Asianet Suvarna News Asianet Suvarna News

ಬೆಲೆ ಕುಸಿತ: 4 ಕ್ವಿಂಟಲ್‌ ಈರುಳ್ಳಿ ಮಾರಿದ ರೈತನಿಗೆ ಸಿಕ್ಕಿದ್ದು ಕೇವಲ 8 ರು...!

ರೈತ​ರಿಗೆ ದಿಢೀರ್‌ ಬೆಲೆ ಕುಸಿ​ತ​ದಿಂದ ಬರ​ಸಿ​ಡಿಲು ಬಡಿ​ದಂತಾ​ಗಿದೆ. 
 

Onion Price Decline in Bengaluru grg
Author
First Published Nov 29, 2022, 8:30 AM IST

ಗದಗ(ನ.29):  ಹೊಲ ಹರಗಿ, ಹದ ಮಾಡಿ, ಬೀಜ, ಗೊಬ್ಬರ ಹಾಕಿ ವರ್ಷ ಪೂರ್ತಿ ದುಡಿದು ಬೆಳೆದ ಈರುಳ್ಳಿಯನ್ನು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಬೇಕು ಎಂದ ರೈತ​ರಿಗೆ ದಿಢೀರ್‌ ಬೆಲೆ ಕುಸಿ​ತ​ದಿಂದ ಬರ​ಸಿ​ಡಿಲು ಬಡಿ​ದಂತಾ​ಗಿದೆ. 

ಗದಗ ತಾಲೂ​ಕಿನ ತಿಮ್ಮಾಪೂರ ಗ್ರಾಮದ ರೈತ ಪವಾಡೆಪ್ಪ ಹಳ್ಳಿಕೇರಿ ಎಂಬುವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ 4 ಕ್ವಿಂಟಲ್‌ ಈರುಳ್ಳಿಯನ್ನು ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ತಂದಿದ್ದರು. ಈರುಳ್ಳಿ ಬೆಲೆ ದಿಢೀರ್‌ ಕುಸಿತ ಕಂಡಿದ್ದು, 1 ಕ್ವಿಂಟಲ್‌ಗೆ 100 ರು.ನಂತೆ ಮಾರಾಟವಾಯಿತು. ಹೀಗಾಗಿ, 4 ಕ್ವಿಂಟಲ್‌ಗೆ (4 ಕ್ವಿಂಟಲ್‌ 10 ಕೆಜಿ) ಒಟ್ಟು 410 ರು.ಬಿಲ್‌ ಆಗಿದೆ. ಲಾರಿ ಬಾಡಿಗೆ 377 ರು., ಹಮಾಲಿ ಖರ್ಚು 24 ರು. ಇವೆಲ್ಲಾ ಕಳೆದು ಪವಾಡೆಪ್ಪ ಅವರಿಗೆ ದೊರೆತ ಹಣ ಕೇವಲ 8 ರೂಪಾಯಿ 36 ಪೈಸೆ. ಸರ್ಕಾರ ಮಧ್ಯ ಪ್ರವೇಶಿಸಿ ಈರುಳ್ಳಿಗೆ ಸೂಕ್ತ ಬೆಲೆ ನಿಗದಿ ಪಡಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ಸಿ.ಟಿ. ರವಿ ಅವರದ್ದು ವಿನಾಶಕಾರಿ ಬುದ್ಧಿ: ಸಲೀಮ್ ಅಹ್ಮದ್ ಹೇಳಿಕೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ.ಎಚ್‌.ಬಾಬರಿ, ರೈತರು ಸಾಲ ​ಮಾಡಿ ಸಾವಿರಾರು ರೂ.ಖರ್ಚು ಮಾಡಿ ಈರುಳ್ಳಿ ಬೆಳೆಯುತ್ತಾರೆ. ಮಾಡಿ​ದ ಖರ್ಚು ಸಹ ಮರಳಿ ಬಾರದಂತಾಗಿದೆ. ಈ ಬಗ್ಗೆ ಸರ್ಕಾರ ಮಧ್ಯ ಪ್ರವೇಶಿಸಿ ಈರುಳ್ಳಿಗೆ ಸೂಕ್ತ ಬೆಲೆ ನಿಗದಿ ಪಡಿಸಬೇಕು. ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios