ಪಿಡಿಒ ಪ್ರಶ್ನೆಪತ್ರಿಕೆ ವಿವಾದಕ್ಕೆ ಮತ್ತೊಂದು ಟ್ವಿಸ್ಟ್!
ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಪಿಡಿಒ ಪರೀಕ್ಷೆ ವೇಳೆ ಗೊಂದಲ ಸೃಷ್ಟಿಸಿದ ಆರೋಪದಡಿ 12 ಅಭ್ಯರ್ಥಿಗಳ ವಿರುದ್ಧ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಇದನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಪ್ರಶ್ನಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದರು. ಆದರೆ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಸಿಂಧನೂರು(ಡಿ.15): ಕಲ್ಯಾಣ ಕರ್ನಾಟಕ ವೃಂದದ 97 ಪಿಡಿಒ ಪರೀಕ್ಷೆ ನ.17 ರಂದು ಇಲ್ಲಿನ ಸರ್ಕಾರಿ ಕಾಲೇಜ್ ನಲ್ಲಿ ನಡೆದ ವೇಳೆ ಪ್ರಶ್ನೆಪತ್ರಿಕೆ ಹಂಚಿಕೆ ವಿಳಂಬ ಗೊಂದಲ ರಾಜ್ಯ ವ್ಯಾಪಿ ಸುದ್ದಿಯಾಗಿತ್ತು. ಇದೀಗ ಆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಕೊಳ್ಳಲು 12 ಅಭ್ಯರ್ಥಿಗಳ ಮೇಲೆ ಕೇಸ್ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಹೌದು, ಸಿಂಧನೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಪಿಡಿಒ ಪರೀಕ್ಷೆ ವೇಳೆ ಗೊಂದಲ ಸೃಷ್ಟಿಸಿದ ಆರೋಪದಡಿ 12 ಅಭ್ಯರ್ಥಿಗಳ ವಿರುದ್ಧ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಇದನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಪ್ರಶ್ನಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದರು. ಆದರೆ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಪಿಡಿಒ ಪರೀಕ್ಷೆ ಗೊಂದಲ: ಮುಖ್ಯಮಂತ್ರಿಗೇ ತಪ್ಪು ಮಾಹಿತಿ ನೀಡಿತೇ ಕೆಪಿಎಸ್‌ಸಿ?
ಮುಖ್ಯಮಂತ್ರಿ ಉತ್ತರದ ಬಳಿಕ ನೊಂದ ಅಭ್ಯರ್ಥಿಗಳಿಂದ ಈಗ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಕೊಠಡಿ ಮೇಲ್ವಿಚಾರಕರಿಗೆ ತಡವಾಗಿ ಪ್ರಶ್ನೆ ಪತ್ರಿಕೆ ಬಂದಿದ್ದು ಬಹಿರಂಗಗೊಂಡಿದೆ. ಅಂದು ಬೆಳಗ್ಗೆ 9-30 ಕ್ಕೆ ಪ್ರಶ್ನೆಪತ್ರಿಕೆ ಕೊಠಡಿ ಮೇಲ್ವಿಚಾರಕರಿಗೆ ನೀಡಬೇಕು ಎಂಬ ನಿಯಮವಿತ್ತು. ಅದರ ಬದಲಾಗಿ 9-30ಕ್ಕೆ 24 ಪ್ರಶ್ನೆ ಪತ್ರಿಕೆ ಬದಲು, ಕೇವಲ 12 ಪ್ರಶ್ನೆ ಪತ್ರಿಕೆ ನೀಡಿದಕ್ಕೆ ಅಭ್ಯರ್ಥಿಗಳು ಆಕ್ರೋಶಗೊಂಡು ರಂಪಾಟ ಮಾಡಿ ಕಾಲೇಜನಿಂದ ಹೊರಗಡೆ ಬಂದರು.
