Mandya; ಖಾಯಿಲೆ ಎಂದು ಮಗುವನ್ನು ಚರ್ಚ್‌ನಲ್ಲಿ ಬಿಟ್ಟು ಪೋಷಕರು ಪರಾರಿ!
ಮಂಡ್ಯದಲ್ಲಿ ಮಗುವಿಗೆ ಖಾಯಿಲೆ ಇದೆ ಎಂಬ ಕಾರಣಕ್ಕೆ ಚರ್ಚ್‌ನಲ್ಲಿ ಮಗು ಬಿಟ್ಟು ಪೋಷಕರು ಪರಾರಿಯಾಗಿರುವ ಘಟನೆ ನಡೆದಿದೆ.
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣನ್ಯೂಸ್
ಮಂಡ್ಯ (ಮೇ.27): ಜಗತ್ತೇ ಎದುರಾದ್ರು ಜನ್ಮ ಕೊಟ್ಟವರು ಮಾತ್ರ ನಮ್ಮ ಕೈ ಬಿಡಲ್ಲ. ಕಷ್ಟವೋ ಸುಖವೋ ಮಕ್ಕಳು ಚೆನ್ನಾಗಿರಲಿ ಅಂತ ತಮ್ಮ ಇಡೀ ಜೀವನ ಮುಡಿಪಾಗಿಡ್ತಾರೆ. ಆದ್ರೆ ಮಂಡ್ಯದಲ್ಲಿ (Mandya) ಮಗುವಿಗೆ (Child) ಖಾಯಿಲೆ ಇದೆ ಎಂಬ ಕಾರಣಕ್ಕೆ ಚರ್ಚ್‌ನಲ್ಲಿ (Church) ಮಗು ಬಿಟ್ಟು ಪೋಷಕರು ಪರಾರಿಯಾಗಿದ್ದಾರೆ. ಹೆತ್ತವರ ಪ್ರೀತಿಯಿಂದ ವಂಚಿತವಾದ ಮಗು ಈಗ ಅನಾಥವಾಗಿದೆ. ಕಲ್ಲು ಹೃದಯದ ಪೋಷಕರು ಮಾಡಿದ ತಪ್ಪಿಗೆ 8-9 ತಿಂಗಳ ಗಂಡು ಮಗು ಅನಾಥವಾಗಿದೆ. ಅನಾರೋಗ್ಯ ಪೀಡಿತ ಮಗು ಎಂಬ ಕಾರಣಕ್ಕೆ ಜನ್ಮ ನೀಡಿದ ತಂದೆ ತಾಯಿಯೇ ನಡುನೀರಲ್ಲಿ ಮಗು ಕೈ ಬಿಟ್ಟಿದ್ದಾರೆ. ಈ ಸಮಯದಲ್ಲಿ ಹೆತ್ತವರ ಲಾಲನೆ ಪಾಲನೆ ಜೊತೆ ಬೆಳೆಯ ಬೇಕಿದ್ದ ಮಗು ಈಗ ಅನಾಥ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಿದೆ.
