Asianet Suvarna News Asianet Suvarna News

ಟ್ರಾಫಿಕ್‌ ವಾರ್ಡನ್‌ಗಳಾಗಲು ಮುಂದೆ ಬನ್ನಿ; ನಾಗರಿಕರಿಗೆ ಕಮಿಷನರ್‌ ಆಹ್ವಾನ

ಮಂಗಳೂರಿನಲ್ಲಿ ವಾಹನಗಳ ಸಂಖ್ಯೆಯನ್ನು ಅವಲೋಕಿಸಿದಾಗ ಟ್ರಾಫಿಕ್‌ ವಾರ್ಡನ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕಿದೆ. ಹಾಗಾಗಿ ನಗರ ನಿವಾಸಿಗಳು ಟ್ರಾಫಿಕ್‌ ವಾರ್ಡನ್‌ಗಳಾಗಲು ಸ್ವಯಂಪ್ರೇರಿತರಾಗಿ ಮುಂದೆ ಬನ್ನಿ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ. ಪಿ.ಎಸ್‌. ಹರ್ಷ ಆಹ್ವಾನಿಸಿದ್ದಾರೆ.

mangalore Police commissioner invites public to become Traffic Warden
Author
Bangalore, First Published Dec 6, 2019, 1:04 PM IST

ಮಂಗಳೂರು(ಡಿ.06): ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ಒತ್ತಡ ಹೆಚ್ಚುತ್ತಿವೆ. ಪೊಲೀಸ್‌ ಇಲಾಖೆಯು ಈ ಒತ್ತಡವನ್ನು ನಿಭಾಯಿಸಲು ಸಾಕಷ್ಟುಶ್ರಮಿಸುತ್ತಿದೆ. ಅಲ್ಲದೆ, ಟ್ರಾಫಿಕ್‌ ವಾರ್ಡನ್‌ಗಳು ಕೂಡಾ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಗರದ ವಾಹನಗಳ ಸಂಖ್ಯೆಯನ್ನು ಅವಲೋಕಿಸಿದಾಗ ಟ್ರಾಫಿಕ್‌ ವಾರ್ಡನ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕಿದೆ. ಹಾಗಾಗಿ ನಗರ ನಿವಾಸಿಗಳು ಟ್ರಾಫಿಕ್‌ ವಾರ್ಡನ್‌ಗಳಾಗಲು ಸ್ವಯಂಪ್ರೇರಿತರಾಗಿ ಮುಂದೆ ಬನ್ನಿ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ. ಪಿ.ಎಸ್‌. ಹರ್ಷ ಆಹ್ವಾನಿಸಿದ್ದಾರೆ.

ಕರ್ತವ್ಯದ ಮಧ್ಯೆಯೂ ಸಮಾಜ ಸೇವೆ ಸಲ್ಲಿಸುವ ಪೊಲೀಸರು ಹಾಗೂ ಟ್ರಾಫಿಕ್‌ ವಾರ್ಡನ್‌ಗಳಾಗಿ ಸೇವೆ ಸಲ್ಲಿಸುವವರಿಗೆ ಉದ್ಯಮಿಗಳಾದ ಮೈಕಲ್‌ ಡಿಸೋಜಾ ಮತ್ತು ಗಿಲ್ಬರ್ಟ್‌ ಡಿಸೋಜಾ ಸಹೋದರರು ನಗರದ ಪೊಲೀಸ್‌ ಕಮಿಷನರ್‌ರ ಕಚೇರಿಯಲ್ಲಿ ಬುಧವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.

ಬೈ ಎಲೆಕ್ಷನ್ ರಿಸಲ್ಟ್ ಹಿಂದಿನ ದಿನ ಬಿಎಸ್‌ವೈ ಟೆಂಪಲ್ ರನ್..!

ಮಂಗಳೂರಿನ ಸಂಚಾರ ಸಮಸ್ಯೆಯು ಸವಾಲಾಗಿ ಪರಿಣಮಿಸುತ್ತಿದೆ. ಹಾಗಾಗಿ ಟ್ರಾಫಿಕ್‌ ವಾರ್ಡನ್‌ಗಳ ಸೇವೆ ಅತ್ಯಗತ್ಯ. ಬೆಂಗಳೂರಿನಲ್ಲಿ ಸಮಾಜದ ಗಣ್ಯ ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಟ್ರಾಫಿಕ್‌ ವಾರ್ಡನ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನಲ್ಲೂ ಕೂಡಾ ಈ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದಿದ್ದಾರೆ.

ಈ ಸಂದರ್ಭ ಹಿರಿಯ ಟ್ರಾಫಿಕ್‌ ವಾರ್ಡನ್‌ ಜೋ ಗೊನ್ಸಾಲ್ವಿಸ್‌, ಕರ್ತವ್ಯದಲ್ಲಿರುವಾಗಲೇ ಸಮಾಜ ಸೇವೆಯ ಮೂಲಕ ಗಮನಸೆಳೆದ ಸಂಚಾರ ಪೊಲೀಸ್‌ ಠಾಣೆಯ ಕೃಷ್ಣಕುಮಾರ್‌, ಪುಟ್ಟರಾಮರನ್ನು ಸನ್ಮಾನಿಸಲಾಯಿತು. ಅಲ್ಲದೆ ಟ್ರಾಫಿಕ್‌ ವಾರ್ಡನ್‌ಗಳಾದ ಮೇರಿಸ್‌ ರೊಡ್ರಿಗಸ್‌, ಮೇರಿ ಪಿರೇರ, ಜೆ.ಮುಹಮ್ಮದ್‌ ಎ.ಕೆ., ರಿಚರ್ಡ್‌ ಡಿಸೋಜಾ, ಸುನೀಲ್‌ ಡಿಸೋಜಾ, ಬೂಬ, ಜೋಯೆಲ್‌ ಅಶೋಕ್‌ ಫರ್ನಾಂಡಿಸ್‌, ಡಿನತ್‌ ಡೇಸಾ, ರೋಶನ್‌ ಪತ್ರಾವೋ ಅವರನ್ನು ಗೌರವಿಸಲಾಯಿತು.

ಬಾಬರಿ ಮಸೀದಿ ಧ್ವಂಸ: ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ

ಡಿಸಿಪಿ ಲಕ್ಷ್ಮಿಗಣೇಶ್‌, ಸಂಚಾರಿ ಎಸಿಪಿ ಮಂಜುನಾಥ ಶೆಟ್ಟಿ, ದಕ್ಷಿಣ ಎಸಿಪಿ ಕೋದಂಡರಾಮ, ಸಂಚಾರಿ ಇನ್ಸ್‌ಪೆಕ್ಟರ್‌ಗಳಾದ ಗೋಪಾಲಕೃಷ್ಣ ಭಟ್‌, ಗುರುದತ್‌್ತ ಕಾಮತ್‌ ಇದ್ದರು.

Follow Us:
Download App:
  • android
  • ios