Asianet Suvarna News Asianet Suvarna News

ಹಿರಿಯ ನಾಗರಿಕರಿಗೆ ಸಿಗ್ತಿಲ್ಲ ನೇರ ದರ್ಶನ: ರಾಜ್ಯ ಸರ್ಕಾರದ ಸೂಚನೆಗೂ ಯಾವುದೇ ಕಿಮ್ಮತ್ತಿಲ್ಲ..!

ಜು.17ರಂದು ಅಮಾವಾಸ್ಯೆ ದಿನ ರಾಜಗೋಪುರ ಸಮೀಪದ ಪ್ರವೇಶದ್ವಾರ 4ರಲ್ಲಿ 65 ವರ್ಷ ಮೇಲ್ಪಟ್ಟಂತಹ ಹಿರಿಯ ನಾಗರಿಕರನ್ನು ನೇರ ದರ್ಶನಕ್ಕೆ ಬಿಡದೇ ದೇವಾಲಯದ ಸಿಬ್ಬಂದಿಗಳು ಹಿಂದಕ್ಕೆ ಕಳಿಸಿದ್ದಾರೆ. ಮಹದೇಶ್ವರ ಬೆಟ್ಟದಲ್ಲಿ ಇತ್ತೀಚಿಗೆ ಭಕ್ತಾದಿಗಳ ಜೊತೆಗೆ ಸ್ಥಳೀಯ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುವುದಿಲ್ಲ. ದುರ್ವರ್ತನೆ ತೋರುತ್ತಿದ್ದಾರೆ ಎಂದು ಭಕ್ತಾಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Senior Citizens Not Getting Direct Darshan of Male Mahadeshwara Swamy Temple in Chamarajanagara grg
Author
First Published Jul 19, 2023, 10:15 PM IST

ಹನೂರು(ಜು.19):  65 ವರ್ಷ ಮೇಲ್ಪಟ್ಟಂತಹ ಹಿರಿಯ ನಾಗರಿಕರು ನೇರ ದರ್ಶನಕ್ಕೆ ಎಷ್ಟೇ ಮನವಿ ಮಾಡಿದರು ದೇವಾಲಯದ ಸಿಬ್ಬಂದಿಗಳು ಬಿಡದೆ ಅವರನ್ನು ಹಿಂದಕ್ಕೆ ಕಳಿಸಿದ ಘಟನೆ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಶನಿವಾರ, ಭಾನುವಾರ, ಸೋಮವಾರ ಮತ್ತು ಅಮಾವಾಸ್ಯೆ ದಿನಗಳಲ್ಲಿ ಬೆಟ್ಟಕ್ಕೆ ಹೆಚ್ಚಿನ ಜನಸಂಖ್ಯೆಯಲ್ಲಿ ಜನರು ಸೇರುವುದರಿಂದ 65 ವರ್ಷ ಮೇಲ್ಪಟ್ಟಂತಹ ಹಿರಿಯ ನಾಗರಿಕರಿಗೆ ನೇರ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಿಕೊಡಿ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಎಲ್ಲಾ ದೇವಾಲಯಗಳಿಗೆ ಸೂಚನೆ ನೀಡಿದೆ.

ಈ ಹಿನ್ನಲೆ ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳ ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ರಾಜಗೋಪುರದ ಸಮೀಪದ ಪ್ರವೇಶದ್ವಾರ 4ರಲ್ಲಿ 65 ವರ್ಷ ಮೇಲ್ಪಟ್ಟಂತಹ ಹಿರಿಯ ನಾಗರಿಕರ ನೇರ ದರ್ಶನಕ್ಕೆ ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ವ್ಯವಸ್ಥೆ ಮಾಡಿದ್ದರು.

ಬಂಡೀಪುರದಲ್ಲೊಂದು ದಿ ಎಲಿಫೆಂಟ್ ವಿಸ್ಪರರ್ಸ್ ಕಥನ: ಅನಾಥ ಆನೆ ಮರಿಗೆ ಆಸರೆಯಾದ ಕಾವಾಡಿ ದಂಪತಿ

ಆದರೆ, ಜು.17ರಂದು ಅಮಾವಾಸ್ಯೆ ದಿನ ರಾಜಗೋಪುರ ಸಮೀಪದ ಪ್ರವೇಶದ್ವಾರ 4ರಲ್ಲಿ 65 ವರ್ಷ ಮೇಲ್ಪಟ್ಟಂತಹ ಹಿರಿಯ ನಾಗರಿಕರನ್ನು ನೇರ ದರ್ಶನಕ್ಕೆ ಬಿಡದೇ ದೇವಾಲಯದ ಸಿಬ್ಬಂದಿಗಳು ಹಿಂದಕ್ಕೆ ಕಳಿಸಿದ್ದಾರೆ.
ಮಹದೇಶ್ವರ ಬೆಟ್ಟದಲ್ಲಿ ಇತ್ತೀಚಿಗೆ ಭಕ್ತಾದಿಗಳ ಜೊತೆಗೆ ಸ್ಥಳೀಯ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುವುದಿಲ್ಲ. ದುರ್ವರ್ತನೆ ತೋರುತ್ತಿದ್ದಾರೆ ಎಂದು ಭಕ್ತಾಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೂಕ್ತ ವ್ಯವಸ್ಥೆಗೆ ಆಗ್ರಹ:

ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳಾ ಹಿರಿಯ ನಾಗರೀಕರ ಸಂಖ್ಯೆ ಮಹದೇಶ್ವರ ಬೆಟ್ಟದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಅವರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಗುರುತಿನ ಚೀಟಿಯ ಆಧಾರದ ಮೇಲೆ 65 ವರ್ಷ ಮೇಲ್ಪಟ್ಟಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲಿನಲ್ಲಿ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸದ ಸಿಬ್ಬಂದಿಗಳ ಮೇಲೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಬನಶಂಕರಿ ನಿವಾಸಿ ನಾಗರಾಜ್‌ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಒಂದನ್ನು ಹಾಕುವ ಮೂಲಕ ಮಲೆ ಮಹದೇಶ್ವರ ಬೆಟ್ಟಪ್ರಾಧಿಕಾರ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಗುಂಡ್ಲುಪೇಟೆ: ಕಲುಷಿತ ಆಹಾರ ಸೇವಿಸಿ 23 ವಿದ್ಯಾರ್ಥಿಗಳು ಅಸ್ವಸ್ಥ

ಭೀಮನ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗದಿಂದ ಕಳೆದ ಮೂರು ದಿನಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಾದಪ್ಪನ ಭಕ್ತರು ಭೇಟಿ ನೀಡಿದ್ದು, 65 ವರ್ಷ ಮೇಲ್ಪಟ್ಪ ಆಧಾರ್‌ ಕಾರ್ಡ್‌ ತೋರಿಸಿದ ಎಲ್ಲರಿಗೂ ಶೀಘ್ರ ದರ್ಶನ ವ್ಯವಸ್ಥೆ ಮಾಡಲಾಗಿದೆ. ಆಧಾರ್‌ ಕಾರ್ಡ್‌ ಇಲ್ಲದ ಭಕ್ತರಿಗೆ ಅವಕಾಶ ಸಿಕ್ಕಿರುವುದಿಲ್ಲ ಮುಂದಿನ ದಿನಗಳಲ್ಲಿ ಮಲೆ ಮಹದೇಶ್ವರ ಬೆಟ್ಟದ ವಿಶೇಷ ಕೌಂಟರ್‌ಗಳಲ್ಲಿ ಇದರ ಬಗ್ಗೆ ಮಾಹಿತಿ ಒಳಗೊಂಡಂತೆ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಲೆ ಮಹದೇಶ್ವರ ಬೆಟ್ಟಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಗೀತಾ ಹುಡೇದ್‌ ತಿಳಿಸಿದ್ದಾರೆ.  

ಸರ್ಕಾರದ ಸುತ್ತೋಲೆಯಂತೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶೀಘ್ರ ದರ್ಶನ ವ್ಯವಸ್ಥೆ ಮಾಡಬೇಕು.ಆದರೆ ಮಲೆ ಮಹದೇಶ್ವರ ಬೆಟ್ಟಕ್ಕೆ ದೇವರ ದರ್ಶನಕ್ಕೆ ಬಂದಿದ್ದ ನನಗೆ ಕೌಂಟರ್‌ಗಳಲ್ಲಿ ಬಿಡದೆ ಇರುವುದರಿಂದ ತುಂಬಾ ನಿರಾಶೆಯಾಯಿತು. ಭೀಮನ ಅಮಾವಾಸ್ಯೆ ಪ್ರಯುಕ್ತ ಭಾನುವಾರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರು ಹೆಚ್ಚಾಗಿದ್ದ ಕಾರಣ ದರ್ಶನ ಸಿಗದೇ ವಾಪಸ್‌ ಆಗಿದ್ದೇನೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಸರ್ಕಾರದ ಆದೇಶ ಪಾಲಿಸಬೇಕು ಎಂದು ಬೆಂಗಳೂರಿನ ಹಿರಿಯ ನಾಗರಿಕರು ಸುಬ್ರಮಣಿ ಹೇಳಿದ್ದಾರೆ. 

Follow Us:
Download App:
  • android
  • ios