ಅರ್ಧಕ್ಕೆ ನಿಂತಿರುವ ಈಜಿಪುರ ಫ್ಲೈಓವರ್‌ ಕಾಮಗಾರಿ ಮರು ಆರಂಭಿಸಲು ಶೀಘ್ರದಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಬಿಬಿಎಂಪಿ ಈಜಿಪುರ ಫ್ಲೈಓವರ್‌ ಕಾಮಗಾರಿ ಪೂರ್ಣಗೊಳಿಸಲು 143 ಕೋಟಿ ವೆಚ್ಚದ ಟೆಂಡರ್‌ ಆಹ್ವಾನಿಸಿದ್ದು, ಗುತ್ತಿಗೆದಾರ ಸಂಸ್ಥೆಯ ಆಯ್ಕೆ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ. 

ಬೆಂಗಳೂರು (ಜೂ.11): ಅರ್ಧಕ್ಕೆ ನಿಂತಿರುವ ಈಜಿಪುರ ಫ್ಲೈಓವರ್‌ ಕಾಮಗಾರಿ ಮರು ಆರಂಭಿಸಲು ಶೀಘ್ರದಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಬಿಬಿಎಂಪಿ ಈಜಿಪುರ ಫ್ಲೈಓವರ್‌ ಕಾಮಗಾರಿ ಪೂರ್ಣಗೊಳಿಸಲು 143 ಕೋಟಿ ವೆಚ್ಚದ ಟೆಂಡರ್‌ ಆಹ್ವಾನಿಸಿದ್ದು, ಗುತ್ತಿಗೆದಾರ ಸಂಸ್ಥೆಯ ಆಯ್ಕೆ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ. ಕಳೆದ ಮೂರು ಬಾರಿ ಟೆಂಡರ್‌ ಆಹ್ವಾನಿಸಿದರೂ ಯಾರೊಬ್ಬ ಗುತ್ತಿಗೆದಾರರು ಭಾಗಿಯಾಗಿರಲಿಲ್ಲ. ನಾಲ್ಕನೇ ಬಾರಿ ಟೆಂಡರ್‌ ಆಹ್ವಾನಿಸಿದ ಸಂದರ್ಭದಲ್ಲಿ ಸಂಸ್ಥೆಯೊಂದು ಭಾಗವಹಿಸಿದೆ. ಗುತ್ತಿಗೆದಾರ ಸಂಸ್ಥೆ ಶೇ.19ರಷ್ಟು ಹೆಚ್ಚಿನ ಮೊತ್ತದ ಟೆಂಡರ್‌ ಮೊತ್ತ ಬಿಡ್‌ ಮಾಡಿದೆ. ಆದರೆ, ಅನುಮೋದಿತ ಮೊತ್ತ ಬಹಿರಂಗವಾಗಿಲ್ಲ.

ಸಮಿತಿ ಪರಿಶೀಲನೆ: ಟೆಂಡರ್‌ ಪರಿಶೀಲನಾ ಸಮಿತಿ ಶುಕ್ರವಾರ ಒಂದು ಹಂತದ ಪರಿಶೀಲನೆ ನಡೆಸಿ ಇನ್ನಷ್ಟುಮಾಹಿತಿ ಸಲ್ಲಿಸುವಂತೆ ಸಂಬಂಧಪಟ್ಟಎಂಜಿನಿಯರ್‌ಗೆ ಸೂಚನೆ ನೀಡಿದೆ. ಸೋಮವಾರ ಮತ್ತೊಂದು ಸುತ್ತಿನ ಸಭೆ ನಡೆಸುವ ಸಾಧ್ಯತೆ ಇದೆ. ಪರಿಶೀಲನೆ ವೇಳೆ ಗುತ್ತಿಗೆದಾರ ಸಂಸ್ಥೆಯ ದಾಖಲಾತಿಗಳು ಹಾಗೂ ಆರ್ಥಿಕ ಸಾಮರ್ಥ್ಯದ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜುಲೈನಲ್ಲಿ ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೋ ಪರೀಕ್ಷೆ: ಬಳಿಕ ಸಿಎಂಆರ್‌ಎಸ್‌ ತಪಾಸಣೆ

ಕಾಮಗಾರಿ ನಡೆಸುವುದಕ್ಕೆ ಆಯ್ಕೆಗೊಂಡಿರುವ ಗುತ್ತಿಗೆದಾರ ಸಂಸ್ಥೆಯನ್ನು ಬಹುತೇಕ ಅಂತಿಮಗೊಳಿಸಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇರುವ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು. ಸರ್ಕಾರ ಅನುಮತಿ ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪಾಲಿಕೆಗೆ 40 ಕೋಟಿ ಹೊರೆ: ಈ ಹಿಂದೆ 2017ರಲ್ಲಿ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು .204 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಕಾಮಗಾರಿಯ ಗುತ್ತಿಗೆ ಸಂಸ್ಥೆಗೆ 2021ರ ಸೆಪ್ಟೆಂಬರ್‌ವರೆಗೆ 75.11 ಕೋಟಿ ಬಿಲ್‌ ಪಾವತಿಸಲಾಗಿದೆ. ಇದೀಗ ಮರು ಕಾಮಗಾರಿಗೆ 143 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿರುವುದರಿಂದ ಪಾಲಿಕೆಗೆ 40 ಕೋಟಿ ಹೊರೆಯಾಗಲಿದೆ.

Bengaluru: ಹೊಯ್ಸಳದಲ್ಲಿ ಪೊಲೀಸ್‌ ಆಯುಕ್ತ ದಯಾನಂದ್‌ ಸಿಟಿ ರೌಂಡ್ಸ್‌

ಶೇ.57 ಕಾಮಗಾರಿ: ಈಜಿಪುರ ಜಂಕ್ಷನ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗಿನ ಒಟ್ಟು 2.5 ಕಿ.ಮೀ. ಉದ್ದದ ಮೇಲ್ಸೇತುವೆಗೆ ಒಟ್ಟು 81 ಪಿಲ್ಲರ್‌ಗಳ ಪೈಕಿ 67 ಮಾತ್ರ ನಿರ್ಮಿಸಲಾಗಿದೆ. ಇನ್ನೂ ಶೇ.57.17ರಷ್ಟು ಬಾಕಿ ಇದೆ. ಟೆಂಡರ್‌ ಪಡೆಯುವ ಗುತ್ತಿಗೆದಾರ ಸಂಸ್ಥೆ 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ.