Asianet Suvarna News Asianet Suvarna News

ಕೊಪ್ಪಳ: ಕೊರೋನಾ ಸೋಂಕಿತರಿಗಾಗಿ ಚಪಾತಿ ಲಟ್ಟಿಸಿದ ಗವಿಶ್ರೀ

* ರೋಗಿಗಳಿಗೆ ಅಡುಗೆ ಮಾಡುವವರಲ್ಲೂ ಉತ್ಸಾಹ ತುಂಬಿದ ಸ್ವಾಮೀಜಿ
* ಚಪಾತಿ ಮಾಡುವುದನ್ನು ಕಂಡು ಅಕ್ಷರಶಃ ಅಚ್ಚರಿಗೊಂಡ ಅಲ್ಲಿನ ಮಹಿಳೆಯರು
* ಆರೈಕೆ ಜೊತೆಗೆ ವೀಡಿಯೋ ಕಾಲ್‌ ಮಾಡಿ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುತ್ತಿರುವ ಶ್ರೀಗಳು

Gavisiddeshwara Swamji Did Food to Corona Patients at Covid Care Center in Koppal grg
Author
Bengaluru, First Published May 23, 2021, 7:41 AM IST

ಕೊಪ್ಪಳ(ಮೇ.23): ಶ್ರೀ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆ ಮತ್ತು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇರುವ ಸೋಂಕಿತರಿಗೆ ನಿತ್ಯವೂ ಶುಚಿ, ರುಚಿಯಾದ, ಪೌಷ್ಟಿಕ ಭೋಜನ ನೀಡಲಾಗುತ್ತಿದ್ದು, ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸ್ವತಃ ಚಪಾತಿ ಲಟ್ಟಿಸಿ ಅಡುಗೆ ಮಾಡುವವರಲ್ಲಿ ಉತ್ಸಾಹ ಮೂಡಿಸಿದ್ದಾರೆ.

Gavisiddeshwara Swamji Did Food to Corona Patients at Covid Care Center in Koppal grg

ಶ್ರೀಗಳು ಕೋವಿಡ್‌ ಆಸ್ಪತ್ರೆಯಲ್ಲಿನ ಸೋಂಕಿತರ ಆರೈಕೆ ಜೊತೆಗೆ ವೀಡಿಯೋ ಕಾಲ್‌ ಮಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಶನಿವಾರ ರೋಗಿಗಳಿಗೆ ಸಿದ್ಧವಾಗುತ್ತಿದ್ದ ಆಹಾರದ ಕೋಣೆಗೆ ಪ್ರವೇಶಿಸಿ ಅಡುಗೆ ಪರಿಶೀಲನೆ ನಡೆಸಿದರು.

"

ಕೊಪ್ಪಳ: ಕೋವಿಡ್‌ ಆಸ್ಪತ್ರೆ ಕಸಗೂಡಿಸಿದ ಗವಿಸಿದ್ಧೇಶ್ವರ ಶ್ರೀ

ಅಲ್ಲಿ ಮಹಿಳೆಯರು ಚಪಾತಿ ಮಾಡುತ್ತಿರುವುದನ್ನು ಗಮನಿಸಿದ ಶ್ರೀಗಳು ಚಪಾತಿ ಮಣೆ, ಲಟ್ಟಣಿಕೆ ತೆಗೆದುಕೊಂಡು ಕೆಲಕಾಲ ಚಪಾತಿ ಮಾಡಿದರು. ಇವರು ಚಪಾತಿ ಮಾಡುವುದನ್ನು ಕಂಡ ಅಲ್ಲಿನ ಮಹಿಳೆಯರು ಅಕ್ಷರಶಃ ಅಚ್ಚರಿಗೊಂಡರು.    

ಇದೊಂದು ಸೇವೆ ಮಾಡುವ ಯೋಗವಾಗಿದ್ದು, ಎಲ್ಲರೂ ಸೇವೆ ಮಾಡಬೇಕು ಎಂದು ಹೇಳುವ ಮೂಲಕ ಅಡುಗೆ ಮಾಡುವವರಲ್ಲಿಯೂ ಮತ್ತಷ್ಟು ಉಲ್ಲಾಸ ತುಂಬಿದರು.

Gavisiddeshwara Swamji Did Food to Corona Patients at Covid Care Center in Koppal grg

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios