ದಾವಣಗೆರೆ: ಕಳಪೆ ಆರ್‌ಎಲ್ ಸಲೈನ್‌ನಿಂದಾಗಿ ಒಬ್ಬ ಬಾಣಂತಿ ಸಾವು?
ಚಾಮರಾಜ ಪೇಟೆಯ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ತಂಡದ ಸದಸ್ಯ, ಶಾಸಕ ಡಾ. ಚಂದ್ರು ಲಮಾಣಿ ಭೇಟಿ ನೀಡಿದ್ದ ವೇಳೆ ಕಳಪೆ ಗುಣಮಟ್ಟದ ಆರ್‌ಎಲ್ ಸಲೈನ್‌ನಿಂದಾಗಿಯೇ ಹರಪನಹಳ್ಳಿ ತಾ. ಮೂಲಕ ಚಂದ್ರಮ್ಮ ಎಂಬ ಬಾಣಂತಿ ಮೃತಪಟ್ಟಿರುವ ಅನುಮಾನ ಕಂಡು ಬಂದಿದೆ.
ದಾವಣಗೆರೆ(ಜ.09): ಕಳಪೆ ಗುಣಟ್ಟದ ಆರ್‌ಎಲ್ ಸಲೈನ್‌ಗೆ ದಾವಣಗೆರೆಯಲ್ಲಿ ಬಾಣಂತಿ ಸಾವನ್ನಪ್ಪಿರಬಹುದಾ ಎಂಬ ಅನುಮಾನವನ್ನು ಬಿಜೆಪಿ ಸತ್ಯಶೋಧನಾ ತಂಡವು ವ್ಯಕ್ತಪಡಿಸಿದೆ.
ಚಾಮರಾಜ ಪೇಟೆಯ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ತಂಡದ ಸದಸ್ಯ, ಶಾಸಕ ಡಾ. ಚಂದ್ರು ಲಮಾಣಿ ಭೇಟಿ ನೀಡಿದ್ದ ವೇಳೆ ಕಳಪೆ ಗುಣಮಟ್ಟದ ಆರ್‌ಎಲ್ ಸಲೈನ್‌ನಿಂದಾಗಿಯೇ ಹರಪನಹಳ್ಳಿ ತಾ. ಮೂಲಕ ಚಂದ್ರಮ್ಮ ಎಂಬ ಬಾಣಂತಿ ಮೃತಪಟ್ಟಿರುವ ಅನುಮಾನ ಕಂಡು ಬಂದಿದೆ.
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಬಾಣಂತಿ ಸಾವು!
ಮೂವರು ಬಾಣಂತಿಯರು ಇಲ್ಲಿ ಸಾವನ್ನಪ್ಪಿದ್ದಾರೆ. ಈ ಪೈಕಿ ಒಬ್ಬ ಬಾಣಂತಿ ಆರ್‌ಎಲ್ ಸಲೈನ್ ನಿಂದಸಾವನ್ನಪ್ಪಿದ್ದಾರೆಂಬ ಅನುಮಾನವಿದೆ. ಹರಪನಹಳ್ಳಿ ಮೂಲಕ ಬಾಣಂತಿ ಚಂದ್ರಮ್ಮ ಇಂತಹದ್ದೇ ಕಳಪೆ ಆರ್‌ಎಲ್ ಸಿಲೈನ್‌ನಿಂದಲೇ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತಂಡವು ಬಲವಾಗಿ ಶಂಕಿಸಿತು. ನಿಷೇಧಿಸಿರುವ ಸೆಲೈನ್ ದಾವಣಗೆರೆ ಆಸ್ಪತ್ರೆ ಗೂ ಪೂರೈಕೆಯಾಗಿತ್ತು. ಆ ಸಲೈನ್ ಬ್ಯಾಚ್‌ನ ನಂಬರ್ ಸಹ ಆಸ್ಪತ್ರೆಯ ದಾಖಲೆಗಳಲ್ಲಿ ಸ್ಪಷ್ಟವಾಗಿದೆ.
