ಬೆಂಗಳೂರು(ಫೆ.19): ಕಳೆದ ವರ್ಷ ತಮ್ಮ ವ್ಯಾಪ್ತಿಯ ಕಾಲೇಜುಗಳಿಗೆ ಆನ್ ಲೈನ್‌ನಲ್ಲಿ ಸಂಯೋಜನೆ ನೀಡುವ ಪದ್ಧತಿ ಜಾರಿಗೆ ತಂದಿದ್ದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ, ಮುಂಬರುವ ಶೈಕ್ಷಣಿಕ ವರ್ಷದಿಂದ (2020-21) ಈ ಮೊದಲಿದ್ದಂತೆ ಆಫ್‌ಲೈನ್‌ನಲ್ಲಿ ಪದ್ಧತಿ ಜಾರಿಗೆ ತರಲು ಮುಂದಾಗಿದೆ.

ತಾಂತ್ರಿಕ ದೋಷಗಳನ್ನು ಸರಿಪಡಿಸುವ ಬದಲಾಗಿ ಆಫ್ ಲೈನ್‌ಗೆ ಮರಳುತ್ತಿರುವುದಕ್ಕೆ ವಿವಿ ಆಂತರಿಕ ವಲಯದಲ್ಲಿಯೇ ಟೀಕೆ ವ್ಯಕ್ತವಾಗಿದೆ. ಬೆಂಗಳೂರು ಕೇಂದ್ರ ವಿವಿಯು ಕಳೆದ ವರ್ಷ ಮೊದಲ ಬಾರಿಗೆ ಸಂಯೋಜನೆ ನವೀಕರಣ, ಶಾಶ್ವತ ಸಂಯೋಜನೆ, ಇನ್ ಟೇಕ್ ಹೆಚ್ಚಳ, ಕಾಲೇಜು ಮಾನ್ಯತೆ ರದ್ದು ಸೇರಿದಂತೆ ಹಲವು ವಿಷಯಗಳಿಗೆ ಆನ್‌ಲೈನ್ ಮೂಲಕವೇ ಪ್ರಕ್ರಿಯೆ ನಡೆಸಿತ್ತು. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಶುಲ್ಕ, ಸ್ಥಳೀಯ ವಿಚಾರಣಾ ಸಮಿತಿ(ಎಲ್‌ಐಸಿ) ಪರಿಶೀಲನೆ ವೇಳೆ ಸದಸ್ಯರ ಅಕ್ರಮ ಸೇರಿದಂತೆ ವಿವಿಧ ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಾಗದ ಸಮಿತಿಯು ಮತ್ತೆ ಆಫ್‌ಲೈನ್‌ಗೆ ಮರಳಿದೆ ಎಂದು ತಿಳಿದು ಬಂದಿದೆ.

ಪಂಚಾಯಿತಿ ಚುನಾವಣೆ: ಗೆಲುವಿನ ಹಿಂದೆ ರೆಸಾರ್ಟ್ ರಾಜಕಾರಣ..!

ಕಳೆದ ವರ್ಷ ಕಾಲೇಜುಗಳು ಆನ್‌ಲೈನ್ ಮೂಲಕ ಅರ್ಜಿ ದಾಖಲಿಸಿದ ನಂತರ ಅರ್ಜಿಗಳನ್ನು ಪರಿಶೀಲನೆ ನಡೆಸಿದ ವಿಶ್ವವಿದ್ಯಾಲಯದ ಸ್ಥಳೀಯ ವಿಚಾರಣಾ ಸಮಿತಿ(ಎಲ್‌ಐಸಿ) ನಂತರ ಕಾಲೇಜುಗಳಿಗೆ ಖುದ್ದಾಗಿ ಭೇಡಿ ನೀಡಿ ಪರಿಶೀಲನೆ ನಡೆಸಿ ಹೊಸ ಮಾನ್ಯತೆ ಹಾಗೂ ಮಾನ್ಯತೆ ನವೀಕರಣ ಮಾಡುತ್ತಿದ್ದೇವು. ಆದರೆ, ಏಕಾಏಕಿ ವಿವಿಯು ಈ ಆನ್‌ಲೈನ್ ವ್ಯವಸ್ಥೆಯನ್ನು ಕೈಬಿಟ್ಟು 2020-21ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಆಫ್‌ಲೈನ್ ನಲ್ಲೇ ಮುಂದುವರೆಯಲು ಕಳೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ.

ಆಫ್‌ಲೈನ್‌ಗೆ ಬಂದಿದ್ದೇಕೆ?:

ಕಳೆದ ವರ್ಷ ಆನ್‌ಲೈನ್ ವ್ಯವಸ್ಥೆ ಜಾರಿ ವೇಳೆ ಖಾಸಗಿ ಕಂಪನಿಯೊಂದಕ್ಕೆ ಇದರ ಜವಾಬ್ದಾರಿಯನ್ನು ನೀಡಲಾಗಿತ್ತು. ಐದು ವರ್ಷದ ಅವಧಿಗೆ ಸೇವೆ ನೀಡಲು ಸಂಸ್ಥೆ ಹಾಗೂ ವಿವಿ ಒಪ್ಪಂದ ಮಾಡಿಕೊಂಡಿದ್ದವು. ಆರಂಭಿಕ ವರ್ಷದಲ್ಲಿ ಉಚಿತವಾಗಿ ಹಾಗೂ ನಂತರ ನಾಲ್ಕು ವರ್ಷ ಆನ್‌ಲೈನ್ ಪ್ರಕ್ರಿಯೆಗೆ ಶುಲ್ಕ ವಿಧಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಕಂಪನಿ ಆನ್ ಲೈನ್‌ನಲ್ಲಿ ಭರ್ತಿ ಮಾಡಲು ಪ್ರತಿ ಕಾಲೇಜಿನಿಂದ 10 ಸಾವಿರ ಶುಲ್ಕ ಪಡೆದಿರುವುದರಿಂದ ಕಾಲೇಜುಗಳು ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ, ಕಾಲೇಜುಗಳಿಗೆ ಮಾನ್ಯತೆ ನವೀಕರಣದ ವೇಳೆ ಎಲ್‌ಐಸಿ ಸಮಿತಿ ಸದಸ್ಯರೊಬ್ಬರು ಕಾಲೇಜಿನಿಂದ ಲಂಚ ಸ್ವೀಕರಿಸಿದ್ದರು ಎಂಬ ಆರೋಪವಿದೆ. ಈ ಎಲ್ಲಾ ಕಾರಣಗಳಿಂದ ಆಫ್ ಲೈನ್ ಮೊರೆ ಹೋಗಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಕಾಲೇಜು ಆಫ್‌ಲೈನ್‌ಗೆ ಮರಳಿದ್ದೇ ಆದಲ್ಲಿ ವಿವಿಯ ವ್ಯಾಪ್ತಿಯಲ್ಲಿ 250 ಕಾಲೇಜುಗಳು ಸಂಯೋಜನೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಆಫ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

ಕಿಡಿಗೇಡಿಗಳಿಂದ ಕೃತ್ಯ: ವರ್ತೂರು ಬಳಿ ನೀಲಗಿರಿ ತೋಪಿಗೆ ಬೆಂಕಿ

ಆಫ್‌ಲೈನ್‌ಗೆ ಟೀಕೆ ಆಧುನಿಕ ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿರುವ ಕಾಲಘಟ್ಟದಲ್ಲಿ ಆಫ್ ಲೈನ್ ವ್ಯವಸ್ಥೆಯನ್ನು ಆನ್‌ಲೈನ್‌ಗೆ ಮಾರ್ಪಾಡು ಮಾಡಲಾಗುತ್ತಿದೆ. ಇಂತಹದ್ದರಲ್ಲಿ ಆನ್‌ಲೈನ್ ವ್ಯವಸ್ಥೆಯಿಂದ ಆಫ್‌ಲೈನ್‌ಗೆ ಮರಳುತ್ತಿರುವುದು ಮೂರ್ಖತನದ ಪರಮಾವಧಿಯಾಗಿದೆ. ಕೇಂದ್ರ ಸರ್ಕಾರ ಸ್ವಾಮ್ಯದಲ್ಲಿರುವ ರಾಷ್ಟ್ರೀಯ ಮಾಹಿತಿ ಕೇಂದ್ರದ(ಎನ್‌ಐಸಿ) ಸಹಾಯ ಪಡೆದುಕೊಂಡು ಆನ್ ಲೈನ್ ಪದ್ಧತಿಯನ್ನೇ ಮುಂದುವರಿಸಬಹುದು.

ಇದಕ್ಕೆ ಹೆಚ್ಚಿನ ಆರ್ಥಿಕ ಹೊರೆ ಸಹ ಬೀಳುವುದಿಲ್ಲ ಎಂದು ವಿಶ್ವವಿದ್ಯಾಲಯದ ಹಲವರು ಹೇಳುತ್ತಾರೆ. ಆನ್‌ಲೈನ್ ಪ್ರಕ್ರಿಯೆಯಲ್ಲಿ ಕೆಲವು ಲೋಪದೋಷಗಳು ಕಂಡು ಬಂದಿರು ವುದರಿಂದ ಹಾಗೂ ನಗರ ದಲ್ಲಿಯೇ ವಿವಿ ಕೇಂದ್ರ ಕಚೇರಿ ಇರುವುದರಿಂದ ಸಂಯೋಜನೆಗೆ ಆಫ್ ಲೈನ್ ಅನುಕೂಲವೆಂದು ಪರಿಗಣಿಸಲಾಗಿದೆ. ಮತ್ತೊಮ್ಮೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ. ? ಪ್ರೊ.ಎಸ್.ಜಾಫೆಟ್, ಕುಲಪತಿ, ಬೆಂ.ಕೇಂದ್ರ ವಿವಿ.

-ಎನ್.ಎಲ್.ಶಿವಮಾದು