ಒಂದೇ ಹೆಸರಿನ 2 ಗ್ರಾಮ: ‘ಗೃಹಲಕ್ಷ್ಮಿ’ಗೆ ಸಂಕಟ..!
ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿ, ಯಳೇಸಂದ್ರ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಭುವನಹಳ್ಳಿ ಗ್ರಾಮ ಮತ್ತು ಕಾಮಸಮುದ್ರ ಹೋಬಳಿ, ದೋಣಿಮಡಗು ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೊಂದು ಭುವನಹಳ್ಳಿ ಗ್ರಾಮವಿದೆ. ಎರಡೂ ಗ್ರಾಮಗಳು ಒಂದೇ ಹೆಸರಿನಿಂದ ಕೂಡಿರುವ ಕಾರಣ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಲು ಜನರಿಗೆ ಸಮಸ್ಯೆ ಎದುರಾಗಿದೆ.
ಬಂಗಾರಪೇಟೆ(ಜು.22): ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೇ ಯೋಜನೆ ನೋಂದಣಿಗೆ ಗುರುವಾರ ನೀರಸ ಪ್ರತಿಕ್ರಿಯೆಯಾದರೆ ಶುಕ್ರವಾರ ಅಧಿಕಾರಿಗಳ ಎಡವಟ್ಟಿನಿಂದಾಗಿ ಫಲಾನುಭವಿಗಳು ಎರಡು ಗ್ರಾಮಗಳ ಗ್ರಾಮ ಒನ್‌ಗೆ ಅಲೆದಾಡುವಂತಾಗಿ ಗೊಂದಲ ಸೃಷ್ಟಿಸಿದೆ.
ಗೃಹಲಕ್ಷ್ಮಿ ಯೋಜನೆಗೆ ಗುರುವಾರ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ಆದರೆ ಮೊದಲನ ದಿನ ಬಹುತೇಕರಿಗೆ ಮೊಬೈಲ್ ಸಂದೇಶ ಬಾರದೆ ಪರದಾಡಿದರು. ಎರಡನೇ ದಿನವದ ಶುಕ್ರವಾರ ಗ್ರಾಮಗಳನ್ನೇ ಅದಲು ಬದಲು ಮಾಡಿ ಎಡವಟ್ಟು ಮಾಡಿ ಜನರು ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಅಲೆಯುವಂತೆ ಮಾಡಿದ್ದಾರೆ. ಈಗಾಗಲೇ ತಿಳಿಸಿದಂತೆ ಮೊಬೈಲ್‌ಗೆ ಸಂದೇಶ ಬಂದಿರುವವರು ಮಾತ್ರ ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಹೋಗಿ ಉಚಿತವಾಗಿ ನೊಂದಾಯಿಸಿಕೊಳ್ಳಬೇಕು. ಆದರೆ ಸಂದೇಶ ಬರದೇ ಇದ್ದರೂ ಮಹಿಳೆಯರು ದಾಖಲೆಗಳೊಂದಿಗೆ ಗ್ರಾಮ ಒನ್ ಕೇಂದ್ರಗಳಿಗೆ ತೆರಳಿ ನೋದಂದಣಿಗಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಗುಂಡ್ಲುಪೇಟೆ: ಹೊಲದಲ್ಲಿ ಕಟಾವಿಗೆ ಬಂದಿದ್ದ 150 ಕೆ.ಜಿ. ಟೊಮೆಟೊ ಕಳವು
ಒಂದೇ ಹೆಸರಿನ ಎರಡು ಗ್ರಾಮ
ತಾಲೂಕಿನ ಬೂದಿಕೋಟೆ ಹೋಬಳಿ, ಯಳೇಸಂದ್ರ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಭುವನಹಳ್ಳಿ ಗ್ರಾಮ ಮತ್ತು ಕಾಮಸಮುದ್ರ ಹೋಬಳಿ, ದೋಣಿಮಡಗು ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೊಂದು ಭುವನಹಳ್ಳಿ ಗ್ರಾಮವಿದೆ. ಎರಡೂ ಗ್ರಾಮಗಳು ಒಂದೇ ಹೆಸರಿನಿಂದ ಕೂಡಿರುವ ಕಾರಣ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಲು ಜನರಿಗೆ ಸಮಸ್ಯೆ ಎದುರಾಗಿದೆ. ಯಳೇಸಂದ್ರ ಪಂಚಾಯಿತಿ ವ್ಯಾಪ್ತಿಯ ಭುವನಹಳ್ಳಿ ಗ್ರಾಮದ ಗೃಹಲಕ್ಷಿ ಯೋಜನೆಯ ಫಲಾನುಭವಿಗಳು ದೋಣಿಮಡಗು ಪಂಚಾಯಿತಿ ವ್ಯಾಪ್ತಿಯ ಗ್ರಾಮ ಒನ್ ಕೇಂದ್ರಕ್ಕೆ ತೆರಳಿ ನೊಂದಾಯಿಸಿಕೊಳ್ಳಲು ಸರ್ಕಾರ ಸಂದೇಶ ಕಳುಹಿಸಿದೆ.
ಹಿರಿಯ ನಾಗರಿಕರಿಗೆ ಸಿಗ್ತಿಲ್ಲ ನೇರ ದರ್ಶನ: ರಾಜ್ಯ ಸರ್ಕಾರದ ಸೂಚನೆಗೂ ಯಾವುದೇ ಕಿಮ್ಮತ್ತಿಲ್ಲ..!
ಅದೇ ರೀತಿ ದೋಣಿಮಡಗು ಪಂಚಾಯಿತಿ ವ್ಯಾಪ್ತಿಯ ಭವನಹಳ್ಳಿ ಗ್ರಾಮದ ಫಲಾನುಭವಿಗಳು ಬೂದಿಕೋಟೆ ಗ್ರಾಮದ ಗ್ರಾಮ ಒನ್‌ಗೆ ತೆರಳಿ ನೊಂದಾಯಿಸಿಕೊಳ್ಳಲು ಸರ್ಕಾರ ಮೊಬೈಲ್ ಸಂದೇಶ ಕಳುಹಿಸಿದೆ. ಒಂದು ಹೋಬಳಿಯಿಂದ ಮತ್ತೊಂದು ಹೋಬಳಿಗೆ ಹೋಗಿ ಗೃಹಲಕ್ಷಿ ಯೋಜನೆಗೆ ನೋಂದಾಯಿಸಿಕೊಳ್ಳಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಬದಲಾಗಿ ಗ್ರಾಮದಿಂದ ಗ್ರಾಮ ಒನ್ ಕೇಂದ್ರಕ್ಕೆ ಸುಮಾರು 20 ಕಿಮೀಗೂ ಹೆಚ್ಚಿನ ದೂರ ಕ್ರಮಿಸಬೇಕು. ಸರ್ಕಾರ ಮಾಡಿದ ಎಡವಟ್ಟಿನಿಂದ ಎರಡೂ ಗ್ರಾಮಗಳ ಜನ ಪರದಾಡುವ ಪರಿಸ್ಥಿತಿ ಎದುರಾಗಿದೆ.
ನೋಂದಣಿಗೆ ಸರ್ವರ್ ಸಮಸ್ಯೆ
ಶುಕ್ರವಾರ ಮೊಬೈಲ್‌ಗೆ ಸಂದೇಶ ಬಂದ ಮಹಿಳೆಯರು ತಮಗೆ ತಿಳಿಸಿದ ಕೇಂದ್ರಕ್ಕೆ ಹೋದರೆ ಅಲ್ಲಿ ಆಧಾರ್ ಸರ್ವರ್ ಸಮಸ್ಯೆ ಎದುರಿಸಬೇಕಾಯಿತು. ಕೆಲವರದ್ದು ಪಡಿತರ ಚೀಟಿಯ ಸಂಖ್ಯೆ ಸರಿಯಾಗಿದ್ದರೂ ಕಂಪ್ಯೂಟರ್‌ನಲ್ಲಿ ಸಂಖ್ಯೆ ಸರಿಯಿಲ್ಲ ಎಂದು ತೋರಿಸಿ ಗೊಂದಲ ಫಂಟಾಯಿತು. ಇದರಿಂದಾಗಿ ಇಡೀ ದಿನ ಕಾಯುವಂತಾಯಿತು.