Asianet Suvarna News Asianet Suvarna News

ಮಕ್ಕಳಿಗೆ ಬರೆದುಕೊಟ್ಟ ಆಸ್ತಿ ವಾಪಸ್‌ ಪಡೆದುಕೊಳ್ಳುವ ಹಕ್ಕು ವೃದ್ಧರಿಗಿದೆ

  • ಯೋಗ ಕ್ಷೇಮ ನೋಡದ ಮಕ್ಕಳಿಗೆ ಬರೆದುಕೊಟ್ಟ ಆಸ್ತಿಯನ್ನು ವಾಪಸ್‌ ಪಡೆದುಕೊಳ್ಳುವ ಹಕ್ಕು ಆ ವೃದ್ಧರಿಗಿದೆ 
  • ಯಾವುದೇ ಒಬ್ಬ ವ್ಯಕ್ತಿ ತಂದೆ, ತಾಯಿಗೆ ವಯಸ್ಸಾದ ಮೇಲೆ ಅವರ ಪೋಷಣೆ ಮಾಡುವುದು ಪ್ರತಿ ಒಬ್ಬ ಮಕ್ಕಳ ಕರ್ತವ್ಯ
parents have right to take back property from children over negligence   snr
Author
Bengaluru, First Published Nov 16, 2021, 11:12 AM IST

 ಸಾಲಿಗ್ರಾಮ (ನ.16):  ವಯಸ್ಸಾದ ತಂದೆ, ತಾಯಿ ಮತ್ತು ಅತ್ತೆ, ಮಾವಂದಿರ (Parents) ಯೋಗ ಕ್ಷೇಮ ನೋಡದ ಮಕ್ಕಳಿಗೆ (children) ಬರೆದುಕೊಟ್ಟ ಆಸ್ತಿಯನ್ನು (property) ವಾಪಸ್‌ ಪಡೆದುಕೊಳ್ಳುವ ಹಕ್ಕು ಆ ವೃದ್ಧರಿಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ (judge Sujatha madivalappa sambrani ) ಹೇಳಿದರು.

ಪಟ್ಟಣದ ಸಮೀಪದ ಅಂಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾನೂನು ಹರಿವು - ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಒಬ್ಬ ವ್ಯಕ್ತಿ ತಂದೆ (Father), ತಾಯಿಗೆ (Mother) ವಯಸ್ಸಾದ ಮೇಲೆ ಅವರ ಪೋಷಣೆ ಮಾಡುವುದು ಪ್ರತಿ ಒಬ್ಬ ಮಕ್ಕಳ ಕರ್ತವ್ಯ. ಆದರೆ ಕೆಲವು ಮಕ್ಕಳು  ಅವರ ಆಸ್ತಿ ಹಣ ಎಲ್ಲವನ್ನು ಬಳಸಿಕೊಂಡು ಅವರ ಕ್ಷೇಮತೆಯನ್ನು ನೋಡದೆ ಬೇರೆ ಕಳುಹಿಸಿ ಒಪ್ಪತ್ತಿನ ಉಟಕ್ಕೂ (Food) ಗತಿ ಇಲ್ಲದಂತೆ ಮಾಡಿರುವ ಘಟನೆಗಳಿವೆ. ಅದು ಬದಲಾವಣೆ ಆಗಬೇಕು ಏಕೆಂದರೆ ಅವರು ಕೊಟ್ಟಿರುವ ಆಸ್ತಿಯನ್ನು ಮತ್ತೆ ಅವರೇ ಪಡೆದುಕೊಳ್ಳುವ ಅವಕಾಶ ಉಚಿತ ಕಾನೂನಿನಡಿ ಇದೆ ಎಂದು ತಿಳಿಸಿದರು.

ಅದೇ ರೀತಿ ಶಿಕ್ಷಣದಿಂದ (Education) ಯಾವುದೇ ಮಗು ವಂಚಿತರಾಗಬಾರದು ಇತ್ತೀಚೆಗೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ (Girl Child education) ಕುಂಠಿತವಾಗುತ್ತಿದೆ. ಮುಂದೆ ಮೊಬೈಲ್ನಲ್ಲಿ (Mobile) ಶಿಕ್ಷಣ ಪಡೆಯುವುದು ಬೇಡ ಹೆಚ್ಚಾಗಿ ಚಿಕ್ಕಮಕ್ಕಳಿಗೆ ಮತ್ತು ಯುವ ಸಮುದಾಯಕ್ಕೆ ಮೊಬೈಲ್ ಬಳಕೆ ಮಾರಕವಾಗಲಿದ್ದು, ಮಕ್ಕಳಲ್ಲಿ ಬರವಣಿಗೆ ಮತ್ತು ಪಠ್ಯತರ ಚಟುವಟಿಕೆಗಳು ಹಾಗೂ ಗುರುವಿನ ಪೋಷಕರ ಬಾಂಧವ್ಯ ಕಡಿಮೆಯಾಗುತ್ತಿದೆ. ಇದರಿಂದ ಮುಂದೆ ಮಕ್ಕಳಿಗೆ ವಿದ್ಯಾಭ್ಯಾಸ  ಮತ್ತು ಉದೋಗ (Job) ಕೈ ತಪ್ಪಲಿದೆ. ಹಾಗಾಗಿ ಶಿಕ್ಷಣ ಇಲಾಖೆ ಮತ್ತು ಪೋಷಕರು ಎಚ್ಚರವಹಿಸಿ ಎಂದು ತಿಳಿಸಿದರು.

ಪ್ರಧಾನ ಶ್ರೇಣಿ ನ್ಯಾಯಾಧೀಶೆ ಪವಿತ್ರ ಮಾತನಾಡಿ, ಹೆಣ್ಣು ಮಕ್ಕಳ ಮಾರಾಟ, ಭ್ರೂಣ ಹತ್ಯೆ , ಶಿಕ್ಷಣ ವಂಚಿತೆ, ಬಾಲ್ಯವಿವಾಹ (Child Marriage), ವರದಕ್ಷಿಣೆ ದೌರ್ಜನ್ಯ (Dowry Case), ಮಾನಸಿಕ ಕಿರುಕುಳ, ಜೀತ ಪದ್ದತಿಗಳಿಂದ ಹೆಣ್ಣು ಮಕ್ಕಳನ್ನು ರಕ್ಷಿಸಲು ಆಯಾ ಇಲಾಖಾಧಿಕಾರಿಗಳು ಚುರುಕಾಗಬೇಕು. ಇವರಿಗೆ ಸಾರ್ವಜನಿಕರು ಸಹಕರಿಸಿ ಪ್ರೋತ್ಸಾಹ ನೀಡಿ ಸ್ತ್ರೀ ಸಮುದಾಯವನ್ನು ಉಳಿಸಿ ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಸಮಾಜ ನಿರ್ಮಾಮಾಡಲು ಕೈ ಜೋಡಿಸಿ, ಪ್ರತಿಯೊಬ್ಬರಲ್ಲು ಕಾನೂನು ಹರಿವು ಅತ್ಯಗತ್ಯ ಎಂದರು.

ವಕೀಲ ತಿಮ್ಮಪ್ಪ ಮಾತನಾಡಿ, ಮೈಸೂರು (Mysuru) ಜಿಲ್ಲೆಯಲ್ಲೇ ಕೆ.ಆರ್‌. ನಗರ ತಾಲೂಕಿನ್ನೆಲ್ಲೆಡೆ ಹಿರಿಯ ಮತ್ತು ಕಿರಿಯ ಇಬ್ಬರು ನ್ಯಾಯಾಧೀಶರು ವಕೀಲರೊಂದಿಗೆ ಹೆಚ್ಚು ಕಾನೂನು ಅರಿವು ನೆರವು ಕಾರ್ಯಕ್ರಮ ಮಾಡಿದ್ದಾರೆ. 34 ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಾವಿರಾರು ಸಾರ್ವಜನಿಕರಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚು ಪ್ರಕರಣಗಳು ದಾಖಲಾಗುವ ಪ್ರಮುಖ ವಿಷಯಗಳ ಬಗ್ಗೆ ಕಾನೂನು ಹರಿವು ತಿಳಿಸಿಕೊಟ್ಟಿದ್ದು, ಗ್ರಾಮೀಣ ಭಾಗದ (Rural area) ಜನರಿಗೆ ಸಾಕಷ್ಟುಅನುಕೂಲವಾಗಿತ್ತು.

ಇದೇ ವೇಳೆ ನ್ಯಾಯಧೀಶರನ್ನು ಗ್ರಾಮಸ್ಥರು ಸನ್ಮಾನಿಸಿದರು. ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ, ಉಪಾಧ್ಯಕ್ಷ ತಿಮ್ಮೇಗೌಡ, ಸದಸ್ಯ ಬಾಬು ಧನಂಜಯ, ವಕೀಲ ಸಂಘದ ತಾಲೂಕು ಅಧ್ಯಕ್ಷ ದಿಲೀಪ್‌. ವಕೀಲ ಸತೀಶ್‌, ಮಂಜುನಾಥ್‌, ತಿಮ್ಮೇಗೌಡ, ಚಂದ್ರಮೌಳಿ, ಸಾ.ಖಾ. ಮಹೇಶ, ಎಸ್‌.ಐ. ದೊಡ್ಡೆಗೌಡ, ಮುಖ್ಯ ಶಿಕ್ಷಕ ವಿಜಯ್ ಕುಮಾರ್‌ ಇದ್ದರು.

  • ಮಕ್ಕಳಿಗೆ ಬರೆದುಕೊಟ್ಟ ಆಸ್ತಿ ವಾಪಸ್‌ ಪಡೆದುಕೊಳ್ಳುವ ಹಕ್ಕು ವೃದ್ದರಿಗಿದೆ
  • ಯಾವುದೇ ಒಬ್ಬ ವ್ಯಕ್ತಿ ತಂದೆ, ತಾಯಿಗೆ ವಯಸ್ಸಾದ ಮೇಲೆ ಅವರ ಪೋಷಣೆ ಮಾಡುವುದು ಪ್ರತಿ ಒಬ್ಬ ಮಕ್ಕಳ ಕರ್ತವ್ಯ
  • ಕೊಟ್ಟಿರುವ ಆಸ್ತಿಯನ್ನು ಮತ್ತೆ ಅವರೇ ಪಡೆದುಕೊಳ್ಳುವ ಅವಕಾಶ ಉಚಿತ ಕಾನೂನಿನಡಿ ಇದೆ 
Follow Us:
Download App:
  • android
  • ios