ನ.22ರಂದು ಹರಪನಹಳ್ಳಿ ಮೂಲದ ಬಾಣಂತಿ ಚಂದ್ರಮ್ಮಗೆ ಸಲೈನ್ ಹಾಕಿದ 48 ಗಂಟೆಯಲ್ಲೇ ಸಾವನ್ನಪ್ಪಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ತಂಡದ ಸದಸ್ಯರು ಹೇಳಿದರು. ಸರ್ಕಾರ ಈಗಾಗಲೇ ಮೃತ ಬಾಣಂತಿಯರ ಕುಟುಂಬಗಳಿಗೆ 5 ಲಕ್ಷ ರು. ಪರಿಹಾರ ಘೋಷಣೆ ಮಾಡಿದೆ. ಆದರೆ, ಇದುವರೆಗೂ ಯಾರಿಗೂ ಪರಿಹಾರದ ಹಣವೇ ಬಂದಿಲ್ಲ. ಅಮಾಯಕ ಬಾಣಂತಿಯರ ಸಾವಿಗೆ ಕಾರಣವಾಗಿರುವ ಕಂಪನಿಯಿಂದಲೇ ಕೊಡಿಸುವ ಕೆಲಸ ಮಾಡಲಿ ಎಂದು ತಂಡದ ಸದಸ್ಯರು ಒತ್ತಾಯಿಸಿದರು.
ಈಗಾಗಲೇ ನಿಷೇಧಿತ ಸಲೈನ್‌ನಿಂದ ಎಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಅಂತಹ ಮಕ್ಕಳನ್ನು ಸರ್ಕಾರದತ್ತು ತೆಗೆದುಕೊಳ್ಳಬೇಕು. ದಾವಣಗೆರೆಯ ಆಸ್ಪತ್ರೆಗಳಲ್ಲಿ ವೈದ್ಯರುಅತ್ಯಂತಜವಾಬ್ದಾರಿಯಿಂದ ಕೆಲಸ ಮಾಡಿದ್ದರಿಂದ ಇಲ್ಲಿ ಬಾಣಂತಿಯರ ಅದೆಷ್ಟೋ ಸಾವುಗಳು ತಪ್ಪಿವೆ ಎಂದು ಬಿಜೆಪಿ ಸತ್ಯಶೋಧನಾ ತಂಡದ ಸದಸ್ಯ, ಶಾಸಕ ಡಾ. ಚಂದ್ರು ಲಮಾಣಿ ಸ್ಪಷ್ಟಪಡಿಸಿದರು.
ಆರೋಗ ಸಚಿವರ ರಾಜೀನಾಮೆಗೆ ಒತ್ತಾಯ
ದಾವಣಗೆರೆ: ರಾಜ್ಯದಲ್ಲಿ ಬಾಣಂತಿಯರು, ನವಜಾತ ಶಿಶುಗಳ ಸರಣಿ ಸಾವಿನ ಹಿನ್ನೆಲೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಶಿರಹಟ್ಟಿ ಶಾಸಕ, ಬಿಜೆಪಿಸತ್ಯ ಶೋಧನಾತಂಡದಡಾ.ಚಂದ್ರು ಲಮಾಣಿ ತಾಕೀತು ಮಾಡಿದ್ದಾರೆ.
ನಗರದ ಜಿಲ್ಲಾ ಆಸ್ಪತ್ರೆ ಮಹಿಳಾ ಮತ್ತು ಮಕ್ಕಳ ವಿಭಾಗ ಹಾಗೂ ಹಳೆ ಭಾಗದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸತ್ರೆಗಳಿಗೆ ಭೇಟಿನೀಡಿ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಜಾತ ಶಿಶುಗಳು, ಬಾಣಂತಿಯರ ಸಾವಿಗೆ ವೈದ್ಯ ರನು ಹೊಣೆ ಮಾಡುವುದು ಸರಿಯಲ್ಪ ಸರ್ಕಾರವು ಮಾನ್ಯತೆ ನೀಡಿದ ಔಷಧಿಯಿಂದಲೇ ಹೆಚ್ಚಿನ ಸಾವು ಸಂಭವಿಸಿರುವುದು ಸ್ಪಷ್ಟವಾಗಿದೆ ಎಂದರು.
