Asianet Suvarna News Asianet Suvarna News

'ಕಪ್ಪತಗುಡ್ಡವ ಆಯುರ್ವೇದ ಔಷಧಿಗಳ ತಾಣ'

*  ಕಪ್ಪತಗುಡ್ಡವು ಆಯುರ್ವೇದ ಔಷಧಿಗಳ ತಾಣ
*  ಕಪ್ಪತಗುಡ್ಡ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ
*  ಆಯುರ್ವೇದ ಔಷಧಿಗೆ ಆರೋಗ್ಯ ಮತ್ತು ಆಯುಷ್ಯ ವೃದ್ಧಿ
 

Deepika Bajpai Talks Over Kappatagudda grg
Author
Bengaluru, First Published Nov 6, 2021, 6:39 AM IST
  • Facebook
  • Twitter
  • Whatsapp

ಮುಂಡರಗಿ(ನ.06): ಕಪ್ಪತ್ತಗುಡ್ಡವು(Kappatagudda) ಆಯುರ್ವೇದ ಔಷಧಿಗಳ ತಾಣವಾಗಿದ್ದು, ವೈದ್ಯಕೀಯ ವಿದ್ಯಾರ್ಥಿಗಳು ಕಪ್ಪತಗುಡ್ಡಕ್ಕೆ ಭೇಟಿ ನೀಡಿ ಆಯುರ್ವೇದ ಔಷಧಗಳ ಕುರಿತು ವಿಶೇಷ ಸಂಶೋಧನೆ ನಡೆಸಬೇಕು ಎಂದು ಗದಗ ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೈ ಹೇಳಿದ್ದಾರೆ. 

ಅವರು ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಎಸ್‌.ಬಿ.ಎಸ್‌ ಆಯುರ್ವೇದ(Ayurveda) ಮೆಡಿಕಲ್ ಕಾಲೇಜ್‌ ಮತ್ತು ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಆಜಾದಿಕಾ ಅಮೃತ ಮಹೋತ್ಸವ ಹಾಗೂ 6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಧನ್ವಂತರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗದಗ: ಕಪ್ಪತ್ತಗುಡ್ಡದ ಸಸ್ಯ ಆಹುತಿ ಪಡೆಯುತ್ತಿರುವ ಬೆಂಕಿ..!

ಆಯುರ್ವೇದ ವಿದ್ಯಾರ್ಥಿಗಳಿಗೆ(Students) ಹಾಗೂ ಸಂಶೋಧಕರಿಗೆ(Researchers) ಆಯುರ್ವೇದದ ಕುರಿತು ಅಧ್ಯಯನ ನಡೆಸಲು ಕಪ್ಪತಗುಡ್ಡವು ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಬ್ಬಿರುವ ಕಪ್ಪತಗುಡ್ಡವು ಆಯುರ್ವೇದ ಔಷಧಿಗಳ ತಾಣವಾಗಿದ್ದು, ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಅಳವಂಡಿ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ, ಆಯುರ್ವೇದ ಔಷಧಿ(Ayurvedic Medicine) ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಹಲವಾರು ಕಾಯಿಲೆಗಳು(Diseases) ಗುಣವಾಗುತ್ತವೆ. ಹೀಗಾಗಿ ಆಯುರ್ವೇದ ಔಷಧ ಪರಿಣಾಮಕಾರಿಯಾಗಿದೆ ಎಂದರು.

ಆಯುರ್ವೇದ ತಜ್ಞ ಡಾ. ಕೆ. ಯೋಗೇಶನ್‌ ಮಾತನಾಡಿ, ನಿಸರ್ಗದಲ್ಲಿ(Nature) ದೊರೆಯುವ ಆಯುರ್ವೇದ ಔಷಧಿಯಲ್ಲಿ ಅಪಾರ ಶಕ್ತಿ ಇದೆ. ಇಂತಹ ಶಕ್ತಿಶಾಲಿ ಔಷಧಿಯನ್ನೇ ಪಡೆದುಕೊಳ್ಳಬೇಕು. ಅನುಭವಿ ಆಯುರ್ವೇದ ವೈದ್ಯರಿಂದ ರೋಗಕ್ಕೆ ತಕ್ಕಂತೆ ಔಷಧಿ ಪಡೆಯಬೇಕು ಎಂದು ಸಲಹೆ ನೀಡಿದರು.

ಕಪ್ಪತ್ತಗುಡ್ಡದ ತಂಟೆಗೆ ಬಂದರೆ ಹೋರಾಟ: ಸರ್ಕಾರಕ್ಕೆ ತೋಂಟದ ಶ್ರೀ ಖಡಕ್‌ ಎಚ್ಚರಿಕೆ

ಎಸ್‌.ಬಿ.ಎಸ್‌ ಆಯುರ್ವೇದ ಮೆಡಿಕಲ್‌ ಕಾಲೇಜ್‌ ಮತ್ತು ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಗುರುಮೂರ್ತಿಸ್ವಾಮಿ ಇನಾಮದಾರ ಮಾತನಾಡಿ, ನಮ್ಮ ಕಾಲೇಜು ಕಳೆದ ಹಲವು ವರ್ಷಗಳಿಂದ ನಾಡಿಗೆ ಆಯುರ್ವೇದ ವೈದ್ಯರನ್ನು(Ayurvedic Doctor) ನೀಡುವ ಮೂಲಕ ಉತ್ತಮವಾದ ಸಮಾಜ ಸೇವೆ(Social Service)ಸಲ್ಲಿಸುತ್ತಿದೆ. ಆಯುರ್ವೇದ ಔಷಧಿ ಆರೋಗ್ಯ ಮತ್ತು ಆಯುಷ್ಯವನ್ನು ವೃದ್ಧಿಸುತ್ತದೆ. ಪ್ರತಿಯೊಬ್ಬರು ಸಮಾಜದ ಬಗ್ಗೆ ತಮ್ಮದೆ ಆದ ಕರ್ತವ್ಯ ಹೊಂದುವುದರ ಜೊತೆಗೆ ಸೇವೆಯನ್ನು ಸಲ್ಲಿಸಬೇಕು ಎಂದರು.

ಎಸ್‌ಬಿಎಸ್‌ ಮೆಡಿಕಲ್‌ ಕಾಲೇಜಿನ ಕಾರ್ಯದರ್ಶಿ ಡಾ. ಸಿದ್ಧಲಿಂಗಸ್ವಾಮಿ ಇನಾಮದಾರ, ಪ್ರಾ. ಎಸ್‌.ಆರ್‌. ಜಾಹಗೀರದಾರ, ಡಾ. ಎಂ.ಸಿ. ಪಾಟೀಲ, ಆರ್‌ಎಫ್‌ಒ ಪ್ರದೀಪ ಪವಾರ, ಡಾ. ಸಲ್ಮಾ ಶಿರಿನ್‌, ಸುವರ್ಣಾ ಶೇಚ್‌, ಡಾ. ಮಹೇಶ ಬುಜರಿ, ಡಾ. ಬಿ.ಡಿ. ತಳವಾರ, ಡಾ. ಜ್ಯೋತಿ ಕೊಪ್ಪಳ, ಡಾ. ಶಿವಲೀಲಾ ಹಿರೇಮಠ, ಡಾ. ಸಬಿನಾ, ಡಾ. ಸಾವಿತ್ರಿ ಎಚ್‌, ಡಾ. ಸವಿತಾ, ಡಾ. ಬಾನು ಸೇರಿ ಹಲವರಿದ್ದರು. ತೃಪ್ತಿ ಕರಣ… ಹಾಗೂ ಮಸೀರಾ ನಿರೂಪಿಸಿದರು.

ಕಪ್ಪತ್ತಗುಡ್ಡದ ಮಣ್ಣು ತಿಂದು ಆರೋಗ್ಯ ಸುಧಾರಣೆ ಮಾಡಿಕೊಳ್ಳುತ್ತಿವೆ ಕುರಿ, ಮೇಕೆಗಳು..!

ಎಪ್ಪತ್ತು ಗಿರಿಗಿಂತ ಕಪ್ಪತ್ತ ಗಿರಿ ಮೇಲು ಎನ್ನುವ ಮಾತಿದೆ, ಅದಕ್ಕೆ ಮುಖ್ಯ ಕಾರಣ ಅಲ್ಲಿರುವ ಔಷಧಿ ಸಸ್ಯ ಎಂದು ಇದುವರೆಗೂ ಎಲ್ಲರಲ್ಲಿಯೂ ನಂಬಿಕೆ ಇತ್ತು, ಈಗ ಅದಕ್ಕಿಂತ ಆಶ್ಚರ್ಯದ ವಿಷಯವೆಂದರೆ ಅಲ್ಲಿನ ಮಣ್ಣಿನಲ್ಲಿಯೂ ಔಷಧಿ ಗುಣವಿದ್ದು, ಕಪ್ಪತ್ತಗುಡ್ಡದ ಮಣ್ಣು ತಿಂದು ಕುರಿಗಳು ತಮ್ಮ ಆರೋಗ್ಯ ಸುಧಾರಣೆ ಮಾಡಿಕೊಳ್ಳುವ ಪ್ರಕರಣ ಬೆಳಕಿಗೆ ಬಂದಿದೆ. 

ಮನುಷ್ಯರಿಗೆ ಗೊತ್ತಾಗದ ಈ ಗುಣ ಕುರಿಗಳಿಗೆ ಗೊತ್ತಾಗಿದೆ ಎನ್ನುವುದು ಮಾತ್ರ ಅಷ್ಟೇ ಸೋಜಿಗದ ಸಂಗತಿಯಾಗಿದೆ.  ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಾನ ಎಂದು ಗುರುತಿಸಿಕೊಂಡಿರುವ ಕಪ್ಪತ್ತಗುಡ್ಡದ ಮಣ್ಣಿನಲ್ಲಿಯೂ ಔಷಧವಿದೆ ಕುರಿಗಳು ಈ ಮಣ್ಣು ತಿಂದು ತಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತಿರುವುದು ಕೂಡಾ ಅಷ್ಟೇ ವಿಶೇಷವಾಗಿದೆ.

ಕಪ್ಪತ್ತಗುಡ್ಡದ ಈ ಭಾಗದಲ್ಲಿನ ಮಣ್ಣಿನಲ್ಲಿರುವ ಔಷಧಿ ಗುಣದ ಬಗ್ಗೆ ಕುರಿಗಾಯಿಗಳಿಗೂ ಸಾಕಷ್ಟು ತಿಳವಳಿಕೆ ಇದ್ದು ಕುರಿಗಳನ್ನು ಈ ಪ್ರದೇಶಕ್ಕೆ ತಂದು ಬಿಟ್ಟು ಇಲ್ಲಿಯ ಮಣ್ಣನ್ನು ತಿನಿಸುತ್ತಾರೆ. ಇದರಿಂದ ಕುರಿಗಳು ಹೊಟ್ಟೆ ನೋವು, ಜ್ವರ, ಹೀಗೆ ನಾನಾ ಕಾಯಿಲೆ ಸಹಜವಾಗಿಯೇ ಕಡಿಮೆಯಾಗುತ್ತವೆ. ಅದಲ್ಲದೇ ಪ್ರತಿ ದಿನ ಹುಲ್ಲು ತಿಂದು ಕುರಿಗಳು ಬಾಯಿ ಸವಳುಗಟ್ಟಿರುತ್ತವೆ. ಇಲ್ಲಿನ ಹೆಚ್ಚು ಲವಣಾಂಶ ಇರುವ ಮಣ್ಣನ್ನು ತಿನ್ನುವುದರಿಂದಾಗಿ ಕುರಿಗಳ ಬಾಯಿ ರುಚಿ ಹೆಚ್ಚಾಗುತ್ತದೆ. ಜೊತೆಗೆ ಹಲ್ಲುಗಳ ನೋವಿನ ಕಾಯಿಲೆ ಮಾಯವಾಗಿತ್ತದೆ ಅನ್ನೋದು ಕುರಿಗಾಯಿಗಳ ನಂಬಿಕೆಯಾಗಿದೆ.
 

Follow Us:
Download App:
  • android
  • ios