ಮೈಸೂರು: ತಿ.ನರಸೀಪುರದಲ್ಲಿ ನಿಲ್ಲದ ಚಿರತೆ ಉಪಟಳ, ಆತಂಕದಲ್ಲಿ ಜನತೆ..!
ನಿನ್ನೆ ತಡರಾತ್ರಿ ಚಿದರವಳ್ಳಿ ಮತ್ತು ಕಾಳಿಹುಂಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಮೈಸೂರು(ಜ.25): ಜಿಲ್ಲೆಯ ತಿ.ನರಸೀಪುರದಲ್ಲಿ ಚಿರತೆ ಉಪಟಳ ನಿಲ್ಲುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಹೌದು, ದಿನನಿತ್ಯ ಒಂದಲ್ಲ ಒಂದು ಗ್ರಾಮದಲ್ಲಿ ಪ್ರತ್ಯಕ್ಷವಾಗುತ್ತಿರುವ ಚಿರತೆ, ನಿನ್ನೆ(ಮಂಗಳವಾರ) ತಡರಾತ್ರಿ ಚಿದರವಳ್ಳಿ ಮತ್ತು ಕಾಳಿಹುಂಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಚಿರತೆ ಉಪಟಳದಿಂದ ಜನರು ಹೈರಾಣಗಿದ್ದಾರೆ. ಮತ್ತೊಂದು ಕಡೆ ಅರಣ್ಯಾಧಿಕಾರಿಗಳ ಮೇಲೆ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ತಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಬೆಟ್ಟದಲ್ಲಿ ಮನುಷ್ಯರನ್ನ ತಿನ್ನುತ್ತಿದ್ದ ಚಿರತೆ ಸೆರೆ ಹಿಡಿದ್ವಿ ಎಂದು ಹೇಳಿದ್ರಿ, ಆದ್ರೆ ನಿಜಕ್ಕೂ ಆ ಚಿರತೆ ಸೆರೆ ಆಗಿದಿಯಾ?, ಮನುಷ್ಯರನ್ನ ತಿನ್ನುತ್ತಿರುವ ಚಿರತೆ ಬೇರೆನಾ?. ನೀವು ಹಿಡಿದಿರುವ ಚಿರತೆಯ ಬಗ್ಗೆ ಮಾಹಿತಿ ನೀಡಿ ಅಂತ ಅರಣ್ಯಾಧಿಕಾರಿಗಳಿಗೆ ಜನತೆ ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಚಿರತೆ ಹಾವಳಿ: 15 ದಿನಗಳೊಳಗೆ ಕಬ್ಬು ಕಟಾವಿಗೆ ಡಿಸಿ ಸೂಚನೆ
ಸೆರೆ ಸಿಕ್ಕಿರುವ ಚಿರತೆಗಳ ಬಗ್ಗೆ ಮಾಹಿತಿಯನ್ನ ಯಾಕೆ ನೀಡುತ್ತಿಲ್ಲ, ಚಿರತೆ ದಾಳಿ ಹೆಚ್ಚಾದ ಬೆನ್ನಲ್ಲೇ ಅರಣ್ಯಧಿಕಾರಿಗಳಿಗೆ ತಾಲೂಕಿನ ಜನತೆ ಪ್ರಶ್ನಿಸಿದ್ದಾರೆ.