Asianet Suvarna News Asianet Suvarna News

ಟರ್ಕಿ ಈರುಳ್ಳಿಯೂ ಖಾಲಿ, ಇನ್ನು ಈಜಿಪ್ಟ್ ಈರುಳ್ಳಿ..!

ಟರ್ಕಿ ಈರುಳ್ಳಿ ರುಚಿ ನೋಡಿದ ಮಂಗಳೂರಿಗರಿಗೆ ಈಗ ಈಜಿಪ್ತ್ ಈರುಳ್ಳಿ ಖರೀದಿಸಬೇಕಿದೆ. ಮಾರುಕಟ್ಟೆಯಲ್ಲಿ ಟರ್ಕಿ ಈರುಳ್ಳಿ ಖಾಲಿಯಾಗಿದ್ದು, ಇದೀಗ ಅನಿವಾರ್ಯವಾಗಿ ಈಜಿಪ್ಟ್‌ನಿಂದ ಆಮದು ಮಾಡಿಕೊಳ್ಳಬೇಕಾಗಿದೆ.

 

onion imported from turkey is empty manglore imports onion from Egypt
Author
Bangalore, First Published Dec 7, 2019, 8:19 AM IST

ಮಂಗಳೂರು(ಡಿ.07): ಮಂಗಳೂರು ಮಾರುಕಟ್ಟೆಯಲ್ಲಿ ಶುಕ್ರವಾರ ಟರ್ಕಿ ಈರುಳ್ಳಿ ಖಾಲಿಯಾಗಿದೆ. ಇದರ ಬದಲು ಈಜಿಪ್ಟ್ ಈರುಳ್ಳಿ ಪ್ರವೇಶವಾಗಿದೆ. ಈ ಬಾರಿ ಬೆಳಗಾವಿ ಈರುಳ್ಳಿಯೂ ಮಂಗಳೂರು ಮಾರುಕಟ್ಟೆಗೆ ಬಂದಿದೆ.

ಕಳೆದ ಮೂರು ದಿನಗಳಿಂದ ಆಮದಾಗಿದ್ದ ಟರ್ಕಿ ಈರುಳ್ಳಿ ಬಹುತೇಕ ಖಾಲಿಯಾಗಿದೆ. ಇದೇ ವೇಳೆ ಈಜಿಪ್ಟ್‌ನಿಂದ ಈರುಳ್ಳಿ ಆಮದಾಗಿ ಮಾರುಕಟ್ಟೆಗೆ ಬಂದಿದೆ. ಇದನ್ನು ರಖಂ ವ್ಯಾಪಾರಸ್ಥರು ಚಿಲ್ಲರೆ ವರ್ತಕರಿಗೆ ಮಾರಾಟ ಮಾಡುತ್ತಿದ್ದಾರೆ. ಈ ಮಧ್ಯೆ ಬೆಳಗಾವಿ ಈರುಳ್ಳಿ ಕೂಡ ಆಗಮಿಸಿರುವುದರಿಂದ ದಿನದ ಮಟ್ಟಿಗೆ ಮಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆ ತಟ್ಟಿಲ್ಲ.

ಟ್ರಾಫಿಕ್‌ ವಾರ್ಡನ್‌ಗಳಾಗಲು ಮುಂದೆ ಬನ್ನಿ; ನಾಗರಿಕರಿಗೆ ಕಮಿಷನರ್‌ ಆಹ್ವಾನ

ಹಾಗೆಂದು ಟರ್ಕಿ ಅಥವಾ ಈಜಿಪ್ತ್ ಈರುಳ್ಳಿ ಆವಕ ಆಗದಿದ್ದರೆ ಶನಿವಾರದಿಂದಲೇ ಮತ್ತೆ ಈರುಳ್ಳಿ ಅಭಾವ ಕಾಣಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರು ಹೇಳುತ್ತಾರೆ. ಎಲ್ಲ ವರ್ಗದ ಈರುಳ್ಳಿ ಧಾರಣೆಯಲ್ಲಿ ಗಮನಾರ್ಹ ವ್ಯತ್ಯಾಸಗಳಾಗಿಲ್ಲ. ಧಾರಣೆಯಲ್ಲಿ ಇಳಿಕೆಯೂ ಆಗಿಲ್ಲ. ಆದರೂ ಈರುಳ್ಳಿಗೆ ಹೇಳುವಂತಹ ಬೇಡಿಕೆ ಕಂಡುಬಂದಿಲ್ಲ ಎನ್ನುತ್ತಾರೆ ರಖಂ ವ್ಯಾಪಾರಿಗಳು.

ಹೆಚ್ಚಿದ ಈರುಳ್ಳಿ ದರ: ಮುಚ್ಚುವ ಸ್ಥಿತಿಗೆ ಬಂದ ಹೋಟೆಲ್‌ಗಳು!

ಈರುಳ್ಳಿ ಹೆಸರು ಸಗಟು(ರಖಂ) ಟರ್ಕಿ 150, ಚಿಲ್ಲರೆ 160, ಸಗಟು(ರಖಂ) ಈಜಿಪ್ಟ್ 140 ರು. ಚಿಲ್ಲರೆ 150 ರು, ಸಗಟು(ರಖಂ) ಬೆಳಗಾಂ 130 ರು. ಚಿಲ್ಲರೆ 140 ರು. ಸಗಟು(ರಖಂ)  ಹಳತು 130 ರು. ಚಿಲ್ಲರೆ 140 ರು. ಸಗಟು(ರಖಂ) ಹೊಸತು 130 ರು.  ಚಿಲ್ಲರೆ 140 ರು.

ಬಿರಿಯಾನಿ ಜೊತೆ ಈರುಳ್ಳಿ ಕೊಡದ್ದಕ್ಕೆ ಮಾರಾಮಾರಿ!

Follow Us:
Download App:
  • android
  • ios