Asianet Suvarna News Asianet Suvarna News

ದಲಿತ ಮತಗಳು ಬಿಜೆಪಿಗೆ ಹೆಚ್ಚು ಬರುವಂತೆ ಸಂಘಟಿಸಿ: ಎಸ್ಸಿ ಮೋರ್ಚಾ ಅಧ್ಯಕ್ಷ ಲಾಲ್‌ ಸಿಂಗ್‌ ಆರ್ಯ

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಲಿತ ಮತಗಳು ಹೆಚ್ಚು ಬಿಜೆಪಿಗೆ ಬರುವಂತೆ ಮಾಡಲು ಎಸ್ಸಿ ಮೋರ್ಚಾ ಕಾರ್ಯಕರ್ತರು ಕೇರಿ ಕೇರಿಗೆ ತೆರಳಿ ಕೆಲಸ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಅಧ್ಯಕ್ಷ ಲಾಲ್‌ಸಿಂಗ್‌ ಆರ್ಯ ಕಾರ್ಯಕರ್ತರಿಗೆ ಕರೆ ನೀಡಿದರು. 

Organize more Dalit votes for BJP Says Lal Singh Arya At Mysuru gvd
Author
First Published Jan 9, 2023, 9:58 PM IST

ಮೈಸೂರು (ಜ.09): ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಲಿತ ಮತಗಳು ಹೆಚ್ಚು ಬಿಜೆಪಿಗೆ ಬರುವಂತೆ ಮಾಡಲು ಎಸ್ಸಿ ಮೋರ್ಚಾ ಕಾರ್ಯಕರ್ತರು ಕೇರಿ ಕೇರಿಗೆ ತೆರಳಿ ಕೆಲಸ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಅಧ್ಯಕ್ಷ ಲಾಲ್‌ಸಿಂಗ್‌ ಆರ್ಯ ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ಲಲಿತಮಹಲ್‌ ಹೊಟೇಲ್‌ನಲ್ಲಿ ಭಾನುವಾರ ಮುಕ್ತಾಯಗೊಂಡ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ದಲಿತರು ಬಿಜೆಪಿ ಸರ್ಕಾರದಿಂದ ಹೆಚ್ಚು ಸುರಕ್ಷಿತ ಎಂಬ ಭಾವನೆ ಮೂಡಿದೆ. 

ಆದ್ದರಿಂದ ದಲಿತ ಮತಗಳು ಬಿಜೆಪಿಗೆ ಹೆಚ್ಚು ಹೆಚ್ಚು ಬರುತ್ತಿದೆ. ಇದೇ ಭಾವನೆ ಕರ್ನಾಟಕದಲ್ಲಿಯೂ ಮೂಡಿಸಬೇಕು. ದಲಿತ ಕೇರಿಗಳಿಗೆ ತೆರಳಿ ಅವರ ಕಷ್ಟುಸುಖಗಳನ್ನು ಆಲಿಸಬೇಕು. ಅವರ ಮನೆಯಲ್ಲಿ ಊಟ ಮಾಡಬೇಕು, ಅವರ ನೋವುಗಳಿಗೆ ನಾವು ಪರಿಹಾರ ಕಂಡುಹಿಡಿಯಬೇಕು ಎಂದರು. ದಲಿತರು ನಂಬಿಕೊಂಡ ಕಾಂಗ್ರೆಸ್‌ ಕಳೆದ 70 ವರ್ಷಗಳಿಂದ ಎನು ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ದಲಿತರ ಹೆಸೇರಿಳಿಕೊಂಡು ಅಧಿಕಾರ ಪಡೆದು ಅವರನ್ನು ನಿರ್ಲಕ್ಷ್ಯಿಸುತ್ತ ಬಂದಿದೆ. ನಾವು ದಲಿತ ಪರ ಎನ್ನುವ ನಾಯಕರು ಕೂಡ ಏನೂ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಅಶಕ್ತ ಅಧ್ಯಕ್ಷರು. ಸೋನಿಯಾ ಗಾಂಧಿ ಮತ್ತು ರಾಹುಲ್‌ಗಾಂಧಿ ಎದುರು ಅವರದೇನು ಆಟ ನಡೆಯುವುದಿಲ್ಲ ಎಂದು ಜರಿದರು.

ಡಾ.ಶಿವಕುಮಾರ ಸ್ವಾಮೀಜಿ ಬಸ್ ನಿಲ್ದಾಣ ಉದ್ಘಾಟಿಸಿದ ಸಿದ್ದಲಿಂಗ ಮಹಾಸ್ವಾಮೀಜಿ

ನಿಜವಾದ ದಲಿತ ವಿರೋಧಿ ಕಾಂಗ್ರೆಸ್‌, ನಿಜವಾದ ಅಂಬೇಡ್ಕರ್‌ ವಿರೋಧಿ ಕಾಂಗ್ರೆಸ್‌. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಬಂದ ಮೇಲೆ ದಲಿತರ ಪರವಾದ ಸಾಕಷ್ಟುಯೋಜನೆ ಜಾರಿಗೆ ತಂದಿದ್ದಾರೆ. ದೇಶದಲ್ಲಿ ಆಂತರಿಕ ಭದ್ರತೆ ಹೆಚ್ಚಿದೆ. ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ. ನೆರೆಯ ಪಾಕಿಸ್ತಾನ ಮತ್ತು ಚೀನಾ ಭಯಪಡುವಂತೆ ಮಾಡಿದ್ದಾರೆ. ಆತಂಕವಾದಿ ಕೆಲಸಗಳಿಗೆ ಕಡಿವಾಣ ಬಿದ್ದಿದೆ. ಶ್ರೇಷ್ಠ ಮತ್ತು ಸಶಕ್ತ ಭಾರತ ನಿರ್ಮಾಣ ನಮ್ಮ ಉದ್ದೇಶ ಎಂದರು. ದಲಿತರು, ಹಿಂದುಳಿದವರ ಪರ ಸರ್ಕಾರ ಯೋಜನೆ ರೂಪಿಸಿದೆ. ದಲಿತರಿಗೆ ಜನ್‌ಧನ್‌ ಖಾತೆ ಬಂತು. ಆ ಮೂಲಕ ಅಂಬೇಡ್ಕರ್‌ ಅವರನ್ನು ಮೋದಿಯಲ್ಲಿ ಕಾಣುತ್ತಿದ್ದೇವೆ ಎಂದು ಹೊಗಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಮಾತನಾಡಿ, ನಾವು ಯಾರೂ ವಂಶ ಪಾರಂಪರ್ಯದಿಂದ ರಾಜಕೀಯಕ್ಕೆ ಬಂದವರಲ್ಲ. ಹಳ್ಳಿಯಿಂದ ಬಂದವರು. ಇದಕ್ಕೆ ಕಾರಣ ಡಾ.ಬಿ.ಆರ್‌.ಅಂಬೇಡ್ಕರ್‌. ಅಭಿವೃದ್ಧಿಗೆ ಮೈಸೂರು ಹೆಸರುವಾಸಿ ಆಗಿದೆ. ಚಹ ಮಾರುತ್ತಿದ್ದ ಮೋದಿ ಅವರು ಪ್ರಧಾನಿ ಆಗಿರುವುದಕ್ಕೆ ಸಂವಿಧಾನ ಕಾರಣ. ಆದರೆ, ಕಾಂಗ್ರೆಸ್‌ಗೆ ಅಂಬೇಡ್ಕರ್‌ ಶಾಪ ಇದೆ. ಕೇವಲ ಅಂಬೇಡ್ಕರ್‌ ಅವರ ಫೋಟೊ ಮತ್ತು ಹೆಸರನ್ನು ಮಾತ್ರ ಅವರು ಬಳಸಿಕೊಂಡರೆ ಹೊರತು, ಸಂಸತ್‌ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಶವ ಸುಡಲು ಜಾಗ ಕೊಡಲಿಲ್ಲ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಮೇಯರ್‌ ಶಿವಕುಮಾರ್‌, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌ ಮೊದಲಾದವರು ಇದ್ದರು.

ರಾಜ್ಯದ ಯಾವುದೇ ಶಾಸಕರು ಮಾಡದ ಸಾಹಸ ಸುಧಾಕರ್ ಮಾಡಿದ್ದಾರೆ: ಸಚಿವ ಸೋಮಶೇಖರ್

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ಮೂಲಕ ಭಾರತವನ್ನು ಜೋಡಿಸುತ್ತಿಲ್ಲ. ಒಡೆಯುತ್ತಿದ್ದಾರೆ. ಅವರೊಂದಿಗೆ ಇರುವವರೆಲ್ಲ ಪಾಕಿಸ್ತಾನ್‌ ಜಿಂದಾಬಾದ್‌, ಭಾರತ್‌ ತುಕುಡೆ ತುಕುಡೆ ಎಂದು ಘೋಷಣೆ ಕೂಗಿದವರು. ಇಂತವರಿಂದ ಭಾರತ್‌ ಜೋಡೋ ಹೇಗೆ ಸಾಧ್ಯ.
- ಲಾಲ್‌ ಸಿಂಗ್‌ ಆರ್ಯ, ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ

Follow Us:
Download App:
  • android
  • ios