ಮನೆ ಬಾಗಿಲಿಗೆ ಶಾಲೆ ಯೋಜನೆಗೆ BBMP ಚಾಲನೆ

ಬಿಬಿಎಂಪಿಯು ಕೊಳಗೇರಿ ಪ್ರದೇಶದ 2.5 ರಿಂದ 6 ವರ್ಷದೊಳಗಿನ ಮಕ್ಕಳ ಶಿಕ್ಷಣ ನೀಡಲು ಫ್ರೀ ಥಿಂಕಿಂಗ್‌  ಪೌಂಡೇಷನ್‌ ಸಂಸ್ಥೆಯ ಜೊತೆ  ಸೇರಿ ಸಂಚಾರಿ ವಾಹನ ‘ಮಾಂಟೆಸ್ಸರಿ ಸ್ಕೂಲ್‌ ಆನ್‌ ವ್ಹೀಲ್‌  ಯೋಜನೆಗೆ ಚಾಲನೆ ನೀಡಲಾಗಿದೆ.

Running BBMP to School Plan for Homecoming gow

ಬೆಂಗಳೂರು(ಮೇ.27): ಬಿಬಿಎಂಪಿ (BBMP ) ದಕ್ಷಿಣ ವಲಯದ ಕೊಳಗೇರಿ ಪ್ರದೇಶದ 2.5 ರಿಂದ 6 ವರ್ಷದೊಳಗಿನ ಮಕ್ಕಳ ಶಿಕ್ಷಣ ನೀಡಲು ಬಿಬಿಎಂಪಿ ಮತ್ತು   ಗುರುವಾರ ಚಾಲನೆ ನೀಡಲಾಯಿತು.

ಈವರೆಗೆ ಬಿಬಿಎಂಪಿಯು ಬಿಎಂಟಿಸಿ ಬಸ್‌ಗಳನ್ನು ಶಾಲಾ ಕೊಠಡಿ ಮಾದರಿಯಲ್ಲಿ ವಿನ್ಯಾಸಗೊಳಿಸಿ ಸ್ಕೂಲ್‌ ಆನ್‌ ವ್ಹೀಲ್ಸ್‌ ಯೋಜನೆ ಅಡಿಯಲ್ಲಿ ನಗರದ 10 ಕಡೆ ಸಂಚಾರಿ ಶಾಲೆ ಆರಂಭಿಸಿತ್ತು. ಇದೀಗ ಫ್ರೀ ಥಿಂಕಿಂಗ್‌ ಪೌಂಡೇಷನ್‌ ಸಹಕಾರದೊಂದಿಗೆ ದಕ್ಷಿಣ ವಲಯದಲ್ಲಿನ ವಾಹನಕ್ಕೆ ಹೆಚ್ಚಿನ ಸೌಲಭ್ಯ ಒದಗಿಸಿ ಮಾಂಟೆಸ್ಸರಿ ಸ್ಕೂಲ್‌ ಆನ್‌ ವ್ಹೀಲ್‌ ಆಗಿ ಪರಿವರ್ತಿಸಲಾಗಿದೆ. ಮುಂದಿನ ದಿನಗಳಲ್ಲಿ ಬಿಬಿಎಂಪಿಯ ಉಳಿದ 7 ವಲಯಗಳಲ್ಲೂ ಸಂಚಾರಿ ಶಾಲೆ ಅಭಿವೃದ್ಧಿಗೊಳಿಸಲು ಬಿಬಿಎಂಪಿ ಶಿಕ್ಷಣ ವಿಭಾಗ ತಯಾರಿ ನಡೆಸಿದೆ.

ಈ ಹಿಂದೆ ಬಿಬಿಎಂಪಿ (Bruhat Bengaluru Mahanagara Palike ) ಆರಂಭಿಸಲಾದ ಸ್ಕೂಲ್‌ ಆನ್‌ ವ್ಹೀಲ್ಸ್‌ಗೆ (School on Wheels) ಹೊಸ ಆಲೋಚನೆ ಮತ್ತು ಪರಿಕರಗಳನ್ನು ಸೇರಿಸಲಾಗಿದೆ. ಜತೆಗೆ ಮಾಂಟೆಸ್ಸರಿ ಸ್ಕೂಲ್‌ ಆನ್‌ ವ್ಹೀಲ್‌ ಎಂದು ಹೆಸರು ಬದಲಿಸಿ ಕಾರ್ಯಗತಗೊಳಿಸಲಾಗಿದೆ.

SSLCಯಲ್ಲಿ ಶೂನ್ಯ ಸಾಧನೆಗೈದ BBMP ಶಾಲೆಗಳ ಶಿಕ್ಷಕರ ವಜಾ!

ಈವರೆಗೆ ಸಂಚಾರಿ ಶಾಲೆಯಲ್ಲಿ ಕಪ್ಪು ಹಲಗೆ, ನೀರಿನ ವ್ಯವಸ್ಥೆ ಮಾತ್ರ ಇರುತ್ತಿತ್ತು. ಆದರೆ, ಇದೀಗ ನವೀಕರಿಸಿದ ಸಂಚಾರಿ ಶಾಲೆಯಲ್ಲಿ ಲ್ಯಾಪ್‌ಟಾಪ್‌, ಕಲಿಕಾ ಸಾಮಗ್ರಿಗಳು, ಗ್ರಂಥಾಲಯ, ಲೇಖನ ಸಾಮಗ್ರಿ, ಮಕ್ಕಳ ಸ್ನೇಹಿ ಚಿತ್ರಗಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಪೌಂಡೇಷನ್‌ನಿಂದ ಮಕ್ಕಳಿಗೆ ಸಮವಸ್ತ್ರ ನೀಡಲಾಗುತ್ತಿದೆ. ಸದ್ಯ ಸಂಚಾರಿ ಶಾಲೆಗೆ 35ರಿಂದ 40 ಮಕ್ಕಳು ಬರುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಶಿಕ್ಷಣ (education) ವಿಭಾಗದ ಸಹಾಯಕ ವಿಶೇಷ ಆಯುಕ್ತ ಉಮೇಶ್‌, ಪಾಲಿಕೆ ವ್ಯಾಪ್ತಿಯಲ್ಲಿ 10 ಸಂಚಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ದಕ್ಷಿಣ ವಲಯದಲ್ಲಿನ ಶಾಲೆಯಲ್ಲಿ ಹೆಚ್ಚುವರಿ ವ್ಯವಸ್ಥೆ ಅಳವಡಿಸಿ ಮಾಂಟೆಸ್ಸರಿ ಸ್ಕೂಲ್‌ ಆನ್‌ ವ್ಹೀಲ್‌ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

SMALL INDUSTRIES ಆರಂಭಕ್ಕೆ ರಾಜ್ಯ  ಸರ್ಕಾರ ಅನುಮೋದನೆ, 57,055 ಉದ್ಯೋಗಾವಕಾಶ

SSLCಯಲ್ಲಿ ಶೂನ್ಯ ಸಾಧನೆಗೈದ BBMP ಶಾಲೆಗಳ ಶಿಕ್ಷಕರ ವಜಾ! : 2021 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ (SSLC Exam) ಶೇ.99.94 ರಷ್ಟು ಫಲಿತಾಂಶ ದಾಖಲಿಸಿದ ಬಳಿಕ ಈ ಸಾಲಿನಲ್ಲಿ ಬಿಬಿಎಂಪಿಯ ಶಿಕ್ಷಣ ಇಲಾಖೆಗೆ ದೊಡ್ಡ ಶಾಕ್ ಎದುರಾಗಿದ್ದು, ಪುರಸಭೆಯಿಂದ ನಿರ್ವಹಣೆಯಾಗುತ್ತಿರುವ ಶಾಲೆಗಳಲ್ಲಿ (School) ಫಲಿತಾಂಶ ತೀವ್ರ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಶೂನ್ಯ ಸಾಧನೆ ಮಾಡಿರುವ ಎರಡು ಶಾಲೆಗೆ ನೋಟಿಸ್ ನೀಡಲಾಗಿದ್ದು, ಶಿಕ್ಷಕರನ್ನು ವಜಾ ಮಾಡಲಾಗಿದೆ.

