ರುದ್ರಭೂಮಿ ಕಾವೇರಿ ನದಿ ಪ್ರವಾಹದಿಂದ ಜಲಾವೃತಗೊಂಡಿತ್ತು. ಇದರಿಂದ ಮಹಿಳೆಯ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನಡೆಸಲು ರುದ್ರಭೂಮಿ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.

ಕುಶಾಲನಗರ(ಜು.25): ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕೆ ಗ್ರಾಮದ ಮಹಿಳೆ ಮೃತಪಟ್ಟಿದ್ದು ಕಾವೇರಿ ಪ್ರವಾಹದ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆಗೆ ಪರದಾಡುವ ಪರಿಸ್ಥಿತಿ ಎದುರಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಕ್ಕೆ ಗ್ರಾಮದ ಮಹಿಳೆ ಮಂಚಮ್ಮ (76 ) ಭಾನುವಾರ ರಾತ್ರಿ ಮೃತಪಟ್ಟಿದ್ದು ಗ್ರಾಮದ ರುದ್ರಭೂಮಿ ಕಾವೇರಿ ನದಿ ಪ್ರವಾಹದಿಂದ ಜಲಾವೃತಗೊಂಡಿತ್ತು. ಇದರಿಂದ ಮಹಿಳೆಯ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನಡೆಸಲು ರುದ್ರಭೂಮಿ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.

ಮಂಗಳೂರು: ಪ್ರವಾಹದಲ್ಲೇ ಸಾಗಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು!

ಈ ಬಗ್ಗೆ ತಹಸೀಲ್ದಾರ್‌ ಗಮನ ಸೆಳೆಯಲಾಯಿತು. ನಂತರ ಸ್ಥಳೀಯ ಗ್ರಾಮ ಲೆಕ್ಕಿಗರು ನೊಂದವರ ಮನೆಗೆ ತೆರಳಿ ಬದಲಿ ಜಾಗಕ್ಕೆ ಕ್ರಮ ಕೈಗೊಂಡಿದ್ದು ಕೂಡಿಗೆ ಗ್ರಾಮದ ವ್ಯಾಪ್ತಿಯ ನದಿ ತಟದಲ್ಲಿ ಅಂತ್ಯಕ್ರಿಯೆ ನಡೆಯಿತು.