ಡಯಾಲಸಿಸ್ ಯಂತ್ರ ಕೆಟ್ಟು ಓರ್ವ ರೋಗಿ ಸಾವು|ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರ್ಘಟನೆ|ಇತರೆ ರೋಗಿಗಳು ವಿಮ್ಸ್ ಆಸ್ಪತ್ರೆಗೆ ಸ್ಥಳಾಂತರ.

ಕಲಬುರಗಿ, [ಸೆ.12]: ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಸಿಸ್ ಯಂತ್ರ ಕೆಟ್ಟು ನಿಂತ [ದುರಸ್ತಿ] ಪರಿಣಾಮ ಓರ್ವ ರೋಗಿ ಸಾವು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

16 ವರ್ಷದ ಆಕಾಶ್ ಮೃತ ದುರ್ದೈವಿ. 14 ಬೆಡ್ ಗಳನ್ನು ಹೊಂದಿರುವ ಡಯಾಲಸಿಸ್ ಯೂನಿಟ್ ಹಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಏಕಾಏಕಿ ಕೆಟ್ಟು ನಿಂತಿರುವುದರಿಂದ ಈ ದುರ್ಘಟನೆ ಸಂಭವಿಸಿದೆ.

ಘಟನೆ ಸಂಭವಿಸುತ್ತಿದ್ದಂತೆ ಇತರೆ ರೋಗಿಗಳನ್ನು ವಿಮ್ಸ್ ನ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದ್ದು, ರೋಗಿಗಳ ಪೋಷಕರಲ್ಲಿ ಆತಂಕ ಮನೆಮಾಡಿದೆ.
 ಇನ್ನು ವಿಷಯ ತಿಳಿದು ಆಸ್ಪತ್ರೆಗೆ ಜಿಲ್ಲಾಧಿಕಾರಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.