ಮಂಗಳೂರು (ಸೆ.03): ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನವಿಲಿನ ನಾಲ್ಕು ಮೊಟ್ಟೆಗಳು ಸಿಕ್ಕಿದ್ದು, ಪಿಲಿಕೊಳ ನಿಸರ್ಗಧಾಮಕ್ಕೆ ನೀಡಲಾಗಿದೆ. 

ಪಡುಬಿದ್ರಿಯ ರಾಷ್ಟ್ರೀಯ  ಹೆದ್ದಾರಿ ಪಕ್ಕದಲ್ಲಿ ನವಿಲು ಮೊಟ್ಟೆಗಳು ದೊರೆತಿದ್ದು, ಸಂರಕ್ಷಿಸಿ ಮರಿ ಮಾಡಲು ನಿಸರ್ಗಧಾಮದ ವಶಕ್ಕೆ ನೀಡಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುತ್ತಿಗೆದಾರರು ಹುಲ್ಲು ಕಟಾವು ಮಾಡುತ್ತಿದ್ದ ವೇಳೆ ನವಿಲಿನ ಮೊಟ್ಟೆಗಳು ದೊರೆತಿವೆ. ಹುಲ್ಲಿನ ಪೊದೆ ಮಧ್ಯದಲ್ಲಿ ನಾಲ್ಕು ಮೊಟ್ಟೆಗಳು ಸಿಕ್ಕಿವೆ. 

ಅಪರೂಪದ ವಿಡಿಯೋ: ನವಿಲನ್ನು ಎದುರು ಹಾಕಿಕೊಂಡ ಹುಂಜ! ಮುಂದೆ ನಡೆದದ್ದು ಬಿಗ್‌ ಫೈಟ್

ಬಳಿಕ ಪರಿಶೀಲಿಸಿದಾಗ ನವಿಲಿನ ಮೊಟ್ಟೆಗಳು ಎಂದು ತಿಳಿದು ಬಂದಿದ್ದು, ಅವುಗಳನ್ನು ಪೆಟ್ಟಿಗೆಯೊಂದರಲ್ಲಿ ಜೋಪಾಲವಾಗಿ ಇರಿಸಿ ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿದೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ನವಿಲಿನ ಮೊಟ್ಟೆಗಳನ್ನು ನಿಸರ್ಗಧಾಮಕ್ಕೆ ನೀಡಿದರು.

ನವಿಲು ನಮ್ಮ ರಾಷ್ಟ್ರಪಕ್ಷಿಯಾಗಿದ್ದು, ಅದನ್ನು ಸಂರಕ್ಷಿಸಲಾಗುತ್ತಿದೆ. ಇದೀಗ ಮೊಟ್ಟೆಗಳನ್ನು ಸಂರಕ್ಷಣೆಯ ದೃಷ್ಟಿಯಿಂದ ನಿಸರ್ಗಧಾಮದ ವಶಕ್ಕೆ ನೀಡಲಾಗಿದೆ.