ಕೆಆರ್‌ಎಸ್ ಡ್ಯಾಂನ ಭರ್ತಿಗೆ ಕೇವಲ 9 ಅಡಿ ಅಷ್ಟೇ ಬಾಕಿ..!

ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 114.90 ಅಡಿಗೆ ತಲುಪಿದೆ.

Only 9 feet left to fill KRS Dam snr

 ಶ್ರೀರಂಗಪಟ್ಟಣ :  ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 114.90 ಅಡಿಗೆ ತಲುಪಿದೆ.

ಕೆಆರ್‌ಎಸ್ ಡ್ಯಾಂನ ಒಳಹರಿವಿನಲ್ಲಿ ಭಾರೀ ಹೆಚ್ಚಳವಾಗಿದ್ದು, ಜಲಾಶಯ ಭರ್ತಿಗೆ ಕೇವಲ 9 ಅಡಿಗಳು ಬಾಕಿ ಇದೆ. ಗುರುವಾರ ಬೆಳಗ್ಗೆ ಅಣೆಕಟ್ಟೆ 36,772 ಕ್ಯುಸೆಕ್ ಒಳ ಹರಿವಿತ್ತು. ಇದು ರಾತ್ರಿ ವೇಳೆಗೆ 40,490 ಕ್ಯುಸೆಕ್ ಗೆ ಏರಿಕೆಯಾಗಿತ್ತು. ಜಲಾಶಯದಿಂದ 2560 ಕ್ಯುಸೆಕ್ ನೀರನ್ನು ಹೊರ ಬಿಡಲಾಗಿತ್ತು. 124.80 ಅಡಿ ಗರಿಷ್ಠ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ 49.452 ಇದ್ದು, ಪ್ರಸ್ತುತ 36.943 ಟಿಎಂಸಿ ನೀರು ಸಂಗ್ರಹವಾಗಿದೆ.

ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನದಿ ನೀರು ಬಿಡಲು ಕರ್ನಾಟಕಕ್ಕೆ ಶಿಫಾರಸು!

ಕಾವೇರಿ ಜಲಾನಯನ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಿಂದಾಗಿ ರಾತ್ರಿ ವೇಳೆಗೆ ಜಲಾಶಯ ಅಡಿಗೆ ನೀರು ಏರಿಕೆಯಾಗಿತ್ತು. ಇನ್ನೂ ಹೆಚ್ಚಿನ ಒಳಹರಿವು ಬರುವ ಸಾಧ್ಯತೆ ಇದ್ದು ಅಣೆಕಟ್ಟೆಯಲ್ಲಿ ಇನ್ನಷ್ಟು ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ. ಮಂಡ್ಯ ಜಿಲ್ಲಾದ್ಯಂತ ಮೋಡ ಆವರಿಸಿದ್ದು, ಆಗಾಗ್ಗೆ ಮಳೆ ಸುರಿದು ವಾತಾವರಣವನ್ನು ಮತ್ತಷ್ಟು ತಂಪಾಗಿಸಿತು. ಗುರುವಾರ ಬೆಳಗ್ಗೆಯಿಂದ ಸಂಜೆವರೆಗೆ ಆಗಾಗ್ಗೆ ಸುರಿದ ಮಳೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು, ವಿದ್ಯಾರ್ಥಿಗಳು ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ತೊಂದರೆಗೆ ಒಳಗಾದರು. 

ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 114.90 ಅಡಿ

ಒಳ ಹರಿವು – 40,490 ಕ್ಯುಸೆಕ್

ಹೊರ ಹರಿವು – 2560 ಕ್ಯುಸೆಕ್

ನೀರಿನ ಸಂಗ್ರಹ – 36.943 ಟಿಎಂಸಿ

Latest Videos
Follow Us:
Download App:
  • android
  • ios