ಗುಂಡ್ಲುಪೇಟೆ: ಹೊಲದಲ್ಲಿ ಕಟಾವಿಗೆ ಬಂದಿದ್ದ 150 ಕೆ.ಜಿ. ಟೊಮೆಟೊ ಕಳವು

ಈ ಬಾರಿ ಟೊಮೆಟೊ ಇಳುವರಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಜಮೀನು ಮತ್ತು ಅಂಗಡಿಯಲ್ಲಿ ಟೊಮೆಟೊ ಕಳುವಾಗದಂತೆ ನೋಡಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. 

150 kg Tomato theft in Field at Gundlupet in Chamarajanagara grg

ಗುಂಡ್ಲುಪೇಟೆ(ಜು.21): ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಟೊಮೆಟೊವನ್ನು ಕೆಲವರು ಕಳವು ಮಾಡಿರುವ ಘಟನೆ ಬುಧವಾರ ರಾತ್ರಿ ತಾಲೂಕಿನ ವಡ್ಡನಹೊಸಹಳ್ಳಿಯಲ್ಲಿ ನಡೆದಿದೆ. 

ಸುಮಾರು 100 ರಿಂದ 150 ಕೆ.ಜಿ. ಟೊಮೆಟೊ ಕಳವಾಗಿದೆ ಎಂದು ದೂರಲಾಗಿದೆ. ಈ ಬಾರಿ ಟೊಮೆಟೊ ಇಳುವರಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಜಮೀನು ಮತ್ತು ಅಂಗಡಿಯಲ್ಲಿ ಟೊಮೆಟೊ ಕಳುವಾಗದಂತೆ ನೋಡಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. 

ಜನಸಾಮಾನ್ಯರಿಗೆ ಗುಡ್‌ ನ್ಯೂಸ್‌: ಕೇಂದ್ರ ಸರ್ಕಾರದಿಂದ 70 ರೂ. ಗೆ ಟೊಮ್ಯಾಟೋ ಮಾರಾಟ

ವಡ್ಡನಹೊಸಹಳ್ಳಿಯ ರೈತ ವಿಜಯ್‌ ಎಂಬುವರು ತಮ್ಮ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದು, ಕೆಲವೇ ದಿನಗಳಲ್ಲಿ ಕಟಾವು ಮಾಡುವುದರಲ್ಲಿದ್ದರು.ಅಷ್ಟರಲ್ಲೇ ಒಂದೂವರೆ ಎಕರೆ ಪ್ರದೇಶದಲ್ಲಿದ್ದ 100ರಿಂದ 150 ಕೆ.ಜಿ. ಟೊಮೆಟೊವನ್ನು ಕಳ್ಳರು ಕಟಾವು ಮಾಡಿ ಕದ್ದೊಯ್ದಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios