Asianet Suvarna News Asianet Suvarna News

Chikkaballapur Utsav: ರಾಜ್ಯದ ಯಾವುದೇ ಶಾಸಕರು ಮಾಡದ ಸಾಹಸ ಸುಧಾಕರ್ ಮಾಡಿದ್ದಾರೆ: ಸಚಿವ ಸೋಮಶೇಖರ್

ತಾವೂ ಸೇರಿದಂತೆ ರಾಜ್ಯದ 224 ಶಾಸಕರಲ್ಲಿ ಯಾವ ಕ್ಷೇತ್ರದಲ್ಲಿಯೂ ಮಾಡಲು ಸಾಧ್ಯವಾಗದ ಸಾಹಸವನ್ನು ಸುಧಾಕರ್ ಅವರು ಮಾಡಿ, ಯಶಸ್ವಿ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಸೋಮಶೇಖರ್ ಅಭಿಪ್ರಾಯಪಟ್ಟರು. 

Minister ST Somashekar Talks About Dr K Sudhakar At Chikkaballapur Utsav gvd
Author
First Published Jan 9, 2023, 9:24 PM IST

ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ (ಜ.09):
ತಾವೂ ಸೇರಿದಂತೆ ರಾಜ್ಯದ 224 ಶಾಸಕರಲ್ಲಿ ಯಾವ ಕ್ಷೇತ್ರದಲ್ಲಿಯೂ ಮಾಡಲು ಸಾಧ್ಯವಾಗದ ಸಾಹಸವನ್ನು ಸುಧಾಕರ್ ಅವರು ಮಾಡಿ, ಯಶಸ್ವಿ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಸೋಮಶೇಖರ್ ಅಭಿಪ್ರಾಯಪಟ್ಟರು.  ಚಿಕ್ಕಬಳ್ಳಾಪುರ ಉತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಆಹಾರ ಮೇಳ ಮತ್ತು ಮಾದರಿ ಗ್ರಾಮ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಆಹಾರ ಮೇಳ ಮತ್ತು ಫಲಪುಷ್ಪ ಪ್ರದರ್ಶನ ವ್ಯವಸ್ಥಿತವಾಗಿ ಮಾಡಲಾಗಿದೆ. ಜನ ಸಾಮಾನ್ಯರ ಮನಸ್ಸಿಗೆ ತಲುಪುವ ರೀತಿಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಬದ್ಧತೆಯಿಂದ ಯಶಸ್ವಿಯಾಗಿ ಸುಧಾಕರ್ ಅವರು ಮಾಡಿದ್ದಾರೆ ಎಂದರು.

ನರೇಗಾ ಪ್ರದರ್ಶನ ಮನಮುಟ್ಟುವಂತಿದೆ: ನರೇಗಾ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಲ್ಲಿ ಈ ಪ್ರದರ್ಶನ ಯಶಸ್ವಿಯಾಗಿದೆ. ಸುಧಾಕರ್ ಅವರು ಸಚಿವರಾಗಿ ಮೂರು ವರ್ಷ ಆಗಿದೆ. ಇವರು ಸಚಿವರಾದ ನಂತರ ಸರ್ಕಾರದ ಯೋಜನೆಗಳು ಕ್ಷೇತ್ರಕ್ಕೆ ಮತ್ತು ಜಿಲ್ಲೆಗೆ ಅವರು ಮಾಡಿರುವ ಅಭಿವೃದ್ಧಿ ರಾಜ್ಯದ 224 ಕ್ಷೇತ್ರಗಳ ಯಾವುದೇ ಶಾಸಕರಿಂದ ಸಾಧ್ಯವಿಲ್ಲ ಎಂದು ಶ್ಲಾಘಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರದರ್ಶಿಸುವ ಕೆಲಸ ಉತ್ಸವದಲ್ಲಿ ಯಶಸ್ವಿಯಾಗಿ ಆಗಿರುವುದು ಸಂತಸ ತಂದಿದೆ. ವಿಶ್ವಾಸದಿಂದ ಸುಧಾಕರ್ ಅವರನ್ನು ಜನರು ಶಾಸಕರಾಗಿ ಮಾಡಿದರೆ, ಸರ್ಕಾರ ನಂಬಿಕೆಯಿಂದ ಸಚಿವರನ್ನಾಗಿ ಮಾಡಿದೆ. 

Chikkaballapur Utsav: ಡಾ.ಸುಧಾಕರ್‌ ದೂರದೃಷ್ಟಿ ನಾಯಕ: ಸಚಿವ ಮುನಿರತ್ನ

ದೂರದೃಷ್ಟಿ ಇದ್ದರೆ ಏನೆಲ್ಲ ಮಾಡಬಹುದು ಎಂಬುದನ್ನು ಸುಧಾಕರ್ ಅವರು ಮಾಡಿ ತೋರಿಸಿದ್ದಾರೆ ಎಂದರು. ಎರಡು ವರ್ಷ ಕೋವಿಡ್ ತೀವ್ರವಾಗಿ ಕಾಡುತ್ತಿದ್ದ ಕಾಲದಲ್ಲಿ ರಾಜ್ಯದ ಜನರ ಆರೋಗ್ಯ ಕಾಪಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ರಾಜ್ಯದ ಜನತೆಗೆ ಎರಡು ಡೋಸ್ ಲಸಿಕೆ ನೀಡುವಲ್ಲಿ ಸಂಪೂರ್ಣ ಶ್ರಮ ವಹಿಸಿದ್ದಾರೆ, ನಮ್ಮ ಕ್ಲಿನಿಕ್ ಮೂಲಕ ಸಾರ್ವಜನಿಕರ ಆರೋಗ್ಯ ಸೇವೆಗೆ ಅವರು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಆಸ್ಪತ್ರೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಜನರ ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು. 

ಎದೆಗಾರಿಕೆ ಇರುವ ವ್ಯಕ್ತಿ: ಹೊಸ ಜಿಲ್ಲೆ ಮಾಡುವುದು ಹೆಚ್ಚಲ್ಲ, ಅದನ್ನು ಅಭಿವೃದ್ಧಿ ಮಾಡುವುದು ಮುಖ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡಲು ಎದೆಗಾರಿಕೆ ಬೇಕು, ಅದು ಚಿಕ್ಕಬಳ್ಳಾಪುರ ಶಾಸಕರಿಗಿದೆ ಹಾಗಾಗಿಯೇ ಕೋವಿಡ್ ಸಂದರ್ಭದಲ್ಲಿ ರಾಜ್ಯಾದ್ಯಂತ ಓಡಾಡಬೇಕಾಗಿದ್ದರೂ ಕ್ಷೇತ್ರ ಮರೆಯದೆ ಅಭಿವೃದ್ಧಿಯಲ್ಲಿ ಕ್ಷೇತ್ರವನ್ನು ಉತ್ತುಂಗದತ್ತ ಕೊಂಡೊಯ್ದಿದ್ದಾರೆ ಎಂದರು.

ಸಿದ್ದು ಭವಿಷ್ಯ ಸುಧಾಕರ್ ಕೈಯಲ್ಲಿ!: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ಪ್ರಸ್ತುತ ಸುಧಾಕರ್ ಅವರ ಕೈಯಲ್ಲಿದೆ ಎಂದು ಸಹಕಾರ ಸಚಿವ ಸೋಮಶೇಖರ್ ಭವಿಷ್ಯ ನುಡಿದಿದ್ದಾರೆ.  ಸುಧಾಕರ್ ಮನಸ್ಸು ಮಾಡಿದರೆ, ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಲಿದ್ದಾರೆ ಎಂದು ಅವರು ಹೇಳಿದರು. ಸುಧಾಕರ್ ಅವರ ನಡೆ ಏನಿರಬಹುದು ಎಂಬ ಕಾರಣದಿಂದಲೇ ಸಿದ್ದರಾಮಯ್ಯ ಹೈಕಮಾಂಡ್ ಅನುಮತಿ ಬೇಕು ಎಂದಿದ್ದಾರೆ. ಅವರಿಗೆ ಸ್ಪಷ್ಟತೆ ಇಲ್ಲ, ಹಾಗಾಗಿಯೇ ಬಾದಾಮಿ, ಚಾಮರಾಜಪೇಟೆ, ಕೊಪ್ಪಳ ಎಂದು ತಿರುಗಾಡಿದರು. ಈಗ ಅಂತಿಮವಾಗಿ ಕೋಲಾರವನ್ನು ಘೋಷಿಸಿ, ಹೈಕಮಾಂಡ್ ಮೇಲೆ ಹಾಕಿದ್ದಾರೆ. ಇದಕ್ಕೆ ಕಾರಣ ಸುಧಾಕರ್ ಪ್ರತಿಕ್ರಿಯೆ ನೋಡುವುದಕ್ಕಾಗಿ ಎಂದು ಟಾಂಗ್ ನೀಡಿದರು.

