Asianet Suvarna News Asianet Suvarna News

Ringing Rocks| ಕಲ್ಲು ತಟ್ಟಿದರೆ ಹೊಮ್ಮುತ್ತಿದೆ ಗಂಟೆ ನಾದ..!

*  ಬಯಲು ಸೀಮೆಯ ರಿಂಗಿಂಗ್‌ ರಾಕ್ಸ್‌, ಗಂಗಾಳಗಲ್ಲು ಎಂದು ಪ್ರಸಿದ್ಧಿ ಪಡೆದ ಸ್ಥಳ
*  ಕಲ್ಲು, ಕಬ್ಬಿಣದ ತುಂಡಿನಿಂದ ತಟ್ಟಿದರೆ ಜೇಂಕರಿಸುವ ನಾದನಿನಾದ
*  ಸಂಶೋಧನೆ ಪ್ರಕಾರ ಜ್ವಾಲಾಮುಖಿಯಿಂದ ಇಂತಹ ಕಲ್ಲುಗಳು ಉದ್ಭವ
 

People Curiosity About Ringing Rocks at Ron in Gadag grg
Author
Bengaluru, First Published Nov 7, 2021, 1:25 PM IST

ರೋಣ(ನ.07):  ಇಲ್ಲಿನ ಕೆಲ ಕಲ್ಲುಗಳನ್ನು ತಟ್ಟಿದರೆ (ಬಾರಿಸಿದರೆ) ಸುಮಧುರ ಗಂಟೆ ನಿನಾದ ಹೊಮ್ಮುತ್ತಿದೆ! ಇಂಥದೊಂದು ಅಚ್ಚರಿ, ಕುತೂಹಲಕ್ಕೆ ಸಾಕ್ಷಿಯಾಗಿದ್ದು ತಾಲೂಕಿನ ಮುಗಳಿ- ಇಟಗಿ ಗ್ರಾಮ ಸಂಪರ್ಕ ಒಳ ರಸ್ತೆಯಲ್ಲಿರುವ ಗಂಗಾಳಗಲ್ಲು ಬಂಡೆಗಳು. ಇಲ್ಲಿನ ಬಸವೇಶ್ವರ ದೇಗುಲ ಆವರಣದಲ್ಲಿವೆ. ಈ ಕಲ್ಲುಗಳಿಂದ ಹೊರಹೊಮ್ಮುವ ನಾದ ಆಲಿಸಲು ಸಣ್ಣ ಕಲ್ಲು(Stone), ಕಬ್ಬಿಣದ ಸುತ್ತಿಗೆ ಅಥವಾ ಕಬ್ಬಿಣದ ತುಂಡಿನಿಂದ ತಟ್ಟುತ್ತಾರೆ. ಸಂಗೀತದ(Music) ಜ್ಞಾನವಿರುವವರು ಶಾಸ್ತ್ರೀಯವಾಗಿ ಬಾರಿಸುತ್ತಾ ಸುಮಧುರ ನಾದ ಹೊರ ಹೊಮ್ಮಿಸುತ್ತಾರೆ. ಇದರಿಂದಾಗಿಯೇ ಈ ಪ್ರದೇಶವನ್ನು ಗಂಗಾಳಗಲ್ಲು ಸೀಮೆ, ಗಂಗಾಳಗಲ್ಲು ಹೊಲ, ಗಂಗಾಲಗಲ್ಲು ಬಸವೇಶ್ವರ, ಗಂಗಾಳಗಲ್ಲು ದಾರಿ ಎಂದು ಕರೆಯಲಾಗುತ್ತದೆ.

ರೋಣದಿಂದ(Ron) ಮುಗಳಿ ಮಾರ್ಗವಾಗಿ ಭೀಮಾಂಬಿಕಾದೇವಿ ನೆಲೆ ನಿಂತ ಇಟಗಿ ಗ್ರಾಮ ಸಂಪರ್ಕ ರಸ್ತೆಯಲ್ಲಿ 1.5 ಕಿ.ಮೀ ತೆರಳಿದಾಗ ಅಥವಾ ರೋಣದಿಂದ ಹೊಸಳ್ಳಿ, ಇಟಗಿ ಮಾರ್ಗವಾಗಿ ಅಥವಾ ಗಜೇಂದ್ರಗಡದಿಂದ(Gajendragad) ಸೂಡಿ, ಇಟಗಿ ಮಾರ್ಗವಾಗಿ ಮುಗಳಿ ಗ್ರಾಮ ಸಂಪರ್ಕ ರಸ್ತೆಯಲ್ಲಿ 3.5 ಕಿ.ಮೀ ಕ್ರಮಿಸಿದಾಗ ಗಂಗಾಳಕಲ್ಲು ಬಸವೇಶ್ವರ ದೇಗುಲವಿದೆ. ಈ ದೇಗುಲ ಎದುರಿನ ಗುಂಡಗಲ್ಲು ದೇವರ ಕಟ್ಟೆಬಳಿ ಬೃಹದಾಕಾರದ ಎರಡು ಬಂಡೆ (ಕಲ್ಲುಗಳು) ಗಳು ಇವೆ. ಇವೇ ಗಂಗಾಳಗಲ್ಲು!

People Curiosity About Ringing Rocks at Ron in Gadag grg

ಥರ್ಡ್‌ಪಾರ್ಟಿ ಗೋಲ್‌ಮಾಲ್‌: ತಾನೇ ಮಾಡಿದ ಆದೇಶ ಉಲ್ಲಂಘಿಸಿದ ಗದಗ ಜಿಲ್ಲಾಡಳಿತ

ರಿಂಗಿಂಗ್‌ ರಾಕ್ಸ್‌:

ವೈಜ್ಞಾನಿಕವಾಗಿ ಸೊನೊರೂಸ್‌ ಅಥವಾ ಲಿಥೋಪೋನಿಕ್‌ ಎಂತಲೂ ಕರೆಯುತ್ತಾರೆ. ತಟ್ಟಿದಾಗ ನಾದ ಬರುವ ಕಲ್ಲುಗಳನ್ನು ಸಂಶೋಧನಾ(Research) ಪ್ರಕಾರ ಜ್ವಾಲಾಮುಖಿಯಿಂದ(Volcano0 ಇಂತಹ ಕಲ್ಲುಗಳು ಉದ್ಭವಿಸುತ್ತವೆ. ಅಥವಾ ಕಬ್ಬಿಣ(Iron) ಅಂಶ ಹೆಚ್ಚಾಗಿರುವ ಕಲ್ಲುಗಳ ಕಂಪನದಿಂದ ಗಂಟೆ ನಾದ ಹೊಮ್ಮುತ್ತದೆ.

ಈ ವಿಶೇಷ ಶಿಲೆಗಳು ಭಾರತದ(India) ವಿವಿಧೆಡೆಯೂ ಕಾಣಸಿಗುತ್ತವೆ. ಮಹಾರಾಷ್ಟ್ರ(Maharashtra) ರಾಜ್ಯದ ನಂದ ಋುಷಿ ಟೆಂಪಲ್‌, ತಂಬೆಗಡ ತನೋರಿ, ಜಲ್ಗಾನ್‌, ತಮಿಳುನಾಡಿನ(Tamil Nadu) ರಾಣಿಪೇಟಿ ಸಮೀಪದ ಕಾಂಚನಗಿರಿ, ಛತ್ತಿಸಗಡದ ತಂಡಿಗೆಯಲ್ಲಿ, ಗುಜರಾತನ ಪ್ರಕಾಶಗಡದ ಮಹಾಕಾಳಿ ಮಂದಿರ ಸೇರಿದಂತೆ ವಿವಿಧೆಡೆ ಈ ಕಲ್ಲುಗಳು ಕಾಣಸಿಗುತ್ತವೆ. ಕರ್ನಾಟಕದ(Karnataka) ರಾಯಚೂರ ಜಿಲ್ಲೆಯ ಮಸ್ಕಿ ಪಟ್ಟಣದ ದುರ್ಗಾನ ಬೆಟ್ಟದಲ್ಲಿ, ಹರಪನಹಳ್ಳಿ, ಹಂಪಿ ವಿಶ್ವ ವಿಖ್ಯಾತ ವಿಜಯ ವಿಠಲ ಮಂದಿರದಲ್ಲಿವೆ. ಗದಗ(Gadag) ಜಿಲ್ಲೆಯ ನೀಲಗುಂದ ಬೆಟ್ಟದಲ್ಲಿಯೂ ಕಾಣಬಹುದು.

'ಕಪ್ಪತಗುಡ್ಡವ ಆಯುರ್ವೇದ ಔಷಧಿಗಳ ತಾಣ'

ಬಯಲು ಸೀಮೆಗೇಕೆ ಬಂದವು?:

ಈ ಕಲ್ಲುಗಳು ಇಲ್ಲಿಗೆ ಹೇಗೆ ಬಂದಿವೆ? ಇವುಗಳನ್ನು ಇಲ್ಲಿ ತಂದಿಟ್ಟಿದ್ದು ಯಾರು? ಯಾತಕ್ಕಾಗಿ ತರಲಾಗಿದೆ? ಎಂಬೆಲ್ಲ ಪ್ರಶ್ನೆಗಳು ಈ ಭಾಗದ ಜನರನ್ನು ಕಾಡುತ್ತಿವೆ. ಸುಮಾರು ದಶಕಗಳಿಂದ ಈ ಕಲ್ಲು ಇಲ್ಲಿದ್ದು, ಈ ಬಗ್ಗೆ ನಮ್ಮ ತಂದೆ ನಮಗೆ ಹೇಳುತ್ತಿದ್ದರು. ಆದರೆ, ಇಲ್ಲಿಗೆ ಈ ಕಲ್ಲು ಹೇಗೆ ಬಂದಿವೆ ಎಂಬುದು ಮಾತ್ರ ನಿಗೂಢವಾಗಿದೆ ಎನ್ನುತ್ತಾರೆ ಮುಗಳಿ ಗ್ರಾಮದ ವೀರಪ್ಪ ಮಲ್ಲಾಪುರ, ಶರಣಪ್ಪ ಪಡೇಗೌಡ್ರ, ಶರಣಪ್ಪ ಉಪ್ಪಾರ.

ಪ್ರತಿ ವರ್ಷ ಇಟಗಿಗೆ ಹೋಗುವಾಗ ಈ ಕಲ್ಲನ್ನು ತಟ್ಟಿಸುಮಧುರ ನಾದ ಆಲಿಸಿ ಸಂತಸ ಪಡುತ್ತಿದ್ದೇವೆ. ಹಿಂದೆ ಕಲ್ಲು ಬಂಡೆ ಪಕ್ಕ ಬಸವಣ್ಣನ ಕಟ್ಟೆ ಮಾತ್ರ ಇತ್ತು. ಇತ್ತೀಚಿಗೆ ಬಸವೇಶ್ವರ ಗುಡಿ ಕಟ್ಟಲಾಗಿದೆ. ಬಸವೇಶ್ವರ ಗುಡಿಗೆ(Basaveshwara Temple) ಬರುವ ಭಕ್ತರಿಗೆ ಈ ಸಂಗೀತ ಕಲ್ಲುಗಳು ಮನಸ್ಸಿಗೆ ಆನಂದ ನೀಡುತ್ತವೆ ಎಂದು ಭಕ್ತ ಪ್ರೊ. ನಿಂಗಪ್ಪ ಸೋಮನಕಟ್ಟಿ ತಿಳಿಸಿದ್ದಾರೆ.

ಈ ಕಲ್ಲುಗಳು ಇಲ್ಲಿಗೆ ಹೇಗೆ ಬಂದಿವೆ? ಈ ಮಾದರಿಯ ಕಲ್ಲುಗಳು ಈ ಭಾಗದಲ್ಲಿ ಮತ್ತೆ ಎಲ್ಲೆಲ್ಲಿವೆ? ಬಯಲು ಸೀಮೆಯ ಭೂ ಆಳದಲ್ಲಿ ಇಂತಹ ಕಲ್ಲುಗಳಿವೆಯೇ? ಎಂಬುದರ ಕುರಿತು ಮಾಹಿತಿ ಸಂಗ್ರಹಿಸುವ ದಿಶೆಯಲ್ಲಿ ಕಲ್ಲಿನ ಮಾದರಿ ಸಂಗ್ರಹಿಸಿ ವೈಜ್ಞಾನಿಕ ಸಂಶೋಧನೆಗೆ(Scientific Research)ಕಳುಹಿಸಲಾಗುವದು ಎಂದು ಹುಬ್ಬಳ್ಳಿ ಬಿವಿಬಿ ಎಂಜನಿಯರಿಂಗ್‌ ಕಾಲೇಜ ಜೈವಿಕ ತಂತ್ರಜ್ಞಾನ ವಿಭಾಗದ ಡಾ. ಶಿವಲಿಂಗಸರ್ಜಾ ದೇಸಾಯಿ ಹೇಳಿದ್ದಾರೆ. 
 

Follow Us:
Download App:
  • android
  • ios