ನಿಲ್ಲದ ಬಾಣಂತಿಯರ ಮರಣ ಮೃದಂಗ: ಹೊಸ ವರ್ಷದ ದಿನವೇ ನವಜಾತ ಶಿಶು, ತಾಯಿ ಸಾವು!
ಹೆರಿಗೆ ನೋವಿನಿಂದ ಕಳೆದ ಡಿ.25 ರಂದು ರಿಮ್ ಬೋಧಕ ಆಸ್ಪತ್ರೆಗೆ ದಾಖಲಾಗಿದ್ದ ಶಿವಲಿಂಗಮ್ಮ ಮಗವಿಗೆ ಜನ್ಮ ನೀಡಿದ್ದು, ತೀವ್ರ ರಕ್ತಶ್ರಾವ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದರಿಂದ ಬಾಣಂತಿಯನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು, ಬುಧವಾರ ಬೆಳಗಿನ ಜಾವ 2 ಗಂಟೆಗೆ ಶಿಶು ಸಾವನಪ್ಪಿದ್ದು ಈ ಸುದ್ದಿ ತಿಳಿದ ತಾಯಿ ತೀವ್ರ ಆಘಾತಗೊಂಡು ಬೆಳಗಿನ ಜಾವ 4 ಗಂಟೆಗೆ ಸಾವನ್ನಪ್ಪಿದ್ದಾಳೆ.
ರಾಯಚೂರು(ಜ.02): ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ಮುಂದುವರೆದಿದ್ದು, ಹೊಸ ವರ್ಷದ ಮೊದಲ ದಿನವೇ ನವಜಾತ ಶಿಶು ಹಾಗೂ ಬಾಣಂತಿ ಸಾವನಪ್ಪಿರುವ ಘಟನೆ ಸ್ಥಳೀಯ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಬುಧವಾರ ಸಂಭವಿಸಿದೆ. ಜಿಲ್ಲೆ ದೇವದುರ್ಗ ತಾಲೂಕಿನ ಮಸೀದಿಪುರ ಗ್ರಾಮದ ಬಾಣಂತಿ ಶಿವಲಿಂಗಮ್ಮ (21) ಹಾಗೂ ಆಕೆಯ ಐದು ದಿನಗಳ ಮಗು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಹೆರಿಗೆ ನೋವಿನಿಂದ ಕಳೆದ ಡಿ.25 ರಂದು ರಿಮ್ ಬೋಧಕ ಆಸ್ಪತ್ರೆಗೆ ದಾಖಲಾಗಿದ್ದ ಶಿವಲಿಂಗಮ್ಮ ಮಗವಿಗೆ ಜನ್ಮ ನೀಡಿದ್ದು, ತೀವ್ರ ರಕ್ತಶ್ರಾವ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದರಿಂದ ಬಾಣಂತಿಯನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು, ಬುಧವಾರ ಬೆಳಗಿನ ಜಾವ 2 ಗಂಟೆಗೆ ಶಿಶು ಸಾವನಪ್ಪಿದ್ದು ಈ ಸುದ್ದಿ ತಿಳಿದ ತಾಯಿ ತೀವ್ರ ಆಘಾತಗೊಂಡು ಬೆಳಗಿನ ಜಾವ 4 ಗಂಟೆಗೆ ಕೊನೆಯುಸಿರು ಎಳೆದಿದ್ದಾಳೆ.
ಬೆಳಗಾವಿ: ಚಿಕಿತ್ಸೆ ಸಿಗದೇ ಗರ್ಭದಲ್ಲೇ ಶಿಶು ಸಾವು, ಬಾಣಂತಿ ಸ್ಥಿತಿ ಗಂಭೀರ
ರಿಮ್ಸ್ ಬೋಧಕ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ, ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡದ ಕಾರಣಕ್ಕೆ ತಾಯಿ-ಮಗು ಸಾವನಪ್ಪಿದೆ ಎಂದು ಸಂಬಂಧಿಕರು ಗಂಭೀರವಾಗಿ ಆರೋಪಿಸಿದ್ದಾರೆ.
ತಾಯಿ-ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಬಾಣಂತಿಯರ ಸಾವಿನ ಸಂಖ್ಯೆಯು 11ಕ್ಕೆ ಏರಿಕೆ ಕಂಡಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರಬಾಬು ಬಾಣಂತಿ ಅತಿ ಯಾದ ರಕ್ತ ಶ್ರಾವ, ರಕ್ತದ ಒತ್ತಡದ ಜೊತೆಗೆ ಮುಂಚಿತವಾಗಿಯೇ ಮೂರ್ಚೆ ಕಾಯಿಲೆ ಯಿಂದ ಬಳಲುತ್ತಿದ್ದಳು, ಜನಿಸಿದ ಮಗುವು ಸಹ ಆರೋಗ್ಯವಾಗಿರಲಿಲ್ಲ, ವೈದ್ಯರು ಪರೀಕ್ಷೆಗಳನ್ನು ನಡೆಸಿ ಚಿಕಿತ್ಸೆ ನೀಡಿರುವುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಕೊಪ್ಪಳ: ಸಿಜೇರಿಯನ್ ಹೆರಿಗೇಲಿ ಮಗು ಸಾವು, 2 ತಾಸಲ್ಲಿ ತಾಯಿಯೂ ಮೃತ!
ಕುಕನೂರು: ಕೊಪ್ಪಳ ಜಿಲ್ಲಾ ಆಸತ್ರೆಯಲ್ಲಿ ತಾಲೂಕಿನ ಆಡೂರು ಗ್ರಾಮದ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದ ಕೇಳಿಬಂದಿದೆ. ಆರೋಪ ಗ್ರಾಮದ ರೇಣುಕಾ ಪ್ರಕಾಶ ಹಿರೇಮನಿ (22) ಮೃತ ಬಾಣಂತಿ.
ತವರೂರು ಚಿಕ್ಕ ಬನ್ನಿಗೋಳ ಗ್ರಾಮದಿಂದ ಸೋಮವಾರ ರಾತ್ರಿ ಹೆರಿಗೆ ನೋವು ಕಂಡ ಕಾರಣ ರೇಣುಕಾಳನ್ನು ಕುಟುಂಬಸ್ಥರು ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿನ ವೈದ್ಯರು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಾರ್ಮಲ್ ಡೆಲಿವರಿ ಆಗದ ಕಾರಣ ವೈದ್ಯರು ಸಿಜೇರಿಯನ್ ಮಾಡಿದ್ದಾರೆ. ಆ ವೇಳೆಯೇ ಮಗು ಸಾವನ್ನಪಿದೆ. ಇದಾದ ಎರಡು ತಾಸುಗಳ ನಂತರ ಬಾಣಂತಿ ರೇಣುಕಾ ಸಹ ಸಾವನಪ್ಪಿದ್ದಾಳೆ, ವೈದ್ಯರು ರೇಣುಕಾ ಸಾವನ್ನಪ್ಪಿದ ನಂತರ ಬಂದು ಬಾಣಂತಿ ಸಾವನ್ನಪ್ಪಿದ್ದಾಳೆ, ಶವ ತೆಗೆದುಕೊಂಡು ಹೋಗಿ ಎಂದು ಹೇಳಿದರು. ನಿಖರ ಕಾರಣ ನೀಡಲಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದರು.
ಕುಷ್ಟಗಿಯಲ್ಲಿ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಸ್ಥಳೀಯವಾಗಿಯೇ ತಾಯಿ, ಮಗುವಿಗೆ ತೊಂದರೆ ಆಗುತ್ತಿರಲಿಲ್ಲ. ಆದರೆ ಅಲ್ಲಿಯ ವೈದ್ಯರು ಚಿಕಿತ್ಸೆ ನೀಡದೆ ಕೊಪ್ಪಳಕ್ಕೆ ಕಳುಹಿಸಿದರು. ಇಲ್ಲಿ ಬಂದರೆ ಇಲ್ಲಿನ ವೈದ್ಯರು ತಾಯಿ, ಮಗುವಿನ ಜೀವ ಉಳಿಸದೆ ನಿರ್ಲಕ್ಷ್ಯದಿಂದ ಬಾಣಂತಿ, ಮಗು ಸಾವಿಗೆ ಕಾರಣವಾಗಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಬಳ್ಳಾರಿ ಘಟನೆ ಮಾಸುವ ಮುನ್ನವೇ ಕೊಪ್ಪಳದಲ್ಲಿ ಮತ್ತೋರ್ವ ಬಾಣಂತಿ ಸಾವು!
ಬಡ ಕುಟುಂಬ:
2024ರ ಫೆಬ್ರವರಿ ತಿಂಗಳಿನಲ್ಲಿ ರೇಣುಕಾ ಹಾಗೂ ಆಡೂರಿನ ಪ್ರಕಾಶ ವಿವಾಹವಾಗಿತ್ತು. ಗರ್ಭಿಣಿಯಾಗಿದ್ದ ರೇಣುಕಾಳನ್ನು ತವರ ಮನೆಯಲ್ಲಿ ಬಿಟ್ಟು ಪ್ರಕಾಶ, ಆತನ ತಾಯಿ ಬೆಂಗಳೂರಿಗೆ ಕೆಲಸಕ್ಕೆ ಹೋಗಿದ್ದರು. ಮಗು ಹುಟ್ಟಿದ ಸಂತಸದ ಸುದ್ದಿ ಕೇಳಬೇಕಿದ್ದ ಬೆಂಗಳೂರಿನಲ್ಲಿದ್ದ ಪ್ರಕಾಶ ಹಿರೇಮನಿಗೆ ಹೆಂಡತಿ, ಮಗುವಿನ ಸಾವಿನ ಸುದ್ದಿ ನೋವು ತಂದಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.
ರೇಣುಕಾ ಸಿಜೇರಿಯನ್ ಆದ 2 ತಾಸಿಗೆ ಸಾವನ್ನಪ್ಪಿದ್ದಾಳೆ. ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ. ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಅಲ್ಲದೆ ಮಗುವನ್ನು ಸಹ ಉಳಿಸಿ ಕೊಳ್ಳಲಿಲ್ಲ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ: ದೇವಪ್ಪ ಗಾಳೆಪ್ಪ ಹರಿಜನ, ಬಸವರಾಜ ಹಿರೇಮನಿ ಮೃತ ಬಾಣಂತಿ ಸಂಬಂಧಿಕರು.