ಗೋಪಾಲ್ ಯಡಗೆರೆ
ಶಿವಮೊಗ್ಗ: ಟಿಪ್ಪು ಸುಲ್ತಾನ್ ಆಡಳಿತ ಕಾಲದಲ್ಲಿ ನಿರ್ಮಿಸಲಾದ ಬೃಹತ್ ರಾಕೆಟ್‌ಗಳ ಸಂಗ್ರಹ ಮತ್ತೆ ಜಿಲ್ಲೆಯ ಹೊಸನಗರ ಪ್ರದೇಶದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದು, ಇದೊಂದು ವಿಶ್ವದ ಅಚ್ಚರಿ ಎಂದೇ ಬಣ್ಣಿಸಲಾಗುತ್ತಿದೆ. 16 ವರ್ಷಗಳ ಹಿಂದೊಮ್ಮೆ ಈ ರೀತಿಯ ಸಂಗ್ರಹ ಪತ್ತೆಯಾಗಿದ್ದು, ಆಗ 162  ರಾಕೆಟ್‌ಗಳು ದೊರಕಿದ್ದರೆ, ಈ ಬಾರಿ ಸುಮಾರು 250  ರಾಕೆಟ್‌ಗಳು ಸಿಕ್ಕಿವೆ.

ಈ ಮೂಲಕ 18ನೇ ಶತಮಾನದಲ್ಲಿ ತಯಾರಿಸಲಾದ ಕಚ್ಚಾ ರಾಕೆಟ್‌ಗಳ ಅತಿ ದೊಡ್ಡ ಸಂಗ್ರಹದ ಹಿರಿಮೆ ಶಿವಮೊಗ್ಗಕ್ಕೆ ಸಿಕ್ಕಿದೆ. 2002ರಲ್ಲಿ ಹೊಸನಗರ ತಾಲೂಕಿನ ನಗರ ಪ್ರಾಂತ್ಯದ ನಾಗರಾಜ್‌ರಾವ್ ಎಂಬ ರೈತರ ಜಮೀನಿನಲ್ಲಿನ ಬಾವಿಯೊಂದನ್ನು ಇನ್ನಷ್ಟು ಆಳ ಮಾಡುವ ಸಂದರ್ದಲ್ಲಿ ಕೆಲವು ಕಬ್ಬಿಣದ ತುಂಡುಗಳು ದೊರಕಿದ್ದವು. ಇದನ್ನು ಪುರಾತತ್ವ ಇಲಾಖೆ ಪಡೆದು ಇದರ ಬಗ್ಗೆ ಸಂಶೋಧನೆ ಆರಂಭಿಸಿತ್ತು. ಆರಂಭದಲ್ಲಿ ಟಿಪ್ಪು ಕಾಲದ ಮದ್ದು ಗುಂಡು ಅಥವಾ ಕಬ್ಬಿಣದ ಶೆಲ್ ಎಂದೇ ಭಾವಿಸಲಾಗಿತ್ತು. ಆದರೆ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಎಚ್.ಎಂ. ಸಿದ್ದನಗೌಡ ಬೆಂಗಳೂರು ಸಂಗ್ರಹಾಲಯದಲ್ಲಿದ್ದ ರಾಕೆಟ್‌ಗಳ ಆಕಾರದ ಇವುಗಳನ್ನು ಸಂಶರ್ಕನೆಗೆ ಒಳಪಡಿಸಿದಾಗ ಇವು ಕೂಡ ರಾಕೆಟ್ ಎಂದು ಗುರುತಿಸಿದ್ದರು. ಬಳಿಕ ಈ ರಾಕೆಟ್‌ಗಳನ್ನು ನಗರದ ಶಿವಪ್ಪನಾಯಕ ವಸ್ತು ಸಂಗ್ರಹಾಲಯದಲ್ಲಿ  ಇರಿಸಲಾಗಿತ್ತು.

