ಚಾಮರಾಜನಗರ: ಮಹದೇಶ್ವರ ಬೆಟ್ಟದ ರಸ್ತೆ ಕಾಮಗಾರಿ ಸ್ಥಗಿತ, ಮಾದಪ್ಪನ ಭಕ್ತರಿಗೆ ಧೂಳಿನ ಗೋಳು..!

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಮಹದೇಶ್ವರ ಬೆಟ್ಟದ ಈ  ರಸ್ತೆಯನ್ನು ದುರಸ್ಥಿಕಾರ್ಯ ಕೈಗೊಳ್ಳಲಾಗಿತ್ತು. ಬರೋಬ್ಬರಿ ಆರು ಕಿಲೋ ಮೀಟರ್  ಉದ್ದಕ್ಕು ಗುತ್ತಿಗೆದಾರ ರಸ್ತೆಯನ್ನ ಅಗೆದಿಟ್ಟು ಕಾಮಗಾರಿ ಸ್ಥಗಿತಗೊಳಿಸಿದ್ದಾನೆ. ಇದರ ಪರಿಣಾಮ ಇಡೀ ರಸ್ತೆ ಹಾಳಾಗಿದೆ. ಜಲ್ಲಿ ಕಲ್ಲು ಗಳು ಮೇಲೆದ್ದು ವಾಹನಗಳು ಸಂಚರಿಸುವುದೇ ದುಸ್ತರವಾಗಿದೆ. 

People Faces Road Problems in Chamarajanagara grg

ವರದಿ-ಪುಟ್ಟರಾಜು. ಆರ್. ಸಿ.ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಫೆ.22): ರಾಜ್ಯದಲ್ಲಿರುವ ಪ್ರಸಿದ್ದ ದೇವಾಲಯಗಳ   ಪೈಕಿ ಈ ದೇವಾಲಯವು ಒಂದು.. ಈ ದೇವಾಲಯಕ್ಕೆ ರಾಜ್ಯ ಹಾಗು ಹೊರ ರಾಜ್ಯಗಳಿಂದಲು ಸಹ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಹಾಗು ಪ್ರವಾಸಿಗರು ಆಗಮಿಸುತ್ತಾರೆ, ಆದ್ರೆ ಹೀಗೆ ಬರೋ ಪ್ರವಾಸಿಗರು ಹಾಗು ಭಕ್ತರು ಈಗ ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಅಸಲಿಗೆ ಆ ದೇವಾಲಯವಾದ್ರು ಯಾವ್ದು ಭಕ್ತರ ಆಕ್ರೋಶಕ್ಕೆ ಕಾರಣವಾದ್ರು ಏನು ಅಂತೀರಾ ಈ ರಿಪೋರ್ಟ್ ನೋಡಿ...

ಡಾಂಬಾರು ಕಾಣದೆ ಹಾಳಾದ ರಸ್ತೆ... ಅಲ್ಲಲ್ಲಿ ಬಿದ್ದಿರುವ ಗುಂಡಿಗಳು.. ಹಾಳಾದ ರಸ್ತೆಯಲ್ಲಿ  ಯಾವ್ದಾದ್ರು ವಾಹನ ಹೋದ್ರೆ ಸಾಕು ಸುತ್ತಾ ಮುತ್ತಾ ಎದ್ದೇಳು ಧೂಳು.. ವಾಹನ ಸಂಚಾರದಿಂದ ರಸ್ತೆಯ ಅಕ್ಕ ಪಕ್ಕವಿರುವ ಜಮೀನುಗಳಲ್ಲಿ ಬೆಳೆದಿರುವ ಸೂರ್ಯಕಾಂತಿ ಬೆಳೆಯ ಮೇಲೆ ಕುಳಿತಿರುವ ಧೂಳಿನ ರಾಶಿ.. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೌದಳ್ಳಿ ಬಳಿ. ಹೌದು, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಮಹದೇಶ್ವರ ಬೆಟ್ಟದ ಈ  ರಸ್ತೆಯನ್ನು ದುರಸ್ಥಿಕಾರ್ಯ ಕೈಗೊಳ್ಳಲಾಗಿತ್ತು. ಬರೋಬ್ಬರಿ ಆರು ಕಿಲೋ ಮೀಟರ್  ಉದ್ದಕ್ಕು ಗುತ್ತಿಗೆದಾರ ರಸ್ತೆಯನ್ನ ಅಗೆದಿಟ್ಟು ಕಾಮಗಾರಿ ಸ್ಥಗಿತಗೊಳಿಸಿದ್ದಾನೆ. ಇದರ ಪರಿಣಾಮ ಇಡೀ ರಸ್ತೆ ಹಾಳಾಗಿದೆ. ಜಲ್ಲಿ ಕಲ್ಲು ಗಳು ಮೇಲೆದ್ದು ವಾಹನಗಳು ಸಂಚರಿಸುವುದೇ ದುಸ್ತರವಾಗಿದೆ. ಮೂರು ತಿಂಗಳು ಕಳೆದ್ರು ಕಾಮಗಾರಿ ಪೂರ್ಣಗೊಂಡಿಲ್ಲ ಇದರ ಪರಿಣಾಮ ಯಾವುದಾದ್ರು ವಾಹನ ಹೋದ್ರೆ ಸಾಕು ಗಾಢವಾದ ಧೂಳು ಎಳುತ್ತೆ ಇದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿದೆ  ಜನಪ್ರತಿನಿಧಿಗಳು ಅಧಿಕಾರಿಗಳು ಈ ರಸ್ತೆಯಲ್ಲೇ ಸಂಚರಿಸಿದರು ಕಣ್ಣಿದ್ದು ಕುರುಡರಾಗಿದ್ದಾರೆ.