ಬಳಿಕ ದಿಢೀರ್ ರಾಜ್ಯ ಹೆದ್ದಾರಿ ತಡೆ ಮಾಡಿ ಸಂಚಾರ ತಡೆದರು. ಹೀಗೆ ಸುಮಾರು ನಾಲ್ಕು ತಾಸು ನಡೆದ ರಸ್ತೆ ತಡೆ ಚಳವಳಿಯಿಂದಾಗಿ ಸುಮಾರು 3-4 ಕಿಲೋ ಮೀಟರ್ನಷ್ಟು ಟ್ರಾಫಿಕ್ ಜಾಮ್ ಆಗಿ, ಸಂಚಾರಕ್ಕೆ ತಡೆವುಂಟಾಗಿ ಇದು ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಯಿತು. ಜನ ಪ್ರತಿನಿಧಿಗಳುಗಳು, ಪೊಲೀಸ್ ಅಧಿಕಾರಿಗಳು ಎಷ್ಟೇ ಪ್ರಯತ್ನಪಟ್ಟರೂ ಹೋರಾಟ ನಿಲ್ಲಲಿಲ್ಲ. ಈ ಮಧ್ಯೆ ಅಭ್ಯರ್ಥಿಗಳು ಆಕ್ರೋಶಗೊಂಡಾಗ ಬೆಳಗ್ಗೆ10-45 ಕ್ಕೆ ಪ್ರಶ್ನೆಪತ್ರಿಕೆ ತಂದ ಕೊಠಡಿ ಮೇಲ್ವಿಚಾರಕರು, ವಿಡಿಯೋದಲ್ಲಿ ಅಭ್ಯರ್ಥಿಗಳು ಕೇಳಿದಕ್ಕೆ ಸಮಯ ತಿಳಿಸಿದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿ, ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.
ಪಿಡಿಒ ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ, ಆದರೂ ವರದಿ ಬಳಿಕ ಕ್ರಮ: ಸಿದ್ದರಾಮಯ್ಯ
ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಕೊಳ್ಳಲು ಅಭ್ಯರ್ಥಿಗಳ ಮೇಲೆ ಕೇಸ್ ಹಾಕಿದ ಬಗ್ಗೆ ಎಲ್ಲೆಡೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ಇದು ಭಾರೀ ಸದ್ದು ಮಾಡುತ್ತಿದೆ. ನೊಂದ ಅಭ್ಯರ್ಥಿಗಳ ಪರ ಸಹಾನುಭೂತಿಯೂ ಸಹ ಕೇಳಿ ಬರುತ್ತಿದೆ. ಸರಕಾರ ಮತ್ತು ಅಧಿಕಾರಿಗಳು ತಮ್ಮ- ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಮಾಯಕ ಪರೀಕ್ಷಾರ್ಥಿಗಳ ಮೇಲೆ ಕೇಸು ಹಾಕಿರುವುದು ಸಾರ್ವಜನಿಕರ, ನೆಟ್ಟಿಗರ ಆಕ್ರೋಶಕ್ಕಂತೂ ಕಾರಣವಾಗಿದೆ.
ಪ್ರಕರಣದ ಕುರಿತು ಸಿ.ಎಂ.ಸಿದ್ದರಾಮಯ್ಯ ಅವರು ಈಗಾಗಲೇ ತ್ರಿಸದಸ್ಯ ಮಂಡಳಿ ರಚಿಸಿದ್ದಾರೆ. ಇದು ಹತ್ತರಲ್ಲಿ ಹನ್ನೊಂದು ಎಂಬಂತಾಗದೆ ನೊಂದ ಅಭ್ಯರ್ಥಿಗಳ ಕಣ್ಣೀರು ಒರೆಸುವಂತಾಗಲಿ, ನ್ಯಾಯ ದೊರಕಲಿ ಎoಬುದು ಶಿಕ್ಷಣ ಪ್ರೇಮಿಗಳ ಒತ್ತಾಸೆಯಾಗಿದೆ.