ಮಂಡ್ಯ(ಜ.02): ಅಳುವ ಕಂದನನ್ನು ಸಮಾಧಾನಪಡಿಸುವುದು ಸುಲಭದ ಮಾತಲ್ಲ. ಮಂಡ್ಯದಲ್ಲಿ ಪವಾಡ ಮೆರೆದ ಬಸವ ಕೊಂಬಿನಿಂದಲೇ ತೊಟ್ಟಿಲು ತೂಗಿ ಮಗುವನ್ನು ಮಲಗಿಸಿದೆ. ಬಸವ ತೊಟ್ಟಿಲು ತೂಗಿದ್ದೇ ತಡ ಮಗುವೂ ಅಳು ನಿಲ್ಲಿಸಿ ಸುಮ್ಮನಾಗಿದೆ.

ತೊಟ್ಟಿಲ ತೂಗಿ ಅಳುತ್ತಿದ್ದ ಮಗು ಮಲಗಿಸಿ ಪವಾಡ ಮೆರದ ಕಾವಾಣಾಪುರ ಬಸಪ್ಪ ಒಂದಲ್ಲ ಒಂದು ಪವಾಡ ತೋರಿಸುತ್ತಲೇ ಇರುತ್ತದೆ. ಸಕ್ಕರೆನಾಡಲ್ಲಿ ಒಂದಲ್ಲ ಒಂದು ಬಸಪ್ಪನ ಪವಾಡಗಳು ನಡೆಯುತ್ತಲೇ ಇರುತ್ತದೆ. ಮಂಡ್ಯ ತಾಲೂಕಿನ ಡಣಾಯಕನಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಸವ ತೊಟ್ಟಿಲು ತೂಗುತ್ತಲೇ ಪುಟ್ಟ ಕಂದಮ್ಮ ಸುಮ್ಮನಾಗಿದೆ.

ಪ್ರಧಾನಿ ಆಗಮನ: ಮಠದ ಮಕ್ಕಳಿಗೆ ಬೇಗ ಊಟ

ಕೊಂಬಿನಿಂದ ತೊಟ್ಟಿಲು ತೂಗಿ ಮಗುವಿನ ಅಳು ನಿಲ್ಲಿಸಿ ಮಲಗಿಸಿ ಪವಾಡ ಮೆರೆದಿರೋ ಬಸಪ್ಪನ ವಿಡಿಯೊ ವೈರಲ್ ಆಗಿದೆ. ಕೊಂಬಿನಲ್ಲಿ ಕಟ್ಟಿದ್ದ ಕಾಣಿಕೆಯ ಹಣವನ್ನು ತೊಟ್ಟಿಲಿಗೆ ಹಾಕಿದ ಬಸವ ಮಗುವನ್ನು ಹರಸಿದೆ.

"

ಕಾವಾಣಾಪುರ ಬಸಪ್ಪನ ಪವಾಡ ಕಂಡು ಗ್ರಾಮಸ್ಥರು ದಂಗಾಗಿದ್ದಾರೆ. ಮಹಿಳೆಯೊಬ್ಬರ ಸಮಸ್ಯೆ ಬಗೆ ಹರಿಸಲು ಬಸವ ಮನೆಗೆ ಹೋಗಿತ್ತು. ಮನೆಗೆ ಕಾಲಿಡುತ್ತಲೇ ಬಸವನಿಗೆ ಮನೆಯ ತೊಟ್ಟಿಲ್ಲಲ್ಲಿ ಮಲಗಿದ್ದ ಪುಟಾಣಿ ಕಂದಮ್ಮನ ಅಳು ಕೇಳಿಸಿದೆ. ಕಂದಮ್ಮನ ಅಳು ಕೇಳಿ ತೊಟ್ಟಿಲ ಬಳಿ ತೆರಳಿ ಸಂತೈಸಿ ತೊಟ್ಟಿಲು ತೂಗಿ ಮಗು ಮಲಗಿಸಿದೆ.

ನೀರಿಲ್ಲದ ಬರದ ನಾಡಲ್ಲಿ ಮದ್ಯದ ಹೊಳೆ..!

ಬಳಿಕ ಆ ಮಗುವಿನ ಅಮ್ಮನ ಸಮಸ್ಯೆ ಬಗೆ ಹರಿಸಿ ಬಸವ ವಾಪಾಸಾಗಿದ್ದು, ಕುಟುಂಬಸ್ಥರು ಮಹಿಳೆಗೆ ದೆವ್ವದ ಸಮಸ್ಯೆ ಇದೆ ಎಂದು ಕಾವಾಣಾಪುರ ಬಸಪ್ಪನ ಮೊರೆ ಹೋಗಿದ್ದರು.