CHAMARAJANAGAR CRIME: ಕರಿಮಣಿ ಮಾಲೀಕ ನೀನಲ್ಲ..! ಪತ್ನಿ ರೀಲ್ಸ್ ಹುಚ್ಚಿಗೆ ನೇಣಿಗೆ ಶರಣಾದ ಪತಿ..!

ಇನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರ್ತಾರೆ. ರಾಜ್ಯ ಹೊರ ರಾಜ್ಯದಿಂದಲು ಮಾದಪ್ಪನ ಸನ್ನಿಧಾನಕ್ಕೆ ಲಕ್ಷಾಂತರ ಭಕ್ತರು ಪ್ರತಿ ನಿತ್ಯ ಆಗಮಿಸುತ್ತಾರೆ. ಇನ್ನು ಶಿವರಾತ್ರಿ ಹತ್ತಿರವಿರುವ ಕಾರಣ ವಾಹನ ಓಡಾಟ ತುಸು ಹೆಚ್ಚಾಗಿಯೇ ಇದೆ.  ಹನೂರಿನಿಂದ 6 ಕಿಲೋ ಮೀಟರ್ ಉದ್ದಕ್ಕೆ ರಸ್ತೆ ದುರಸ್ತಿಗೆ 10 ಕೋಟಿ ರೂಪಾಯಿಗೆ ಟೆಂಡರ್ ಪಡೆದ ಗುತ್ತಿಗೆದಾರ ಮೂರು ತಿಂಗಳ ಹಿಂದೆಯೇ ಕಾಮಗಾರಿ ಸ್ಥಗಿತಗೊಳಿಸಿದ್ದಾನೆ. ಈ ರಸ್ತೆಯಲ್ಲಿ ವಾಹನ ಓಡಿಸಲಾಗದೆ ಭಕ್ತಾಧಿಗಳು ವಾಹನ ಸವಾರರು ಹಿಡಿ ಶಾಪ ಹಾಕ್ತಯಿದ್ರೆ ಮತ್ತೊಂದೆಡೆ ರೈತರು ಜಮೀನಿನಲ್ಲಿ ಬೆಬೆಳೆಗಳ ಮೇಲೆ ಧೂಳು ಕುಳಿತ ಪರಿಣಾಮ ಇಳುವರಿ ಕಡಿಮೆಯಾಗ್ತಯಿದೆ. ಇದರಿಂದ ರೈತರಿಗೆ ಭಾರಿ ನಷ್ಟವಾಗುತ್ತಿದ್ದು ಬೆಳೆ ಹಾನಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕೆಂದು ರೈತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಅದೇನೆ ಹೇಳಿ ಮಲೆ ಮಹದೇಶ್ವರ ಪ್ರಾಧಿಕಾರಕ್ಕೆ ತಿಂಗಳಿಗೆ ಕೋಟಿ ಕೋಟಿ ಹಣ ಸಂದಾಯವಾಗುತ್ತೆ. ರಾಜ್ಯದಲ್ಲಿರುವ ಶ್ರೀಮಂತ ದೇವರ ಪೈಕಿ ಮಾದಪ್ಪನು ಸಹ ಓರ್ವ. ಇಂತ ಪ್ರಸಿದ್ದ ಪ್ರವಾಸಿತಾಣಕ್ಕೆ ತೆರಳುವ ರಸ್ತೆಯನ್ನ ಆದಷ್ಟು ಬೇಗ ಸರಿ ಪಡಿಸ ಬೇಕಾಗಿದೆ. ಇನ್ನು ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರ ಕೈಕೊಟ್ಟಿರುವುದೇ ಕಾಮಗಾರಿ ಸ್ಥಗಿತಗೊಳ್ಳಲು ಕಾರಣ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ. ಅದೇನೆ ಹೇಳಿ ಉತ್ತಮ ರಸ್ತೆ ನಿರ್ಮಾಣವಾದ್ರೆ ಭಕ್ತರ ಸಂಖ್ಯೆಯಲ್ಲು ಏರಿಕೆ ಕಾಣಲಿದ್ದು ಪ್ರಾಧಿಕಾರರಕ್ಕು ಹೆಚ್ಚಿನ ಆದಾಯ ಸಂದಾಯವಾಗಲಿದೆ.

Latest Videos
Follow Us:
Download App:
  • android
  • ios