ಬಿಬಿಎಂಪಿ (BBMP) ಶಾಲೆಗಳು 2022ನೇ ಸಾಲಿನ ಎಸ್ಎಸ್  ಶೇ.71.27 ರಷ್ಟು ತೇರ್ಗಡೆ ಫಲಿತಾಂಶವನ್ನು ಹೊಂದಿದ್ದು, ತೀವ್ರ ಕುಸಿತ ಕಂಡಿದೆ.  ಜೊತೆಗೆ ಎರಡು ಶಿಕ್ಷಣ ಸಂಸ್ಥೆಗಳು  ಶೂನ್ಯ ಸಾಧನೆ ಮಾಡಿದ್ದು,  ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ಮರ್ಫಿ ಟೌನ್‌ನ 19 ವಿದ್ಯಾರ್ಥಿಗಳು ಮತ್ತು ಕೆ.ಜಿ.ನಗರದ  ಶಾಲೆಯ ಇಬ್ಬರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. 

 2020 ರಲ್ಲಿ ಶೇ.50.16   2019ರಲ್ಲಿ ಶೇ.52  ಮತ್ತು 2018 ರಲ್ಲಿ ಶೇ. 51 ಫಲಿತಾಂಶವಿತ್ತು. ಆ ವರ್ಷಗಳಿಗೆ ಹೋಲಿಸಿದರೆ 2022 ರ ಉತ್ತೀರ್ಣ ಶೇಕಡಾವಾರು ಶೇಕಡಾ 71.27 ರಷ್ಟಿದೆ. ವಾಸ್ತವವಾಗಿ, ಕೆ ಜಿ ನಗರ ಶಾಲೆಯು 2020 ರ ನಂತರ ಎರಡನೇ ಬಾರಿಗೆ ಶೂನ್ಯ ಶೇಕಡಾವನ್ನು ಪಡೆದುಕೊಂಡಿದೆ. 

 ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಎರಡೂ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಶಿಕ್ಷಕರನ್ನೂ ವಜಾ ಮಾಡಿದೆ. ಕಳಪೆ ಶೈಕ್ಷಣಿಕ ಸಾಧನೆಗೆ ವಿವರಣೆ ನೀಡುವಂತೆ ನಾವು ಶೋಕಾಸ್ ನೋಟಿಸ್ ನೀಡಿದ್ದೇವೆ. ಶೇ.50ಕ್ಕಿಂತ ಕಡಿಮೆ ಉತ್ತೀರ್ಣತೆ ಪಡೆದಿರುವ ಬಿಬಿಎಂಪಿ ಶಾಲೆಗಳಿಗೂ ಗುರುತು ಹಾಕಿದ್ದು, ಸುಧಾರಿಸಿಕೊಳ್ಳುವಂತೆ ಎಚ್ಚರಿಸಿದ್ದೇವೆ. ಈ ಶೈಕ್ಷಣಿಕ ವರ್ಷದಿಂದ ಸ್ಮಾರ್ಟ್ ತರಗತಿಗಳನ್ನು ಪರಿಚಯಿಸಲು, ನಾಗರಿಕ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಹೋಂ ವರ್ಕ್ ವ್ಯವಸ್ಥೆಯನ್ನು ಹೆಚ್ಚಿಸಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಬಿಬಿಎಂಪಿಯ ಶಿಕ್ಷಣ ಸಹಾಯಕ ಆಯುಕ್ತ ಉಮೇಶ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios