Asianet Suvarna News Asianet Suvarna News

ಸಿ.ಟಿ. ರವಿ ಅವರದ್ದು ವಿನಾಶಕಾರಿ ಬುದ್ಧಿ: ಸಲೀಮ್ ಅಹ್ಮದ್ ಹೇಳಿಕೆ

ಸಿದ್ದರಾಮಯ್ಯ ಅವರನ್ನ ಸಿದ್ರಾಮುಲ್ಲಾ ಅಂತಾ ಟೀಕಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರದ್ದು ವಿನಾಶಕಾರಿ ಬುದ್ಧಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಸಲೀಮ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು.

CT Ravi devastating wit is Salim Ahmed statement
Author
First Published Nov 28, 2022, 5:50 PM IST

ಗದಗ (ನ.28) : ಸಿದ್ದರಾಮಯ್ಯ ಅವರನ್ನ ಸಿದ್ರಾಮುಲ್ಲಾ ಅಂತಾ ಟೀಕಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರದ್ದು ವಿನಾಶಕಾರಿ ಬುದ್ಧಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಸಲೀಮ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಆದರೆ ಸಿಟಿ ರವಿ ಅವರು, ಶಾಂತಿ ನೆಮ್ಮದಿಯ ವಿರುದ್ಧದ ಹೇಳಿಕೆ ಮಾಡುತ್ತಿದ್ದಾರೆ. ಈ ಹಿಂದೆ ಜವಾಹರಲಾಲ್ ನೆಹರು, ಟಿಪ್ಪು ಹಾಗೂ ಅಲ್ಪ ಸಂಖ್ಯಾತರ ಬಗ್ಗೆ ಟೀಕಿಸಿದ್ದರು. ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಪಕ್ಷದ ಜನರಲ್ ಸೆಕ್ರೆಟರಿಯಾದ ಸಿಟಿ ರವಿಯವರಿಗೆ ಇಂಥ ಮಾತುಗಳು ಶೋಭೆ ತರಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವವರು 40 ಪರ್ಸೆಂಟೇಜ್ ಬಗ್ಗೆ ಸಯಾಕೆ ಮಾತಾಡಲ್ಲ. ಹುಬ್ಬಳ್ಳಿಯ ಗುತ್ತಿಗೆದಾರರ ದಯಾಮರಣಕ್ಕೆ ಅರ್ಜಿಸಲ್ಲಿಸಿದ್ದರೂ ಅದರ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಹೇಳಿಕೆ ನೀಡುವುದು ಹಾಗೂ ಮತದಾರರ ಪಟ್ಟಿ ಕದಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

KPCC Ticket Fight: ಡಿಕೆಶಿಗೆ ಸಿಕ್ಕಿದ್ಯಾ ಸಿದ್ದು ಲೆಕ್ಕಾಚಾರದ ಸುಳಿವು? ಟಗರಿಗೆ ಟಕ್ಕರ್ ಕೊಟ್ರಾ ಬಂಡೆ?

ಮೂರು ವರ್ಷದ ನಂತರ ಜನಸ್ಪಂದನೆ ಯಾತ್ರೆ ಮಾಡುತ್ತಿದ್ದಾರೆ. ಯುವಕರಿಗೆ ಉದ್ಯೋಗ ಇಲ್ಲ.  ರೈತರ ಸಮಸ್ಯೆಗೆ ಸ್ಪಂದಿಸಿಲ್ಲ. ಹೀಗಾಗಿ ಬಿಜೆಪಿ ರಾಜ್ಯದ ಜನರ ಕ್ಷಮೆ ಕೇಳಬೇಕು. ಜನರ ಬಳಿ ಹೋಗುತ್ತಿದ್ದೀರಿ, ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಬೆಲೆ ಜಾಸ್ತಿಯಾಗಿದ್ದಕ್ಕೆ ಜನ ನಿಮಗೆ ಆಶೀರ್ವಾದ ಮಾಡಬೇಕಾ> ನಿಮ್ಮನ್ನ ಬದಲಿಸಬೇಕು ಅಂತಾ ಜನ ಸಂಕಲ್ಪ ಮಾಡಿದ್ದಾರೆ. ನಿಮ್ಮ ಸರ್ಕಾರದ ಆಯುಷ್ಯ ಮುಗಿದಿದೆ. ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುತ್ತೇವೆ. ಹೈಕಮಾಂಡ್‌ ಸೂಚಿಸಿದವರು ಮುಖ್ಯಮಂತ್ರಿ ಆಗುತ್ತಾರೆ. ಇನ್ನು ಮತದಾರರ ಮಾಹಿತಿ ಕದಿಯುವ ಬಗ್ಗೆ ಸುಪ್ರೀಂ ಕೋರ್ಟ್ ಆಯೋಗ ರಚಿಸಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios