Asianet Suvarna News Asianet Suvarna News

BSY ಮುಂದೆ 3 ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಸ್ವಾಮೀಜಿ

ತಮ್ಮ ಸಮಾಜಕ್ಕೆ ಮೂರು ಸಚಿವ ಸ್ಥಾನ ನೀಡಬೇಕು ಎಂದು ಸ್ವಾಮೀಜಿಯೋರ್ವರು ಆಗ್ರಹಿಸಿದ್ದಾರೆ. 13ರಲ್ಲಿ ಮೂವರು ಸಚಿವ ಸ್ಥಾನ ನೀಡಲು ಕೇಳಿದ್ದಾರೆ. 

Panchamasali community seeks  ministerial Berth in BSY Cabinet
Author
Bengaluru, First Published Jan 11, 2020, 12:22 PM IST

ಹರಿಹರ [ಜ.11]: ರಾಜ್ಯದಲ್ಲಿ ಪಂಚಮಸಾಲಿ ಸಮಾಜದ 13 ಜನ ಶಾಸಕರಿದ್ದಾರೆ. ಈ ಹಿನ್ನೆಲೆ ನಮ್ಮ ಸಮಾಜಕ್ಕೆ ಕನಿಷ್ಠ ಮೂರು ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದೇವೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ತಾಲೂಕಿನ ಹನಗವಾಡಿ ಗ್ರಾಮದ ಪಂಚಮಸಾಲಿ ಪೀಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಉಪ ಚುನಾವಣೆಯಲ್ಲೂ ನಾವು ಐದು ಜನ ಶಾಸಕರನ್ನು ಗೆಲ್ಲಿಸಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಸಮಾಜದಿಂದ ಶಕ್ತಿಶಾಲಿಯಾಗಿದ್ದಾರೆ. ರಾಜ್ಯದಲ್ಲಿ ನಮ್ಮದು ಅತಿ ಹೆಚ್ಚು ಶಾಸಕರನ್ನು ನೀಡಿದ ಸಮಾಜವಾಗಿದ್ದು, ಮೂವರಿಗೆ ಸಚಿವ ಸ್ಥಾನ ನೀಡಬೇಕು ಎಂದು ನ್ಯಾಯಯುತ ಹಾಗೂ ಸಾಮಾಜಿಕ ನ್ಯಾಯ ಕೇಳಿದ್ದೇವೆ ಹೊರತು ಇಕ್ಕಟ್ಟಿಗೆ ಸಿಲುಕಿಸಿಲ್ಲ. ನಮ್ಮ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದರು.

ಸಂಪುಟ ಒತ್ತಡ: ಸಿಎಂ ವಿದೇಶ ಭೇಟಿ ರದ್ದು?...

ಜ.14 ಮತ್ತು 15 ರಂದು ಹರ ಮಠದಲ್ಲಿ ನಡೆಯುವ ಪ್ರಪ್ರಥಮ ಹರ ಜಾತ್ರಾ ಮಹೋತ್ಸವ ಮತ್ತು ಅಕ್ಕಮಹಾದೇವಿ ವಚನ ವಿಜಯೋತ್ಸವ ಕಾರ್ಯಕ್ರಮ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು ಎಂದು ತಿಳಿಸಿದರು.

ಯಾರ್ಯಾರಿಗೆ ಸಂಪುಟದಲ್ಲಿ ಸ್ಥಾನ.. ಕೆಲವರಿಗೆ ಕೋಕ್..ಕೆಲವರಿಗೆ ಶಾಕ್!.

ಇದೇ ವೇಳೆ ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್‌ ಮಾತನಾಡಿ, ರಾಜ್ಯದಲ್ಲಿ ಮರಳು ನೀತಿ ಬದಲಾಯಿಸಲು ನಮ್ಮ ಸರ್ಕಾರ ಸಿದ್ದವಿದ್ದು, ತೆಲಂಗಾಣ ಮಾದರಿ ರಾಜ್ಯಕ್ಕೆ ಹೊಸ ಮರಳು ನೀತಿ ಜಾರಿ ಮಾಡಲಾಗುವುದು. ಇದರಿಂದ ಪ್ರತಿಯೊಬ್ಬರಿಗೂ ಸುಲಭ ರೀತಿಯಲ್ಲಿ ಮರಳು ಲಭ್ಯವಾಗುತ್ತದೆ ಎಂದು ಹೇಳಿದರು.

Follow Us:
Download App:
  • android
  • ios