ರಾಜ್ಯಕ್ಕೆ ಸಾವಿನ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರದ 19 ತಿಂಗಳ ಆಳ್ವಿಕೆಯಲ್ಲಿ 700ಕ್ಕೂ ಹೆಚ್ಚು ಬಾಣಂತಿಯರು ಸಾವನ್ನಪ್ಪಿದ್ದಾರೆ. 1100ಕ್ಕೂ ಹೆಚ್ಚು ನವಜಾತ ಶಿಶುಗಳು ಸಾವನ್ನಪ್ಪಿವೆ. ದಾವಣಗೆರೆ ಜಿಲ್ಲೆಯೊಂದರಲ್ಲೇ ಕಳೆದ 8 ತಿಂಗಳಲ್ಲಿ 33 ತಾಯಂದಿರು ಮೃತಪಟ್ಟಿದ್ದಾರೆ. ಈ ಸಾವುಗಳಿಗೆ ಸರ್ಕಾರದ ನಿರ್ಲಕ್ಷ್ಯ ಕಾರಣ, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಈ ಸಾವುಗಳಿಗೆ ಹೊಣೆ ಹೊರಬೇಕು ಎಂದು ತಾಕೀತು ಮಾಡಿದರು.
ಪಶ್ಚಿಮ ಬಂಗಾಳದ ಕಂಪನಿ ಪೂರೈಸಿದ ಔಷಧಿ ಯಿಂದಲೇ ಹೆಚ್ಚು ಸಾವು ಸಂಭವಿಸಿದೆ. ಫೆಬ್ರುವರಿ ತಿಂಗಳಲ್ಲೇ ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದರೂ. ಪ್ರತಿಭಟನೆ ಆರಂಭಿಸಿದ ನಂತರ ಔಷಧಿ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಔಷಧಿ ಗುಣಮಟ್ಟ ಪರೀಕ್ಷಿಸಿ. ಅನುಮೋದನೆ ನೀಡಬೇಕಿತ್ತು. ಆದರೆ, ಕಮೀಷನ್ ಆಸೆಗೆ ಔಷಧಿಗೆ ಅನುಮೋದನೆ ನೀಡಿರು ವುದು ಸ್ಪಷ್ಟ, ಸರ್ಕಾರವೇ ಮಾಡಿದ ವ್ಯವಸ್ಥಿತ ಕೊಲೆ ಗಳು ಇವಾಗಿವೆ ಎಂದು ಅವರು ಆರೋಪಿಸಿದರು.
ಬಾಣಂತಿಯರ ಸಾವಿಗೆ ಕಾರಣವಾದ ಔಷಧಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಮೃತ ಬಾಣಂತಿಯರು, ನವಜಾತ ಶಿಶುಗಳ ಸಂತ್ರಸ್ಥ ಕುಟುಂಬಗಳಿಗೆ ತಲಾ 25 ಲಕ್ಷ ರು. ಪರಿಹಾರ ನೀಡ ಬೇಕು. ಮೃತ ಬಾಣಂತಿಯರ ಮಕ್ಕಳ ಶಿಕ್ಷಣ ವೆಚ್ಚ ವನ್ನು ಅದೇ ಕಂಪನಿಯಿಂದ ವಸೂಲು ಮಾಡಬೇಕು. ಆರೋಗ್ಯ ಖಾತೆಯ ಜವಾಬ್ದಾರಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾದ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕು. ಇಲ್ಲವಾದರೆ ರಾಜ್ಯ ವ್ಯಾಪಿ ತೀವ್ರ ಹೋರಾಟ ನಡೆಸಬೇಕಾದೀತು ಎಂದು ಅವರು ಎಚ್ಚರಿಸಿದರು.
ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ನೈಜ ಕಾರಣ ಅರಿಯಲು, ಅದನ್ನು ನಿಯಂತ್ರಿಸಲು ಹೈಕೋರ್ಟ್ ನ್ಯಾಯಾಧೀಶರು, ಸರ್ಕಾರಿ ಹಿರಿಯ ವೈದ್ಯಾಧಿ ಕಾರಿಗಳ ನೇತೃತ್ವದಿಂದ ತನಿಖೆ ಕೈಗೊಳ್ಳಬೇಕು. ಗರ್ಭಿಣಿಯರ ಆರೈಕೆಗಾಗಿ ಕೇಂದ್ರ ಜಾರಿಗೊಳಿಸಿದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸ ಬೇಕು. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ವ್ಯವಸ್ಥೆ ಪರಿಶೀಲಿಸಿ, ಅದನ್ನು ಸುವ್ಯ ಸ್ಥಿತಗೊಳಿಸಿ, ಮೇಲ್ದರ್ಜೆಗೇರಿಸಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಮೂಲಸೌಕರ್ಯ, ವೈದ್ಯರು ಸಿಬ್ಬಂದಿ ನೇಮಿಸಬೇಕು ಎಂದು ಅವರು ಒತ್ತಾಯಿಸಿದರು.
ಸತ್ಯಶೋಧನಾ ತಂಡದಲ್ಲಿರುವ ಪಕ್ಷದ ವಕ್ತಾರ ಅಶೋಕ ಗೌಡ, ಪ್ರದೀಪ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಡಾ.ಶೋಭಾ, ಡಾ.ಪದ್ಧಾ ಪ್ರಕಾಶ, ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮುಖಂಡರಾದ ಗಾಯತ್ರಿ ಸಿದ್ದೇಶ್ವರ್, ಅರುಣಕುಮಾರನಾಯ್ಕ, ಐರಣಿ ಅಶ್ವೇಶ, ಲೋಕಿಕೆರಕೊಳೇನಹಳ್ಳಿ, ಕೊಟ್ರೇಶ, ಎಚ್.ಪಿ.ವಿಶ್ವಾಸ್ ಇದ್ದರು.
ನಿಲ್ಲದ ಬಾಣಂತಿಯರ ಮರಣ ಮೃದಂಗ: ಹೊಸ ವರ್ಷದ ದಿನವೇ ನವಜಾತ ಶಿಶು, ತಾಯಿ ಸಾವು!
ಸಚಿವರ ವಿರುದ್ಧ ಕ್ರಿಮಿನಲ್ ಕೇಸ್‌ಗೆ ಒತ್ತಾಯ
ರಾಜ್ಯದಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಸಾವಿನ ಹಿನ್ನೆಲೆ ಬಿಜೆಪಿಯಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ದೇಶನದಂತೆ ಸತ್ಯ ಶೋಧನಾ ತಂಡ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದೆ. ಎಲ್ಲಾ ಜಿಲ್ಲೆಗಳ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸತ್ಯ ಶೋಧನಾ ತಂಡದಸದಸ್ಯ, ಶಾಸಕ ಡಾ.ಚಂದ್ರು ಲಮಾಣಿ ತಿಳಿಸಿದರು.
ಬಾಣಂತಿಯರು, ನವಜಾತ ಶಿಶುಗಳ ಸಾವುಗಳಿಗೆ ಕಾರಣರಾದ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್‌ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಬೇಕು. ಈ ಕೂಡಲೇ ಇಬ್ಬರೂ ಸಚಿವರಿಂದ ರಾಜೀನಾಮೆ ಪಡೆಯಬೇಕು. ಅಲ್ಲಿವರೆಗೂ ನಮ್ಮ ಹೋರಾಟ ನಿಲ್ಲುವುದೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.