ನಾವು ರಾಜಕೀಯಕ್ಕೆ ಬಂದಾಗಲಿಂದಲೇ ಟಾರ್ಗೆಟ್: ಎಚ್.ಡಿ.ಕುಮಾರಸ್ವಾಮಿ ಟಾರ್ಗೆಟ್ ಮಾಡುತ್ತಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್, ಟಾರ್ಗೆಟ್ ಮಾಡಿದರೆ ಮಾಡಲಿ, ನಾವು ರಾಜಕಾರಣಕ್ಕೆ ಬಂದಾಗಲಿಂದ ಟಾರ್ಗೆಟ್ ನಡೆಯುತ್ತಲೇ ಇದೆ. ಯಾರು ಸಾರ್ವಜನಿಕರ ಮಧ್ಯೆ ಕೆಲಸ ಮಾಡ್ತಾರೆ, ಯಾರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳು ಸಮರ್ಪಕ ಅನುಷ್ಠಾನ ಮಾಡ್ತಾರೆ ಅವರ ಮೇಲೆ ಅವರಿಗೆ ಕಣ್ಣಿರುತ್ತೆ ಎಂದರು.

8 ದಿನಗಳ ಚಿಕ್ಕಬಳ್ಳಾಪುರ ಉತ್ಸವಕ್ಕೆ ಅದ್ಧೂರಿ ಚಾಲನೆ: ದಸರಾ ಜಂಬೂ ಸವಾರಿ ಶೈಲಿಯಲ್ಲಿ ಮೆರವಣಿಗೆ

ಪ್ರತ್ಯೇಕ ಹಾಲು ಒಕ್ಕೂಟ, ಡಿಸಿಸಿ ಬ್ಯಾಂಕ್: ಡಿಸಿಸಿ ಬ್ಯಾಂಕ್ ಮತ್ತು ಚಿಮುಲ್ ಒಕ್ಕೂಟಗಳು ಸ್ವಲ್ಪ ತಡವಾದರೂ ಪ್ರತ್ಯೇಕ ಮಾಡಲಾಗುವುದು ಎಂದು ಸಹಕಾರ ಸಚಿವರು ಭರವಸೆ ನೀಡಿದರು. ಪ್ರತ್ಯೇಕ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಗಾಗಿ ಸುಧಾಕರ್ ಅವರ ಪ್ರಯತ್ನ ಮುಂದುವರಿದಿದೆ. ಅದನ್ನು ಕಾನೂನು ಬದ್ಧವಾಗಿಯೇ ಮಾಡಲು ಪ್ರಯತ್ನ ನಡೆಯುತ್ತಿದೆ. ಡಿಸಿಸಿ ಬ್ಯಾಂಕ್ ನ್ನು ಚಿಕ್ಕಬಳ್ಳಾಪುರಕ್ಕೆ ತರಲಾಗುವುದು, ಮುಂದಿಟ್ಟಿರುವ ಹೆಜ್ಜೆ ಹಿಂದೆ ಇಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Follow Us:
Download App:
  • android
  • ios