Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಚಿರತೆ ಕಾಟದಿಂದ ಬೇಸತ್ತ ರೈತರು, ಆತಂಕದಲ್ಲಿ ಜನತೆ

ಕೆಲವು ದಿನಗಳಿಂದ ಉಪ್ಪಾರಹಳ್ಳಿ, ಕೊಂಡರೆಡ್ಡಿಹಳ್ಳಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಚಿರತೆ ಪ್ರತ್ಯೇಕ್ಷವಾಗಿ ರೈತರ ಕುರಿ ಮೇಕೆ ದನ ಕರುಗಳನ್ನು ತಿಂದು ಹಾಕಿದೆ.

People Anxious For Leopard Attack on Animals in Chikkaballapur grg
Author
Bengaluru, First Published Jul 19, 2022, 10:02 PM IST

ಚಿಕ್ಕಬಳ್ಳಾಪುರ(ಜು.19):  ಈಗ ಮುಂಗಾರು ಹಂಗಾಮು, ಎಲ್ಲಡೆ ಉತ್ತಮ ಮಳೆಯಾಗಿ ಭೂಮಿ ಹದವಾಗಿದೆ. ಜಮೀನಿಗೆ ತೆರಳಿ ಕೆಲಸ ಮಾಡೊಣ ಅಂತ ರೈತರು ಮುಂದಾದ್ರೆ. ಜಮೀನು ಬಳಿ ಚಿರತೆ ಪ್ರತ್ಯೇಕ್ಷವಾಗಿ, ದನ ಕರು ಕುರಿ ಮೇಕೆಗಳನ್ನು ತಿಂದು ಹಾಕ್ತಿದೆ. ಇನ್ನು ರಾತ್ರಿಯಾದ್ರೆ ಸಾಕು, ಮನೆ ಬಳಿಯೆ ಬರುವ ಚಿರತೆ ಬಾಯಿಗೆ ಸಿಕ್ಕ ಪ್ರಾಣಿಗಳನ್ನು ಎಳೆದುಕೊಂಡು ಹೋಗಿ ತಿಂದು ಹಾಕ್ತಿದೆ. ಇದ್ರಿಂದ ಭಯ ಭೀತಿಗೊಂಡ ಗ್ರಾಮಸ್ಥರು, ಹಗಲು ರಾತ್ರಿ ದೊಣ್ಣೆ ಹೊತ್ತು ಚಿರತೆ ಕಾಯುವಂತಾಗಿದೆ.  ಕೆಲವು ದಿನಗಳಿಂದ ಉಪ್ಪಾರಹಳ್ಳಿ, ಕೊಂಡರೆಡ್ಡಿಹಳ್ಳಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಚಿರತೆ ಪ್ರತ್ಯೇಕ್ಷವಾಗಿ ರೈತರ ಕುರಿ ಮೇಕೆ ದನ ಕರುಗಳನ್ನು ತಿಂದು ಹಾಕಿದೆ, ಇದ್ರಿಂದ ರೈತರು ಚಿರತೆಯಿಂದ ಬಚಾಯ್ ಆಗಲು, ಜಮೀನುಗಳ ಕಡೆ ಹೋಗುವುದನ್ನು ಬಿಟ್ಟಿದ್ದಾರೆ. ಇನ್ನೂ ಉಪ್ಪಾರಹಳ್ಳಿ ಗ್ರಾಮದ ಆಂಜಿನಪ್ಪಗೆ ಸೇರಿದ ಮೂರು ಮೇಕೆಗಳನ್ನು ಚಿರತೆ ತಿಂದು ಹಾಕಿದೆ.

ಉಪ್ಪಾರಹಳ್ಳಿ ಗ್ರಾಮದ ಬಳಿ ಕಲ್ಲು ಕ್ವಾರಿಯಲ್ಲಿ ಚಿರತೆ ಪ್ರತ್ಯೇಕ್ಷವಾಗಿದೆ, ರಾತ್ರಿಯಾದ್ರೆ ಉಪ್ಪಾರಹಳ್ಳಿ ಬಳಿ ಆಗಮಿಸ್ತಿದೆ. ಗ್ರಾಮದ  ನಾಯಿ, ಕುರಿ, ಕೋಳಿ, ಮೇಕೆ ಎಳೆದುಕೊಂಡು ಹೋಗಿ ತಿಂದು ಹಾಕಿದೆ. ಹಗಲು ರೈತರ ಜಮೀನಿನ ಬಳಿ ಕಾಣಿಸ್ತಿದೆ, ಒಂದೊಂದು ದಿನ ಒಂದೊಂದು ಕಡೆ ಚಿರತೆ ಕಾಣಿಸ್ತಿದೆ, ಇದ್ರಿಂದ ರೈತರು ಈಗ ಮನೆ ಬಿಟ್ಟು ಒಬ್ಬೊಬ್ಬರೆ ಜಮೀನು ಬಳಿ ಹೋಗಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯ ಮಾಡ್ತಿದ್ದಾರೆ.

ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಪ್ರಮಾಣ ಭಾರೀ ಕುಸಿತ!

ಇನ್ನು ಕೊಂಡರೆಡ್ಡಿಹಳ್ಳಿ ಗ್ರಾಮದ ಬಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯವಿದ್ದು, ಅಲ್ಲಿಯೂ ಚಿರತೆ ಸುಳಿದಾಡಿದೆ, ಇದ್ರಿಂದ ವಿದ್ಯಾರ್ಥಿನಿಯರು ಶಾಲೆಯಿಂದ ಆಚೆ ಬರಲು ಹೆದರುತ್ತಿದ್ದಾರೆ. ಮತ್ತೊಂದೆಡೆ ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನ್ ಇಟ್ಟಿದೆ, ಬೋನ್ ಸುತ್ತಮುತ್ತ ಚಿರತೆ ಸುಳಿದಾಡಿದೆ ಆದ್ರೆ ಬೋನಿಗೆ ಚಿರೆತ ಬಿದ್ದಿಲ್ಲ, ಏನಾದ್ರು ಮಾಡಿ ಚಿರತೆ ಕಾಟದಿಂದ ಮುಕ್ತಿ ಕೊಡಿಸುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
 

Follow Us:
Download App:
  • android
  • ios