ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಗೋವಾವರೆಗೆ ವಿಶೇಷ ರೈಲು ಆರಂಭಿಸಿದ ನೈಋುತ್ಯ ರೈಲ್ವೆ

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದ ಹಿನ್ನೆಲೆ ನಾಳೆಯಿಂದ ಸಾಲು ಸಾಲು ರಜೆ ಇರುವ ಕಾರಣ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ನೈಋುತ್ಯ ರೈಲ್ವೆ ವಲಯ ವಿಶೇಷ ರೈಲು ಸಂಚಾರ ನಡೆಸಲಿದೆ.

South Western Railway running of special trains between yesvantpur and Vasco-da-Gama gow

ಬೆಂಗಳೂರು (ಆ.11): ಸ್ವಾತಂತ್ರ್ಯ ದಿನಾಚರಣೆ ಸಂದರ್ಭದ ಹಿನ್ನೆಲೆ ನಾಳೆಯಿಂದ ಸಾಲು ಸಾಲು ರಜೆ ಇರುವ ಕಾರಣ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ನೈಋುತ್ಯ ರೈಲ್ವೆ ವಲಯ ಯಶವಂತಪುರ ಮತ್ತು ಗೋವಾ ವಾಸ್ಕೋ-ಡ-ಗಾಮಾ ಮಧ್ಯೆ ಒಂದು ಟ್ರಿಪ್‌ ವಿಶೇಷ ರೈಲು (07357/07358)  ಸಂಚಾರ ನಡೆಸಲಿದೆ. ಆ. 11ರಂದು ಸಂಜೆ 6.15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಡುವ ವಿಶೇಷ ರೈಲು, ಮಾರನೇ ದಿನ ಬೆಳಗ್ಗೆ 9.30ಕ್ಕೆ ವಾಸ್ಕೋ ತಲುಪಲಿದೆ. ಮರಳಿ ಆ.12ರಂದು ಮಧ್ಯಾಹ್ನ 2.30ಕ್ಕೆ ವಾಸ್ಕೋದಿಂದ ಹೊರಡುವ ಈ ರೈಲು, ಮಾರನೇ ದಿನ ಬೆಳಗಿನಜಾವ 4.30ಕ್ಕೆ ಯಶವಂತಪುರ ತಲುಪಲಿದೆ. ಎಸಿ ಕೋಚ್ ಸೇರಿದಂತೆ 20 ಬೋಗಿಗಳನ್ನ ಹೊಂದಿರುವ ಟ್ರೈನ್ ಇದಾಗಿದೆ

ತುಮಕೂರು, ಅರಸಿಕೇರೆ, ಬಿರೂರ, ದಾವಣಗೆರೆ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್‌ ಹುಬ್ಬಳ್ಳಿ, ಧಾರವಾಡ,ಲೋಂಡಾ, ಕ್ಯಾಸಲ್‌ರಾಕ್‌, ಕುಲೇಂ, ಸವೊರ್ಡಮ್‌ ಮತ್ತು ಮಡಗಾಂವ ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ ಎಂದು ನೈಋುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.

ವರ್ಷಾಂತ್ಯಕ್ಕೆ ಸಬ್‌ ಅರ್ಬನ್‌ ಸಂಪಿಗೆ ಮಾರ್ಗಕ್ಕೆ ಟೆಂಡರ್‌?

ಬೆಂಗಳೂರು- ಕಲಬುರಗಿ ನಡುವೆ ವಿಶೇಷ ರೈಲು: ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರುನಿಂದ- ಕಲಬುರಗಿ ನಡುವೆ ವಿಶೇಷ ರೈಲು ಸಂಚರಿಸಲಿದೆ. ಎರಡು ಟ್ರಿಪ್ ಗಳಲ್ಲಿ ವಿಶೇಷ ರೈಲಿಗಳನ್ನ ಓಡಿಸಲು ನಿರ್ಧಾರ ಮಾಡಲಾಗಿದ್ದು  ಆಗಸ್ಟ್ 11‌ ಮತ್ತು ಆಗಸ್ಟ್ 14. ರಂದು SMV ರೈಲು ನಿಲ್ದಾಣದಿಂದ ರೈಲು ಹೊರಡಲಿದೆ. 

ಹೊಸಪೇಟವರೆಗೆ ರೈಲುಗಳ ವಿಸ್ತರಣೆ:
ಸೊಲ್ಲಾಪುರ-ಗದಗ-ಸೊಲ್ಲಾಪುರ ಮತ್ತು ಮುಂಬೈ-ಗದಗ-ಮುಂಬೈ ಎಕ್ಸಪ್ರೆಸ್‌ ರೈಲುಗಳ ಓಡಾಟ ಶೀಘ್ರದಲ್ಲಿಯೇ ಹೊಸಪೇಟವರೆಗೆ ವಿಸ್ತರಣೆಯಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ರೈಲ್ವೆ ಹೋರಾಟ ಸಮಿತಿ ತಿಳಿಸಿದೆ.

ಹಲವು ವರ್ಷಗಳಿಂದ ವಿಜಯಪುರ ಮತ್ತು ಬಾಗಲಕೋಟೆ ಭಾಗದ ಜನರಿಗೆ ನೇರವಾಗಿ ಗುಂತಕಲ್‌ವರೆಗೆ ಸಂಪರ್ಕಿಸಲು ರೈಲಿನ ಅವಶ್ಯಕತೆ ಬಹಳ ಇತ್ತು. ನಮ್ಮ ರೈಲ್ವೆ ಹೋರಾಟ ಸಮಿತಿಯು ಸತತ ಪ್ರಯತ್ನದಿಂದಾಗಿ ಈಗ ಅದು ಹೊಸಪೇಟೆವರಗೆ ಅನುಮತಿ ಸಿಕ್ಕಿದೆ. ರೈಲು ಸಂಖ್ಯೆ (11305/11306) ಸೊಲ್ಲಾಪುರ-ಗದಗ ಎಕ್ಸಪ್ರೆಸ್‌ (ಡೆಮು) ರೈಲು ಗದಗನಿಂದ ಕಣಗಿನಹಾಳ, ಹರ್ಲಾಪುರ, ಸೊಂಪುರ ರೋಡ್‌, ಬನ್ನಿಕೊಪ್ಪ, ಭಾನಾಪುರ, ಕೊಪ್ಪಳ, ಗಿಣಿಗೇರಾ, ಹಿಟ್ನಳ್ಳಿ, ಮತ್ತು ಮುನಿರಾಬಾದ ಮುಖಾಂತರ ಹೊಸಪೇಟ ತಲುಪುವದು. ರೈಲು ಸಂಖ್ಯೆ (11139/11140) ಮುಂಬೈ-ಗದಗ ಸುಫರ ಫಾಸ್ಟ್‌ ಎಕ್ಸಪ್ರೆಸ್‌ ರೈಲು ಗದಗನಿಂದ ಹೊರಟು ಕೊಪ್ಪಳ, ಮುನಿರಾಬಾದ ಮುಖಾಂತರ ಹೊಸಪೇಟ ತಲುಪುವದು, ಈ ಎರಡು ರೈಲುಗಳನ್ನು ಅತೀ ಶೀಘ್ರದಲ್ಲೇ ಪ್ರಾರಂಭಿಸಲಾಗುವುದೆಂದು ಸಂಸದ ರಮೇಶ ಜಿಗಜಿಣಗಿ ಅವರು ರೈಲ್ವೆ ಹೋರಾಟ ಸಮಿತಿಗೆ ತಿಳಿಸಿದರು ಎಂದು ಸಮಿತಿ ಉಪಾಧ್ಯಕ್ಷ ಸತೀಶ ಭಾವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಮಿತಿಯ ಪರವಾಗಿ ಸಮಿತಿಯ ಉಪಾಧ್ಯಕ್ಷ ಸತೀಶ ಭಾವಿ ಹಾಗೂ ಅಧ್ಯಕ್ಷ ಅಶೋಕ ಹಳ್ಳೂರ, ಕಾರ್ಯದರ್ಶಿ ಈರಣ್ಣ ಅಳ್ಳಗಿ ಸಂಸದರನ್ನು ಅಭಿನಂದಿಸಿದರು.

ಕರ್ನಾಟಕ-ತಮಿಳುನಾಡು ಸಂಪರ್ಕಿಸುವ ದಕ್ಷಿಣದ ಮೊದಲ ಅಂತರಾಜ್ಯ ಮೆಟ್ರೋ ಯೋಜನೆಗೆ ಟೆಂಡರ್‌!

ಬಳ್ಳಾರಿಯವರೆಗೆ ರೈಲು ವಿಸ್ತರಿಸಲು ಆಗ್ರಹ: ದಿನನಿತ್ಯ ಸಂಚರಿಸುವ ಸೊಲ್ಲಾಪುರ- ಗದಗ ಎಕ್ಸ್‌ಪ್ರೆಸ್‌ ರೈಲು ಹಾಗೂ ಮುಂಬೈ- ಸೊಲ್ಲಾಪುರ ಗದಗ ಎಕ್ಸ್‌ಪ್ರೆಸ್‌ ರೈಲನ್ನು ಬಳ್ಳಾರಿಯವರೆಗೆ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಿನನಿತ್ಯ ಸಂಚರಿಸುವ ಈ ಎರಡು ರೈಲುಗಳ ಸೇವೆಯನ್ನು ಹೊಸಪೇಟೆವರೆಗೆ ವಿಸ್ತರಿಸಿರುವದಾಗಿ ರೈಲ್ವೆ ಇಲಾಖೆ ತಿಳಿಸಿದೆ. ರೈಲ್ವೆ ಕ್ರಿಯಾ ಸಮಿತಿಯು ಬಹು ವರ್ಷಗಳಿಂದ ಎರಡು ರೈಲುಗಳನ್ನು ಬಳ್ಳಾರಿ ವರೆಗೆ ವಿಸ್ತರಿಸುವಂತೆ ಸಾಕಷ್ಟುಬಾರಿ ಮನವಿ ಮಾಡಿಕೊಂಡಿತ್ತು. ನಿಯೋಗದ ಮೂಲಕ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳನ್ನು ಹಾಗೂ ದೆಹಲಿಯ ರೈಲ್ವೆ ಬೋರ್ಡ್‌ ಅಧಿಕಾರಿಗಳನ್ನು ಮತ್ತುಲೋಕಸಭಾ ಸದಸ್ಯರು ಮತ್ತು ಮಂತ್ರಿಗಳನ್ನು ಭೇಟಿ ಮಾಡಿ ಈ ರೈಲುಗಳನ್ನು ಬಳ್ಳಾರಿವರೆಗೆ ವಿಸ್ತರಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದಷ್ಟುಬೇಗ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳನ್ನು ಭೇಟಿ ಮಾಡಲು ನಿಯೋಗ ತೆಗೆದುಕೊಂಡು ಹೋಗುವುದಾಗಿ ಕೂಡ ಸಂಸದರು ತಿಳಿಸಿದ್ದಾರೆ ಎಂದು ಮಹೇಶ್ವರಸ್ವಾಮಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios