ಶಿವಮೊಗ್ಗ(ಜು.19] ಅವರ ಕಣ್ಣೀರು ಮಳೆಯ ನೀರಲ್ಲಿ ಕಲೆತು ಹೋಗುತ್ತಿತ್ತು. ತನ್ನ ಹರವನ್ನು ವಿಸ್ತಾರಗೊಳಿಸಿ ಹರಿಯುತ್ತಿರುವ ತುಂಬಿದ ತುಂಗೆಯಲ್ಲಿ ಏನಾದರೂ ಕಂಡರೆ ಅದು ತಮ್ಮ ತಾಯಿ ಇರಬಹುದೇನೋ ಎಂಬ ಆಸೆ. ದಡ ಸೇರಿರಬಹುದು, ದಡದ ಮರದಲ್ಲಿ ಏರಿ ಕುಳಿತು ತನಗಾಗಿ ಕಾಯುತ್ತಿರಬಹುದು ಎಂದು ಹಂಬಲಿಸುತ್ತಾಾ ತನ್ನ ತಾಯಿಯನ್ನು ಹುಡುಕುತ್ತಿರುವ ಈ ದೃಶ್ಯ ಎಂತಹವರ ಕಲ್ಲು ಹೃದಯವನ್ನಾದರೂ ಕಲಕದೆ ಇರದು.

ಆದರೆ ನಾಲ್ಕು ದಿನಗಳಿಂದ ಎಲ್ಲಿ ಹುಡುಕಿದರೂ ತಾಯಿ ಕಾಣುತ್ತಿಲ್ಲ. ಜೀವದಿಂದ ಇದ್ದಾಾಳೋ, ನೀರಿನಲ್ಲಿ ಮುಳುಗಿ ಹೋಗಿದ್ದಾಳೋ ಎಂದು ಒಂದೂ ಗೊತ್ತಾಗದೆ ವಿಹ್ವಲಗೊಂಡ ಪುತ್ರರು.  ಎಲ್ಲಾದರೂ ಕಾಣಬಹುದೇನೋ ಎಂದು ಬಹುದೂರದವರೆಗೆ ಕಣ್ಣು ಹಾಯಿಸುತ್ತಾಾ ಹರಿಯುತ್ತಿರುವ ನದಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಬೋಟ್‌ಗಳಲ್ಲಿ ಭಾರವಾದ ಮನಸ್ಸನ್ನು ಹೊತ್ತು  ತಿರುಗುತ್ತಿದ್ದಾರೆ. ಮತ್ತೆ ನಿರಾಶೆ... ನಿರಾಶೆ..ನಿರಾಶೆ..!

ಅಡಕೆ ದಾಸ್ತಾನು ಲೆಕ್ಕದಲ್ಲಿ ಭಾರೀ ಗೋಲ್‌ಮಾಲ್... ಏನಿದೆ ಇದರ ಹಿಂದೆ?

ಇದು ಶನಿವಾರ ನಗರದ ಕೋರ್ಪಲಯ್ಯನ ಛತ್ರದ ಬಳಿ ತನ್ನ ಪುತ್ರನೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಲೇ ನದಿಗೆ ಹಾರಿದ ಮಹಿಳೆಯ ಪುತ್ರರ ಶೋಕದ ಕತೆ. ತನ್ನ ಪತಿಯ ಸಾವಿನಿಂದ ನೊಂದಿದ್ದ ಆಲ್ಕೊಳದ ಸಾವಿತ್ರಮ್ಮ(58) ನದಿಗೆ ಹಾರಿದರು ಎಂದು ಸ್ಥಳದಲ್ಲಿ ಇದ್ದವರ ಹೇಳಿಕೆ. ಮೊಬೈಲ್‌ನಲ್ಲಿ ಮಾತನಾಡಿದ್ದ ಪುತ್ರರಾದ ಕಿರಣ್ ಮತ್ತು ಜೀವನ್ ಧಾವಿಸಿ ನೋಡಿದಾಗ ಅಲ್ಲಿ ಮೊಬೈಲ್ ಫೋನ್ ದೊರಕಿತ್ತು. ಆದರೆ ತಾಯಿ ಕಾಣಲಿಲ್ಲ. ತಕ್ಷಣವೇ ತಮ್ಮ ಸ್ನೇಹಿತರ ನೆರವಿನಿಂದ ಬೋಟ್‌ನಲ್ಲಿ ತುಂಬಿದ ನದಿಯಲ್ಲಿ ಓಡಾಡಿ ಹುಡುಕಿದ್ದಾರೆ. ಭಾನುವಾರವೂ ಇದೇ ರೀತಿ ಹುಡುಕಾಟ ನಡೆಸಿದ್ದಾಾರೆ. ಆದರೆ ಯಾವುದೇ ಫಲ ಸಿಕ್ಕಿರಲಿಲ್ಲ. ಪೊಲೀಸರು ಮಾತ್ರ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ.

ಬಳಿಕ ಸೋಮವಾರದ ನಂತರ ಪೊಲೀಸರು ಇವರ ಜೊತೆಗಾದರು. ಅಗ್ನಿಶಾಮಕದಳದವರೂ ಬಂದರು. ಎಲ್ಲರೂ ಸೇರಿ ಇಡೀ ನದಿ ಜಾಲಾಡುತ್ತಿದ್ದಾಾರೆ. ಶಿವಮೊಗ್ಗದಿಂದ ಸುಮಾರು 12 ಕಿ.ಮೀ.ವರೆಗೆ ಹುಡುಕಾಟ ನಡೆಸಿದ್ದಾಾರೆ. ಆದರೆ ಯಾವುದೇ ಫಲ ಸಿಕ್ಕಿಲ್ಲ. ಸಾವಿತ್ರಮ್ಮ ಅವರ ಯಾವುದೇ ಕುರುಹು ಕೂಡ ದೊರಕುತ್ತಿಲ್ಲ. ರಾತ್ರಿಯೂ ಫ್ಲಡ್‌ಲೈಟ್ ಬಳಸಿ ಹುಡುಕಾಟ ನಡೆಸಿದ್ದಾಾರೆ. ತುಂಬಿ ಹರಿಯುತ್ತಿರುವ ನದಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಬುಧವಾರ ಸಂಜೆಯವರೆಗೂ ಸಾವಿತ್ರಮ್ಮ ಅವರ ಯಾವುದೇ ಕುರುಹು ಕೂಡ ಸಿಕ್ಕಿಲ್ಲ. ಡಿವೈಎಸ್‌ಪಿ ಸುದರ್ಶನ್, ಕೋಟೆ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ದೇವರಾಜ್, ಪಿಎಸ್‌ಐ ಭೇಟಿ ನೀಡಿ ಪರಿಶೀಲಿಸಿದ್ದು  ಹುಡುಕಾಟಕ್ಕೆ ನೆರವಾಗಿದ್ದಾರೆ. ನೀರಿನ ಮಟ್ಟ ಏರುತ್ತಿದ್ದು ಹುಡುಕಾಟವನ್ನು ಭಾರದ ಮನಸ್ಸಿನಿಂದ ನಿಲ್ಲಿಸಿದ್ದಾರೆ.