ಕಲಬುರಗಿ: ಎರಡು ಗಂಟೆಯಾದರೂ ಚಲಿಸದ ರೈಲು, ಆಕ್ರೋಶಗೊಂಡ ಪ್ರಯಾಣಿಕರು

ಬೆಳಗ್ಗೆ 9.45ಕ್ಕೆ ಹೊರಡಬೇಕಿದ್ದ ರಾಯಚೂರು, ವಿಜಯಪುರ ಪ್ಯಾಸೆಂಜರ್‌ ರೈಲು ತನ್ನ ನಿಗದಿತ ಸಮಯಕ್ಕೆ ವಾಡಿ ನಿಲ್ದಾಣಕ್ಕೆ ತಲುಪಿತು. ಆದರೆ, ನಿಗದಿತ ಸಮಯಕ್ಕೆ ಹೊರಡಬೇಕಾದ ರೈಲು, ಸುಮಾರು ಎರಡು ಗಂಟೆಯಾದರೂ ಹೊರಡದೆ ಇದ್ದುದರಿಂದ ಕಲಬುರಗಿ, ಸೋಲಾಪುರ, ವಿಜಯಪುರಕ್ಕೆ ಹೋಗಬೇಕಾಗಿದ್ದ ಪ್ರಯಾಣಿಕರು ರೈಲು ಬೋಗಿಯಲ್ಲಿ ಕುಳಿತು ಬೇಸತ್ತರು. 

Outraged Passengers Due to Train Not Run for Two Hours at Wadi in Kalaburagi

ಶಹಾಬಾದ(ಆ.12): ವಾಡಿ ಪಟ್ಟಣದ ರೈಲು ಜಂಕ್ಷನ್‌ನಲ್ಲಿ ನಿಲ್ಲಿಸಿದ್ದ ಪ್ಯಾಸೆಂಜರ್‌ ರೈಲು ನಿಗದಿತ ಸಮಯಕ್ಕಿಂತ ಎರಡು ಗಂಟೆ ಹೊರಡದೆ ಇರುವುದರಿಂದ ಬೇಸತ್ತ ಪ್ರಯಾಣಿಕರು ಆಕ್ರೋಶಗೊಂಡು ರೈಲು ಚಾಲಕನಿಗೆ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು.

ಬೆಳಗ್ಗೆ 9.45ಕ್ಕೆ ಹೊರಡಬೇಕಿದ್ದ ರಾಯಚೂರು, ವಿಜಯಪುರ ಪ್ಯಾಸೆಂಜರ್‌ ರೈಲು ತನ್ನ ನಿಗದಿತ ಸಮಯಕ್ಕೆ ವಾಡಿ ನಿಲ್ದಾಣಕ್ಕೆ ತಲುಪಿತು. ಆದರೆ, ನಿಗದಿತ ಸಮಯಕ್ಕೆ ಹೊರಡಬೇಕಾದ ರೈಲು, ಸುಮಾರು ಎರಡು ಗಂಟೆಯಾದರೂ ಹೊರಡದೆ ಇದ್ದುದರಿಂದ ಕಲಬುರಗಿ, ಸೋಲಾಪುರ, ವಿಜಯಪುರಕ್ಕೆ ಹೋಗಬೇಕಾಗಿದ್ದ ಪ್ರಯಾಣಿಕರು ರೈಲು ಬೋಗಿಯಲ್ಲಿ ಕುಳಿತು ಬೇಸತ್ತರು. ಆದರೆ, ರೈಲು ಮಾತ್ರ ಹೊರಡುವ ಯಾವ ಸೂಚನೆ ಕಾಣದೆ ಇರುವುದರಿಂದ ಕೆಲ ಪ್ರಯಾಣಿಕರು ಸಂಘಟಿತರಾಗಿ ನೇರವಾಗಿ ರೈಲು ಚಾಲಕನ ಬಳಿ ಹೋಗಿ ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ಕೆಲಕಾಲ ಪ್ರಯಾಣಿಕರು-ಚಾಲಕನ ನಡುವೆ ವಾಗ್ವಾದ ನಡೆಯಿತು.

ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಗೋವಾವರೆಗೆ ವಿಶೇಷ ರೈಲು ಆರಂಭಿಸಿದ ನೈಋುತ್ಯ ರೈಲ್ವೆ

ಪ್ರಯಾಣಿಕರ ಆಕ್ರೋಶ ಕಂಡ ರೈಲು ಚಾಲಕ ನಾನು ನಿಮಗೆ ಯಾವುದೇ ಉತ್ತರ ಕೊಡಲು ಸಾಧ್ಯವಿಲ್ಲ. ನನಗೆ ಕೆಂಪು ಸಿಗ್ನಲ್‌ ತೆಗೆದು, ಹಳದಿ, ಹಸಿರು ದೀಪ ಬೆಳಗಿದರೆ ನಾನು ಹೊರಡುತ್ತೇನೆ ಎಂದು ಸ್ಪಷ್ಟಪಡಿಸಿ, ನೀವು ಸ್ಟೇಷನ್‌ ಮಾಸ್ಟರ್‌ ಅವರನ್ನು ಭೇಟಿ ಮಾಡಿ ಎಂದು ಅಸಹಾಯಕತೆ ತೊಡಿಕೊಂಡನು. ಪ್ರಯಾಣಿಕರ ಆಕ್ರೋಶ ಕಂಡು ಬೆದರಿದ ರೈಲ್ವೆ ಅಧಿಕಾರಿಗಳು ಹಳದಿ ದೀಪ ಬೆಳಗಿಸಿ, ರೈಲು ಹೊರಡಲು ಅವಕಾಶ ಮಾಡಿಕೊಟ್ಟರು. ರೈಲ್ವೆ ಇಲಾಖೆ ಇತ್ತೀಚೆಗೆ ಪ್ಯಾಸೇಂಜರ್‌ ರೈಲಿನಲ್ಲಿ ಪ್ರಯಾಣಿಸುವ ಬಡವರ ಬಗ್ಗೆ ಕೀಳಾಗಿ ಕಾಣುತ್ತಿದೆ, ಪ್ಯಾಸೆಂಜರ್‌ ರೈಲಿಗೆ ಟೈಮ್‌ ಟೇಬಲ್‌ ಇಲ್ಲದಂತಾಗಿದೆ ಎಂದು ಗೊಣಗುತ್ತಲೆ ರೈಲು ಏರಿ ಪ್ರಯಾಣ ಮುಂದುವರಿಸಿದರು.

Latest Videos
Follow Us:
Download App:
  • android
  • ios