ಫಾದರ್ ಆಶೀರ್ವಾದ ಪಡೆಯುವ ನೆಪದಲ್ಲಿ ಬಂದು ಮಗು ಬಿಟ್ಟು ಪರಾರಿ
ಮೇ. 26 ಗುರುವಾರ ಬೆಳಿಗ್ಗೆ 6:30ರ ಸಮಯಕ್ಕೆ ಮಂಡ್ಯದ ಫ್ಯಾಕ್ಟರಿ ಸರ್ಕಲ್‌ನಲ್ಲಿರುವ ಚರ್ಚ್‌ಗೆ ವ್ಯಕ್ತಿಯೊಬ್ಬ ಮಗುವಿನೊಂದಿಗೆ ಬಂದಿದ್ದಾನೆ. ಚರ್ಚ್ ಹೊರಭಾಗದಲ್ಲಿ ಮಹಿಳೆಯೊಬ್ಬಳನ್ನ ನಿಲ್ಲಿಸಿ ಮಗು ಜೊತೆಗೆ ಪ್ರಾರ್ಥನಾ ಸ್ಥಳಕ್ಕೆ ಬಂದ ಆತ ಅಲ್ಲಿದ್ದ ಸಿಬ್ಬಂದಿ ಸ್ಟೀಫನ್ ಎಂಬುವರನ್ನ ಫಾಧರ್ ಬಗ್ಗೆ ವಿಚಾರಿಸಿದ್ದನು. ಮಗುವಿಗೆ ಅನಾರೋಗ್ಯ ಹಾಗಾಗಿ ಫಾದರ್ ಬಳಿ ಆಶೀರ್ವಾದ ಪಡೆಯಬೇಕಿದೆ ಎಂದಿದ್ದ. ಕೆಲಹೊತ್ತಿನಲ್ಲಿ ಫಾಧರ್ ಬರುವುದಾಗಿ ಚರ್ಚ್ ಸಿಬ್ಬಂದಿ ಹೇಳಿದ್ರು. ಈ ವೇಳೆ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಮಗು ಬಿಟ್ಟು ಹೋದ ವ್ಯಕ್ತಿ ನಾಪತ್ತೆಯಾಗಿದ್ದ. ಬಳಿಕ ಸೆಕ್ಯುರಿಟಿ ಗಾರ್ಡ್ ವಿಚಾರಿಸಿದ ಸಿಬ್ಬಂದಿಗೆ ಅವರ ಸುಳಿವು ಪತ್ತೆ ಆಗಲಿಲ್ಲ. ಅಕ್ಕ ಪಕ್ಕದ ರಸ್ತೆಗಳಲ್ಲಿ ಹುಡುಕಿದ್ರು ಅವರು ಸಿಗಲಿಲ್ಲ.
ಮನೆ ಬಾಗಿಲಿಗೆ ಶಾಲೆ ಯೋಜನೆಗೆ BBMP ಚಾಲನೆ
ಅಧಿಕಾರಿಗಳಿಗೆ ಮಾಹಿತಿ, ಮಗು ರಕ್ಷಣೆ
ಪೋಷಕರ ಸುಳಿವು ಸಿಗದೆ ಇದ್ದಾಗ ಚರ್ಚ್ ಫಾದರ್ ಗಮನಕ್ಕೆ ತಂದಿದ್ದ ಸಿಬ್ಬಂದಿ ಅವರ ಸೂಚನೆಯಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (women and child welfare department) ಅಧಿಕಾರಿಗಳಿಗೆ ಮತ್ತು ಪೋಲಿಸರಿಗೆ ಮಾಹಿತಿ ನೀಡಿದ್ರು. ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವನ್ನ ರಕ್ಷಣೆ ಮಾಡಿದ್ರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಚರ್ಚ್ ಸಮೀಪದಲ್ಲೇ ಇದ್ದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯ್ತು. ಈ ವೇಳೆ ಮಗುವಿಗೆ ಚಿಕಿತ್ಸೆ ನೀಡಿದ ಮಕ್ಕಳ ತಜ್ಞ ಡಾ.ತಮ್ಮಣ್ಣ ಮಾತನಾಡಿ ಮಗುವಿಗೆ ಅನಾರೋಗ್ಯವಿರುವ ಕಾರಣ ಮಗುವನ್ನ ಸಾಕಲಾಗದೆ ಹೆತ್ತವರು ಬಿಟ್ಟು ಹೋಗಿದ್ದಾರೆ. ಎಳೆ ಮಗುವಿಗೆ ನರದ ಸಮಸ್ಯೆ ಕಾಡುತ್ತಿದ್ದು, ಬುದ್ಧಿಮಾಂದ್ಯತೆಯು ಇರುವಂತೆ ಮೇಲ್ನೋಟಕ್ಕೆ ಎನಿಸುತ್ತಿದೆ. ಈ ಬಗ್ಗೆ ಚಿಕಿತ್ಸೆ ಮುಂದುವರೆಸಲಾಗುವುದು ಎಂದರು.
ALL INDIA RADIO RECRUITMENT 2022 ; ಆಕಾಶವಾಣಿ ವರದಿಗಾರರ ಹುದ್ದೆಗೆ ನೇಮಕಾತಿ