ಫಂಗಸ್‌ಗೆ ಆಹ್ವಾನ! .

ಈಗ್ಗೆ 51 ವರ್ಷಗಳ ಹಿಂದೆಯೂ ಮಲೇರಿಯಾ, ಪ್ಲೇಗ್‌ ಹಾಗೂ ಕಾಲರಾದಂತಹ ಸಾಂಕ್ರಾಮಿಕ ರೋಗಳು ಹರಡಿದ ಸಮಯದಲ್ಲಿ ಮರಡಿಮಠದ ಕಾಡಸಿದ್ಧೇಶ್ವರ ಸ್ವಾಮಿ ಅವರು ಕಟ್ಟಿದ್ದ ಕುದರೆಯನ್ನು ಮಧ್ಯರಾತ್ರಿ ಗ್ರಾಮದಾದ್ಯಂತ ಸುತ್ತಾಡಲು ಬಿಟ್ಟಿದ್ದರಂತೆ.

Latest Videos
Follow Us:
Download App:
  • android
  • ios