ಕಾಸರಗೋಡು ಗ್ರಾಮಗಳಿಗೆ ಮಲಯಾಳಂ ಹೆಸರು: ವಿರೋಧ
* ಪ್ರಸ್ತಾವ ಕೈಬಿಡಲು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಮನವಿ
* ಪಿ. ರವಿಕುಮಾರ್ ಭೇಟಿ ಮಾಡಿದ ಸೋಮಶೇಖರ್
* ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಬೆಳವಣಿಗೆ
ಬೆಂಗಳೂರು(ಜೂ.26): ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮತ್ತು ಕಾಸರಗೋಡಿನ ಕೆಲವು ಗ್ರಾಮಗಳ ಕನ್ನಡದ ಹೆಸರನ್ನು ಮಲಯಾಳಂ ಭಾಷೆಗೆ ಬದಲಾಯಿಸಲು ಮುಂದಾಗಿರುವ ಕೇರಳ ಸರ್ಕಾರಕ್ಕೆ ಪತ್ರ ಬರೆದು ಕೂಡಲೇ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮನವಿ ಸಲ್ಲಿಸಿದೆ.
ಶುಕ್ರವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ಭೇಟಿ ಮಾಡಿದ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಕೂಡಲೇ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕನ್ನಡದ ಹೆಸರುಗಳನ್ನು ಬದಲಿಸದಂತೆ ಗಮನ ಸೆಳೆಯಬೇಕು ಎಂದು ಮನವಿ ಮಾಡಿದ್ದಾರೆ.
ಕೇರಳದ ಮಂಜೇಶ್ವರ ಮತ್ತು ಕಾಸರಗೋಡಿನ ಗ್ರಾಮಗಳು ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುತ್ತವೆ. ಕೇರಳ ಸರ್ಕಾರದ ಸ್ಥಳೀಯ ಸಂಸ್ಥೆಗಳು ಗ್ರಾಮಗಳಿಗಿರುವ ಕನ್ನಡದ ಹೆಸರು ಹೊಂದಿರುವ ನಾಮಫಲಕಗಳನ್ನು ಬದಲಾಯಿಸುವ ಪ್ರಕ್ರಿಯೆ ನಡೆಸುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಇದು ಆ ಭಾಗದ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೇರಳ ವಿಧಾನಸಭೆಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಕವನ ವಾಚನ
ಯಾವ ಗ್ರಾಮದ ಹೆಸರು ಬದಲು?:
ಪ್ರಸ್ತುತ ಮಧೂರು ಎಂಬ ಗ್ರಾಮದ ಹೆಸರನ್ನು ಮಧುರಮ್, ಕಾರಡ್ಕ ಹೆಸರನ್ನು ಕಡಗಮ್, ಪಿಳಿಕುಂಜೆ ಹೆಸರನ್ನು ಪಿಳಿಕುನ್ನು, ಮಂಜೇಶ್ವರ ಹೆಸರನ್ನು ಮಂಜೇಶ್ವರಮ್, ಕುಂಬಳೆ ಹೆಸರನ್ನು ಕುಂಬ್ಳಾ, ನೆಲ್ಲಿಕುಂಜ ಹೆಸರನ್ನು ನೆಲ್ಲಿಕುನ್ನಿ, ಮಲ್ಲ ಹೆಸರನ್ನು ಮಲ್ಲಮ್, ಬೇದಡ ಹೆಸರನ್ನು ಬೆಡಗಮ್, ಆನೆಬಾಗಿಲು ಹೆಸರನ್ನು ಆನೆವಾಗಿಲ್, ಹೊಸದುರ್ಗ ಹೆಸರನ್ನು ಪುದಿಯಕೋಟ, ಸಸಿಹಿತ್ತು ಹೆಸರನ್ನು ಶೈವಲಪ್ ಎಂದು ಬದಲಿಸಲು ಮುಂದಾಗಿದೆ.
ಕನ್ನಡ ಭಾಷಾ ಸೂಚಕ ನಾಮ ಫಲಕಗಳನ್ನು ಬದಲಿಸುವ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದು ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಬೇಕು ಎಂದು ಡಾ.ಸಿ. ಸೋಮಶೇಖರ್ ಮನವಿ ಸಲ್ಲಿಸಿದರು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.