ಕರಾವಳಿ ರಕ್ಷಣಾ ಪಡೆ, ಕಾರವಾರದಿಂದ 37 ಕಿ.ಮೀ. ದೂರದಲ್ಲಿದ್ದ ಹಡಗನ್ನು ರಕ್ಷಿಸಿ ಗೋವಾದ ದಡಕ್ಕೆ ಎಳೆದು ತಂದಿದೆ. ಇದರಲ್ಲಿದ್ದ 8 ವಿಜ್ಞಾನಿಗಳು ಸೇರಿದಂತೆ 36 ಮಂದಿ ಸುರಕ್ಷಿತವಾಗಿದ್ದಾರೆ. 

ಪಣಜಿ(ಜು.28): ಎಂಜಿನ್‌ ದೋಷದಿಂದಾಗಿ ಕಾರವಾರ ಬಳಿಕ ಸಮುದ್ರದಲ್ಲಿ ಸಿಲುಕಿಕೊಂಡಿದ್ದ ರಾಷ್ಟ್ರೀಯ ಸಾಗರೀಕ ಅಧ್ಯಯನ ಕೇಂದ್ರಕ್ಕೆ ಸೇರಿದ ಹಡಗನ್ನು ರಕ್ಷಣೆ ಮಾಡುವ ಮೂಲಕ ಕರಾವಳಿ ಕಾವಲು ಪಡೆ 36 ಮಂದಿಯ ಜೀವ ಉಳಿಸಿದೆ.

ಇದೊಂದು ಸಂಶೋಧನಾ ಹಡಗಾಗಿದ್ದು, ಇದರಲ್ಲಿ 8 ಮಂದಿ ವಿಜ್ಞಾನಿಗಳು ಸಹ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 439 ಭೂಕುಸಿತ ವಲಯ: ವರದಿಯಲ್ಲೇನಿದೆ?

ಆರ್‌ವಿ ಸಿಂಧು ಸಾಧನ ಎಂಬ ಹೆಸರಿನ ಈ ಹಗಡಿನಲ್ಲಿ ಎಂಜಿನ್‌ ದೋಷವುಂಟಾದ ಕಾರಣ ಸಮುದ್ರದಲ್ಲಿ ಸಿಲುಕಿಕೊಂಡಿದ್ದು, ಸಾಗರದ ಅಲೆಗಳ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋಗುತ್ತಿತ್ತು. ಒಂದು ವೇಳೆ ಇದು ನಾಶವಾದರೆ ಅಪಾರ ಪ್ರಮಾಣದಲ್ಲಿ ಇಂಧನ ಸೋರಿಕೆಯಾಗಿ ಜೀವಿಗಳ ಸಾವಿಗೆ ಕಾರಣವಾಗುತ್ತಿತ್ತು. ಮಾಹಿತಿ ಸಿಕ್ಕ ಕೂಡಲೇ ಕಾರ್ಯ ಪ್ರವೃತ್ತರಾದ ಕರಾವಳಿ ರಕ್ಷಣಾ ಪಡೆ, ಕಾರವಾರದಿಂದ 37 ಕಿ.ಮೀ. ದೂರದಲ್ಲಿದ್ದ ಹಡಗನ್ನು ರಕ್ಷಿಸಿ ಗೋವಾದ ದಡಕ್ಕೆ ಎಳೆದು ತಂದಿದೆ. ಇದರಲ್ಲಿದ್ದ 8 ವಿಜ್ಞಾನಿಗಳು ಸೇರಿದಂತೆ 36 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.