ಈಗ ಪುನಾ ಪತ್ತೆ: 
2002 ರಲ್ಲಿ ಈ ಬಾವಿಯಲ್ಲಿ ತೆಗೆದ ಕೆಸರು ಮಣ್ಣನ್ನು ಸ್ವಲ್ಪ ದೂರದಲ್ಲಿ ಗುಡ್ಡೆ ಹಾಕಲಾಗಿತ್ತು. ಇತ್ತೀಚೆಗೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಈ ‘ಭಾದಲ್ಲಿ ಸಂಶೋಧನೆ ಕೈಗೊಂಡಾಗ ಈ ಮಣ್ಣಿನಲ್ಲಿ ಇನ್ನೂ ಸುಮಾರು 250 ರಾಕೆಟ್‌ಗಳ ಸಂಗ್ರಹ ಇರುವುದುನ್ನು ಗುರುತಿಸಿದ್ದಾರೆ. ವಿಶೇಷವೆಂದರೆ 18ನೇ ಶತಮಾನದಲ್ಲಿ ತಯಾರಾದ ಈ ರೀತಿಯ 2 ರಾಕೆಟ್‌ಗಳು ಇಂಗ್ಲೆಂಡ್‌ನ ವುಲ್‌ವಿಚ್ ಪ್ರಯೋಗಶಾಲೆಯಲ್ಲಿ ಮತ್ತು 3 ರಾಕೆಟ್‌ಗಳು ಬೆಂಗಳೂರಿನ ಸರ್ಕಾರಿ ವಸ್ತು ಸಂಗ್ರಹಾಲಯಲದಲ್ಲಿ ಇವೆ. ಆದರೆ ಇದೀಗ ಶಿವಮೊಗ್ಗದ ವಸ್ತು ಸಂಗ್ರಹಾಲಯಕ್ಕೆ ದೊಡ್ಡ ಮಾನ್ಯತೆಯೊಂದು ಸಿಕ್ಕಂತಾಗಿದೆ. ಒಟ್ಟು ಸುಮಾರು 400ಕ್ಕೂ ಅಧಿಕ ರಾಕೆಟ್‌ಗಳು ಇಲ್ಲಿ ಇದ್ದಂತಾಗುತ್ತದೆ. 200 ವರ್ಷಗಳ ಬಳಿಕವೂ ಈ ರಾಕೆಟ್‌ಗಳು ತುಕ್ಕು ಹಿಡಿದಿಲ್ಲ. ಆದರೆ ಇದರೊಳಗಿನ ಮದ್ದು ತನ್ನ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು ಈಗ ಯಾವುದೇ ಅಪಾಯವಿಲ್ಲ ಎನ್ನುತ್ತಾರೆ ತಜ್ಞರು.

ಇಲ್ಲಿತ್ತು ರಾಕೆಟ್‌ಗಳ ಗೋದಾಮು:
ಇತಿಹಾಸದಲ್ಲಿ ದಾಖಲಾಗಿರುವಂತೆ 18ನೇ ಶತಮಾನದ ಮಧ್ಯ ಭಾಗದಲ್ಲಿ ಮೈಸೂರು ಸಂಸ್ಥಾನದ ಅರಸರಾಗಿದ್ದ ಟಿಪ್ಪು ಮೊಟ್ಟಮೊದಲು ರಾಕೆಟ್‌ಗಳನ್ನು ಬಳಸಿದರು. ನಂತರ ಸಿಂಹಾಸನವನ್ನೇರಿದ ಮೈಸೂರು ಅರಸರೂ ಈ ತಂತ್ರಜ್ಞಾನ ಮುಂದುವರಿಸಿದರು. ಕೆಳದಿ ಸಂಸ್ಥಾಾನದ ರಾಜಧಾನಿಯಾಗಿದ್ದ ಹೊಸನಗರ ತಾಲೂಕಿನ ಬಿದನೂರು ಅಥವಾ ಈಗಿನ ನಗರ  ಅವರ ಆಡಳಿತ ವ್ಯಾಾಪ್ತಿಯಲ್ಲಿಯೇ ಇತ್ತು. ಹೀಗಾಗಿ ಟಿಪ್ಪು ತನ್ನ ರಾಕೆಟ್‌ನ ದೊಡ್ಡ ಗೋದಾಮನ್ನು ಇಲ್ಲಿ ನಿರ್ಮಿಸಿದ್ದ ಎನ್ನಲಾಗಿದೆ.

ಅಯ್ಯೋ ವಿಧಿಯೇ.. ತುಂಬಿದ ತುಂಗೆಯಲ್ಲಿ ತಾಯಿಗಾಗಿ ಮಕ್ಕಳ ಹುಡುಕಾಟ...

ಏನಿದು ರಾಕೆಟ್
ಸಾಂಪ್ರದಾಯಿಕ ಯುದ್ಧದಲ್ಲಿ ಕತ್ತಿ, ಈಟಿಗಳನ್ನಷ್ಟೇ ಬಳಸುತ್ತಿದ್ದ ಆಗಿನ ಸಂದರ್ಭದಲ್ಲಿ ಮೊದಲ ಬಾರಿಗೆ ಬ್ರಿಟೀಷರು ಬಂದೂಕಿನೊಂದಿಗೆ ದೇಶಕ್ಕೆ ಪ್ರವೇಶ ನೀಡಿದ್ದರು. ಆಗ ಬ್ರಿಟೀಷರನ್ನು ಎದುರಿಸಲು ಸಜ್ಜಾಗಿದ್ದ ಟಿಪ್ಪು ಸುಲ್ತಾಾನ್ ತನ್ನ ಸೈನ್ಯವನ್ನು ಸಬಲಗೊಳಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಪಟ್ಟಿದ್ದ. ಫಿರಂಗಿಯನ್ನು ಯಶಸ್ವಿಯಾಗಿ ಬಳಸುತ್ತಿದ್ದ. ಆ ವೇಳೆಯಲ್ಲಿ ರಾಕೆಟ್ ಅನ್ನು ಆವಿಷ್ಕರಿಸಿದ್ದ. ಈ ರಾಕೆಟ್‌ಗಳು ಆಗಿನ ಕಾಲದಲ್ಲಿ ಬ್ರಿಟೀಷ್ ಸೈನ್ಯವನ್ನೇ ಹೆದರಿಸಿತ್ತು ಎಂಬುದು ಕೂಡ ವಿಶೇಷ. 

ಹಿಂದೆ ನಗರ ಪ್ರಾಂತ್ಯದ ಪ್ರದೇಶದಲ್ಲಿ ಈ ರೀತಿಯ ರಾಕೆಟ್ ಪತ್ತೆಯಾಗಿತ್ತು.ಇದೀಗ ಪುನಃ ಈ ಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದಾಾಗ ಇನ್ನಷ್ಟು ರಾಕೆಟ್‌ಗಳು ಕಂಡು ಬಂದಿವೆ.  ಅಧಿಕಾರಿಗಳ ಅವರ ಸಮಕ್ಷಮದಲ್ಲಿ ಇವುಗಳನ್ನು ನಗರ ಪ್ರದೇಶದಿಂದ ಶಿವಮೊಗ್ಗದ ಶಿವಪ್ಪನಾಯಕ ಅರಮನೆಯಲ್ಲಿ ಇರುವ ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗುವುದು.
-ಆರ್. ಶೇಜೇಶ್ವರ್, ಸಹಾಯಕ ನಿರ್ದೇಶಕ, ಪುರಾತತ್ವ ಇಲಾಖೆ


ತುಕ್ಕು ಹಿಡಿಯದ ಕಬ್ಬಿಣದಲ್ಲಿ ಈ ರಾಕೆಟ್‌ಗಳನ್ನು ನಿರ್ಮಿಸಲಾಗಿತ್ತು. ಸುಮಾರು 7 ರಿಂದ 10 ಇಂಚು ಉದ್ದ, ಗರಿಷ್ಠ 3 ಇಂಚು ವ್ಯಾಸ ಹೊಂದಿದ ಕಬ್ಬಿಣದ ಈ ರಾಕೆಟ್ ಒಳಗೆ ಮದ್ದು ತುಂಬಲಾಗುತ್ತಿತ್ತು. ಇದನ್ನು ಬಿದಿರಿನಲ್ಲಿ ನಿರ್ಮಿಸಿದ ರಾಕೆಟ್ ಲಾಂಚರ್‌ಗಳ ಮೂಲಕ ಹಾರಿಸಲಾಗುತ್ತಿತ್ತು. ಸುಮಾರು 2 ಕಿ.ಮೀ. ನಷ್ಟು ದೂರಕ್ಕೆ ಹಾರುತ್ತಿದ್ದ ಈ ರಾಕೆಟ್ ನೆಲಕ್ಕೆ ಬಿದ್ದ ಕೂಡಲೇ ಸಿಡಿಯುತ್ತಿತ್ತು. ತುಕ್ಕು ಹಿಡಿಯದ ಈ ರೀತಿಯ ರಾಕೆಟ್ ಅನ್ನು ಮೊದಲು ಸಂಶೋಧಿಸಿ, ಸೈನ್ಯಕ್ಕೆ ಬಳಕೆ ಮಾಡಿದ್ದು ಟಿಪ್ಪು ಸುಲ್ತಾಾನ್. ನಂತರದ ದಿನಗಳಲ್ಲಿ ಮೈಸೂರು ಅರಸರೂ ಈ ತಂತ್ರಜ್ಞಾನ ಬಳಸಿದರು ಎನ್ನುತ್ತದೆ ಇತಿಹಾಸ. ಆ ನಂತರದ ದಿನಗಳಲ್ಲಿ ದೇಶದ ಬೇರೆ ಬೇರೆ ರಾಜರು ಕೂಡ ಈ ತಂತ್ರಜ್ಞಾನವನ್ನು ಬಳಕೆ ಮಾಡಲು ಯತ್ನಿಸಿದರು.

1799ರಲ್ಲಿ ನಡೆದ ಮೂರನೇ ಮೈಸೂರು ಯುದ್ಧದಲ್ಲಿ ಟಿಪ್ಪುು ಸುಲ್ತಾನ್ ಹತನಾಗಿ ಮೈಸೂರು ರಾಜ್ಯ ಬ್ರಿಟೀಷರ ವಶವಾದ ಬಳಿಕ 1801 ರಲ್ಲಿ ಇಲ್ಲಿದ್ದ 100ಕ್ಕೂ ಹೆಚ್ಚು ರಾಕೆಟ್‌ಗಳನ್ನು ಇಂಗ್ಲೆಂಡ್‌ಗೆ ಕೊಂಡೊಯ್ಯಲಾಯಿತು. ಬ್ರಿಟನ್‌ನಲ್ಲಿ ವಿಲಿಯಂ ಕಾಂಗ್ರಿವ್ ಎಂಬ ವಿಜ್ಞಾನಿ ಈ ಮಾದರಿಗಳ ರಾಕೆಟ್‌ಗಳನ್ನು ಪುನರ್ ನಿರ್ಮಿಸಿದರು. ಈಗ ಅದರಲ್ಲಿ ಉಳಿದಿರುವುದು ಕೇವಲ 2. ಅವುಗಳನ್ನು ಲಂಡನ್‌ನ ವುಲ್‌ವಿಚ್ ಎಂಬಲ್ಲಿರುವ ದಿ ರಾಯಲ್ ಆರ್ಟಿಲರಿ ಮ್ಯೂಸಿಯಂನ’ನಲ್ಲಿ ಇಡಲಾಗಿದೆ. ಇದನ್ನು ಬಿಟ್ಟರೆ ಇನ್ನೂ 3 ರಾಕೆಟ್‌ಗಳು ಬೆಂಗಳೂರಿನ ಸಂಗ್ರಹಾಲಯದಲ್ಲಿವೆ.

ರಾಕೆಟ್ ಹಾರಿಸಿದಾಗ ಘರ್ಷಣೆಯಲ್ಲಿ ಅಪಾರ ಶಾಖ ಉತ್ಪತ್ತಿಯಾಗುತ್ತದೆ. ಆದರೆ ಆ ಬಿಸಿಗೆ ಈ ಕಬ್ಬಿಣದ ತುಂಡುಗಳು ಕರಗಬಾರದು. ಮತ್ತು ನೆಲಕ್ಕೆ ಬಿದ್ದ ಕೂಡಲೇ ಸಿಡಿಯಬೇಕು. ಆಗಿನ ಕಾಲದಲ್ಲಿಯೇ ಇಂತಹ ತಂತ್ರಜ್ಞಾನ ಕಂಡು ಹಿಡಿದಿದ್ದು ಅದ್ಭುತ ಎನ್ನುತ್ತಾರೆ ಇತಿಹಾಸ ತಜ್ಞರು.