ತಮಿಳುನಾಡಿಗೆ ನಿತ್ಯ 1 ಟಿಎಂಸಿ ಕಾವೇರಿ ನದಿ ನೀರು ಬಿಡಲು ಕರ್ನಾಟಕಕ್ಕೆ ಶಿಫಾರಸು!

ತಮಿಳುನಾಡಿಗೆ ಕರ್ನಾಟದಿಂದ ನಿತ್ಯ 1 ಟಿಎಂಸಿ ಕಾವೇರಿ ನದಿ ನೀರು ಬಿಡಲು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ.

CWRC recommends Karnataka to release cauvery water to Tamil Nadu gow

ನವದೆಹಲಿ (ಜು.11): ತಮಿಳುನಾಡಿಗೆ ಕರ್ನಾಟದಿಂದ ನಿತ್ಯ 1 ಟಿಎಂಸಿ ಕಾವೇರಿ ನದಿ ನೀರು ಬಿಡಲು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ. CWRC (ಕಾವೇರಿ ನೀರು ನಿಯಂತ್ರಣ ಸಮಿತಿ) 99ನೇ ಸಭೆಯಲ್ಲಿ ಶಿಫಾರಸು ಮಾಡಲಾಗಿದ್ದು, ಪ್ರತಿನಿತ್ಯ ಒಂದು ಟಿಎಂಸಿ ನೀರು ತಮಿಳುನಾಡಿಗೆ  ಬಿಡಲು ಹೇಳಿದೆ. CWRC ಶಿಫಾರಸು ಹಿನ್ನೆಲೆ ಜುಲೈ 12 ರಿಂದ ಜುಲೈ 31 ರ ತನಕ ನಿತ್ಯ ಒಂದು ಟಿಎಂಸಿ ನೀರು ಕರ್ನಾಟಕ ಬಿಡಬೇಕಿದೆ.

ಮಂಗಳೂರಿನಲ್ಲಿ ಕಾಣೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಜೊತೆ ಪತ್ತೆ, ಯುವಕನ ಹಿನ್ನೆಲೆ ಕೇಳಿ ಶಾಕ್!

ಕೆಆರ್‌ಎಸ್‌ ಜಲಾಶಯ ಮಟ್ಟ ಇಂದು ಹೀಗಿದೆ.:
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 104.30 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 26.372 ಟಿಎಂಸಿ
ಒಳ ಹರಿವು - 6146 ಕ್ಯೂಸೆಕ್
ಹೊರ ಹರಿವು - 1972 ಕ್ಯೂಸೆಕ್

ಹಣ ಸುಲಿಗೆ ಪ್ರಕರಣ, ಕಾಣೆಯಾಗಿದ್ದ ನಿರೂಪಕಿ ದಿವ್ಯ ವಸಂತ ಕೇರಳದಲ್ಲಿ ಬಂಧನ!

ಕಳೆದ ಮೇ ತಿಂಗಳ ಕೊನೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು  ಮಳೆಗಾಲಕ್ಕೂ ಮುನ್ನವೇ ಕ್ಯಾತೆ ತೆಗೆದಿತ್ತು. ತುರ್ತಾಗಿ ಕಾವೇರಿ ಜಲಾನಯನ ಪ್ರದೇಶದಿಂದ 2.5 ಟಿಎಂಸಿ ನೀರು ಹರಿಸುವಂತೆ ಪಟ್ಟು ಹಿಡಿದಿತ್ತು. ತಮಿಳುನಾಡು ಬೇಡಿಕೆಗೆ ಮಣೆ ಹಾಕಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 2.5 ಟಿಎಂಸಿ ನೀರು ಹರಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಕರ್ನಾಟಕ ಹರಿಸಿತ್ತು. ಇದು ಕಾವೇರಿ ವಿವಾದಕ್ಕೆ ಕಿಚ್ಚು ಹಚ್ಚಿದಂತಾಗಿತ್ತು.

Latest Videos
Follow Us:
Download App:
  • android
  • ios