ಚಿಕ್ಕಮಗಳೂರು: ಮಗಳ ಪ್ರೀತಿ ಮೆಚ್ಚಿ ಮದುವೆ ಮಾಡಿದ್ದಕ್ಕೆ ಅಪ್ಪ-ಅಮ್ಮನಿಗೆ ಬಹಿಷ್ಕಾರ
ಮಗಳ ಪ್ರೀತಿ ಮೆಚ್ಚಿ ಮದುವೆ ಮಾಡಿದ್ದಕ್ಕೆ ಅಪ್ಪ-ಅಮ್ಮನಿಗೆ ಬಹಿಷ್ಕಾರ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.18): ಮಗಳ ಪ್ರೀತಿ ಮೆಚ್ಚಿ ಮದುವೆ ಮಾಡಿದ್ದಕ್ಕೆ ಅಪ್ಪ-ಅಮ್ಮನಿಗೆ ಬಹಿಷ್ಕಾರ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ. ಭೋವಿ ಜನಾಂಗದ ಹುಡುಗಿ, ಆದಿಕರ್ನಾಟಕ (ಮಾದಿಗ) ಜನಾಂಗದ ಹುಡುಗನನ್ನ ಮದುವೆಯಾಗಿದ್ದಕ್ಕೆ ಭೋವಿ ಜನಾಂಗಕ್ಕೆ ಭೋವಿ ಜನಾಂಗದಿಂದಲೇ ಬಹಿಷ್ಕಾರ ಹಾಕಿದ್ದಾರೆ.
ಭೋವಿ ಜನಾಂಗಕ್ಕೆ ಭೋವಿ ಜನಾಂಗದಿಂದಲೇ ಬಹಿಷ್ಕಾರ: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಇಂದಿಗೂ ಅನಿಷ್ಠಪದ್ದತಿಯೊಂದು ಜೀವಂತವಾಗಿದೆ. ಬೋವಿ ಹುಡ್ಗಿಯನ್ನ ಆದಿ ಕರ್ನಾಟಕದವನಿಗೆ ಹೇಗೆ ಕೊಟ್ರಿ ಅಂತ ಬೋವಿ ಜನಾಂಗದವರೇ ಬೋವಿಯವರಿಗೆ ಬಹಿಷ್ಕಾರ ಹಾಕಿದ್ದಾರೆ.ಹಳ್ಳಿಯಲ್ಲಿ ತಮ್ಮ ಜನಾಂಗದ ಜನ ಮಗಳ ಮದುವೆ ಮಾಡಿದ್ದಕ್ಕೆ ನಮಗೇ ಬಹಿಷ್ಕಾರ ಹಾಕಿದ್ದಾರೆ ಎಂದು ಜಿಲ್ಲಾಧಿಕಾರಿಗೆ ದೂರು ನೀಡಲು ಅರ್ಜಿ ಹಿಡಿದು ಅಲೆದಾಡುತ್ತಿದ್ದಾರೆ. ಅಸಲಿಗೆ ಬಹಿಷ್ಕಾರಕ್ಕೆ ಕಾರಣ ಇಷ್ಟೆ.ಗ್ರಾಮದ ಜಯಮ್ಮ ಅವರಿಗೆ ನಾಲ್ಕು ಜನ ಹೆಣ್ಣು, ಒಂದು ಗಂಡು ಮಗು.
ಮೈಸೂರು ಪ್ರಕರಣ ಬೆನ್ನಲ್ಲೇ ಚಿಕ್ಕಮಗಳೂರಿನ ಮನೆಗಳ ಮೇಲೆ ಕಲ್ಲು ತೂರಾಟ
ಮೂವರು ಮಕ್ಕಳಿಗೆ ತಮ್ಮದೇ ಜನಾಂಗದವರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ನಾಲ್ಕನೇ ಮಗಳು ಓದುವಾಗ ಆದಿಕರ್ನಾಟಕದ ಜನಾಂಗದ ಹುಡುಗನನ್ನ ಪ್ರೀತಿಸಿದ್ಲು. ಅದಕ್ಕೆ ಎರಡೂ ಮನೆಯವರು ಒಪ್ಪಿದ್ರು. ಜಯಮ್ಮ ಕೂಡ ತಮ್ಮದೇ ಜನಾಂಗದವರಿಗೆ ಕೊಟ್ರು ಮಕ್ಕಳು ಕಷ್ಟ-ಸುಖ ನೋಡ್ತಿದ್ದಾರೆ. ಒಬ್ಬಳು ಗಂಡನ ಮನೆಯಿಂದ ಬಂದು ಮನೆಯಲ್ಲೇ ಇದ್ದಾಳೆ. ಮಕ್ಕಳು ಚೆನ್ನಾಗಿದ್ರೆ ಸಾಕು ಅಂತ ಪ್ರೀತಿಸಿದವನ ಜೊತೆಯೇ ಮದುವೆ ಮಾಡಿದ್ರು. ಅದಕ್ಕೆ ಭೋವಿ ಜನಾಂಗದವರು ಆದಿ ಕರ್ನಾಟಕದ ಹುಡುಗನಿಗೆ ಏಕೆ ಮದುವೆ ಮಾಡಿಕೊಟ್ರಿ ಎಂದು ಸ್ವ ಜನಾಂಗಕ್ಕೆ ವರ್ಷದಿಂದ ಬಹಿಷ್ಕಾರ ಹಾಕಿದ್ದಾರೆ. ಊರಲ್ಲಿ ತಮ್ಮ ಪರಿಸ್ಥಿತಿ ಕಂಡು ಮಹಿಳೆ ಜಯಮ್ಮ ಜಿಲ್ಲಾಧಿಕಾರಿ ಕಚೇರಿ ಬಾಗಿಲಲ್ಲಿ ನ್ಯಾಯಕ್ಕಾಗಿ ಕಣ್ಣೀರಿಡ್ತಿದ್ದಾರೆ.
ಬಹಿಷ್ಕಾರಕ್ಕೆ ಕಣ್ಣೀರು ಹಾಕುತ್ತಿರುವ ಮಹಿಳೆ: ಇನ್ನು ಬಹಿಷ್ಕಾರ ಹಾಕಿರೋದು ಓರ್ವ ಶಿಕ್ಷಕನಂತೆ. ಊರಿನ ಜನರಿಗೆ ಹೇಳಿ-ಹೇಳಿ ಇವರನ್ನ ಊರಿನ ಭೋವಿ ಜನಾಂಗದ ಜನ ಮಾತನಾಡಿಸುವುದನ್ನೇ ಬಿಟ್ಟಿದ್ದಾರೆ. ಊರಿನ ಜನ ಎಲ್ಲರ ಎಲ್ಲಾ ಜನಾಂಗದವರ ಮನೆಗೆ ಹೋಗುತ್ತಾರೆ. ಆದಿಕರ್ನಾಟಕ ಜನಾಂಗದವರ ಮನೆಗೂ ಹೋಗುತ್ತಾರೆ. ಆದರೆ, ಇವರನ್ನ ಮಾತ್ರ ಬಹಿಷ್ಕಾರ ಹಾಕಿದ್ದಾರೆ. ಇವರನ್ನ ಯಾರೂ ಮಾತನಾಡಿಸುವಂತಿಲ್ಲ. ಯಾರು ಯಾವ ಕಾರ್ಯಕ್ರಮಕ್ಕೂ ಕರೆಯುವುದಿಲ್ಲ. ದೇವಸ್ಥಾನಕ್ಕೂ ಹೋಗುವಂತಿಲ್ಲ. ಒಮ್ಮೆ ದೇವಸ್ಥಾನಕ್ಕೆ ಹೋದಾಗ ಹಲ್ಲೆ ಮಾಡಿ ದೇವಸ್ಥಾನದಿಂದ ಹೊರಕ್ಕೆ ಕಳಿಸಿದ್ದಾರೆ. ಹಾಗಾಗಿ, ಮಹಿಳೆ ಜಯಮ್ಮ ಊರಲ್ಲಿ ಅನಾಥರಂತೆ ಬದುಕುತ್ತಿದ್ದಾರೆ. ಸ್ವಂತ ಜಾತಿ, ಧರ್ಮದವರಿಗೆ ಮದುವೆ ಮಾಡಿಕೊಟ್ರು ಹೆಣ್ಣು ಮಕ್ಕಳ ಜೀವನ ಹಾಳಾಗ್ತಿದೆ.
ಸರ್ವೇಯರ್ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಛೇರಿಯಲ್ಲಿ ಡೆತ್‌ನೋಟ್ ಪತ್ತೆ!
ಕಷ್ಟದಲ್ಲಿ ಬದುಕುತ್ತಾರೆ. ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ವರದಕ್ಷಿಣೆ ಕಿರುಕುಳದಿಂದ ಸಾಯುತ್ತಿದ್ದಾರೆ. ಆದರೆ, ಜನ ಇನ್ನು ಜಾತಿ ಅಂತ ನಮಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.ಒಟ್ಟಾರೆ, ಒಂದು ವರ್ಷದಿಂದ ಬಹಿಷ್ಕಾರದ ಅರೋಪ ಮಾಡಿ ಜಿಲ್ಲಾಧಿಕಾರಿಗೆ ನ್ಯಾಯಕ್ಕಾಗಿ ಅಗ್ರಹಿಸ್ತಿದ್ದಾರೆ ನೊಂದ ಮಹಿಳೆ. ಭೋವಿ ಜನಾಂಗದವರು ಆದಿಕರ್ನಾಟಕದ ಜನಾಂಗದವರ ಮನೆಗೆ ಕಾರ್ಯಕ್ರಮಕ್ಕೆ ಹೋಗಬಹುದು. ಊಟ ಮಾಡಿ ಬರಬಹುದು. ಆದರೆ, ಆದಿ ಕರ್ನಾಟಕ ಜನಾಂಗದ ಹುಡುಗನಿಗೆ ಮಗಳ ಕೊಟ್ಟಿದ್ದಕ್ಕೆ ಜಾತಿ ಹಾಳಾಗಿದೆ ಎಂದು ಅದೇ ಜನಾಂಗದವರು ಬಹಿಷ್ಕಾರ ಹಾಕಿದ್ದಾರೆ. ಇಂದಿನ ಆಧುನಿಕಯ ಯುಗದಲ್ಲೂ ಜನ ಮಾತ್ರ ಜಾತಿ-ಜಾತಿ ಅಂತ ಈ ರೀತಿ ಕಿತ್ತಾಡುತ್ತಿದ್ದಾರೆ. ಇಂದಿನ ಅಧುನಿಕ ಜಗತ್ತಿನಲ್ಲಿ ಹೀಗೂ ಬಹಿಷ್ಕಾರ ಇರೋದು ಮಾತ್ರ ನಿಜಕ್ಕೂ ದುರಂತ.